'ನಾನು ಆ ಜಾತಿ ಅಂತ ನನ್ನ ಚುನಾವಣೆಗೆ ಯಾರೂ ಕರೆಯಲ್ಲ; ಸ್ಟಾರ್ ನಟನಿಗೆ ಜಾತಿ ಕಂಟಕ

 | 
Jsjsj

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್‌ ರವಿಚಂದ್ರನ್‌ ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಪ್ರೇಮಲೋಕ 2 ಚಿತ್ರದ ಬಗ್ಗೆ ಸುಳಿವು ನೀಡಿ, ಆ ಚಿತ್ರದ ತಯಾರಿಯಲ್ಲಿದ್ದೇನೆ ಎಂದೂ ಹೇಳಿಕೊಂಡಿದ್ದರು. ಸಿನಿಮಾ ನಟನೆಯ ಜತೆಗೆ ಡ್ರಾಮಾ ಜೂನಿಯರ್ಸ್‌ ರಿಯಾಲಿಟಿ ಶೋದಲ್ಲೂ ತೀರ್ಪುಗಾರರಾಗಿದ್ದಾರೆ. ಸಿನಿಮಾದ ಜತೆಗೆ ಅನಿಸಿದ್ದನ್ನು ನೇರವಾಗಿ, ಮುಖಕ್ಕೆ ಹೊಡೆದಂತೆ ಹೇಳುತ್ತಾರೆ ರವಿಚಂದ್ರನ್.‌ 

ಇದೀಗ ಲೋಕಸಭಾ ಚುನಾವಣೆ ಘೋಷಣೆ ಆಗಿದೆ. ನೀವು ಪ್ರಚಾರ ಕಣಕ್ಕೆ ಇಳಿಯುತ್ತೀರಾ ಎಂಬ ಪ್ರಶ್ನೆಯೂ ಅವರ ಬಳಿ ತೇಲಿಬಂದಿದೆ. ಇದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರಿಸಿದ್ದಾರೆ ಕ್ರೇಜಿಸ್ಟಾರ್.‌ ಭಾರತದಲ್ಲೀಗ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಒಟ್ಟು ಏಳು ಹಂತಗಳಲ್ಲಿ ಈ ಸಲ ಚುನಾವಣೆಗಳು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. 

ಆ ಪೈಕಿ ಕರ್ನಾಟಕದಲ್ಲಿ ಈ ಸಲ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್‌ 26ರಂದು ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಮೇ 7ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಉತ್ತರ ಕರ್ನಾಟಕದ ಭಾಗದ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಜೂ. 04ರಂದು ಫಲಿತಾಂಶ ಹೊರಬೀಳಲಿದೆ. ಈಗ ಇದೇ ಚುನಾವಣೆ ಬಗ್ಗೆ ನಟ ರವಿಚಂದ್ರನ್‌ ಮಾತನಾಡಿದ್ದಾರೆ.


ಇತ್ತೀಚೆಗಷ್ಟೇ ತಪಸ್ಸಿ ಹೆಸರಿನ ಸಿನಿಮಾ ಮುಹೂರ್ತ ಮುಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರವಿಚಂದ್ರನ್‌ ನಟಿಸಲಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುತ್ತ, ರಾಜಕೀಯ ಪ್ರಚಾರದ ಬಗ್ಗೆಯೂ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಅದಕ್ಕೆ ಉತ್ತರಿಸಿದ ಅವರು, ಈ ವರೆಗೂ ನನಗೆ ಚುನಾವಣೆ ಪ್ರಚಾರಕ್ಕೆ ಯಾರೂ ಕರೆದಿಲ್ಲ. ನನಗನಿಸಿದ ಮಟ್ಟಿಗೆ ಅದಕ್ಕೆ ನನ್ನ ಜಾತಿ ಅಡ್ಡ ಬರಬಹುದು ಅಂತ ನನಗೆ ಅನಿಸುತ್ತೆ. 

ಅದು ನನಗೆ ಅಷ್ಟಾಗಿ ಗೊತ್ತಿಲ್ಲ. ಈ ನಡುವೆ ನನ್ನ ಆಪ್ತರು ಕರೆದರೆ, ಅತ್ತ ಕಡೆಯಿಂದ ಫೋನ್‌ ಬಂದರೆ, ನಾನು ಖಂಡಿತ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ ರವಿಚಂದ್ರನ್.‌ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.