ಕಾರ್ತಿಕ್ ಗಂಡ್ಸೇ ಅಲ್ಲ ಎಂದ ವಿನಯ್, ಯಾಕೆ ಏನಾಯಿತು ಗೊತ್ತಾ

 | 
Hg

ಬಿಗ್ ಬಾಸ್ ಮನೆಯ  ಆಟ ಈಗ ರೋಚಕ ತಿರುವುಗಳನ್ನ ಪಡೆದುಕೊಂಡಿದೆ. ಸದಾ ಒಂದಲ್ಲಾ ಒಂದು ವಿಚಾರಕ್ಕೆ ಕಿರಿಕ್ ಮಾಡುತ್ತಲೇ ಇದ್ದಾರೆ ವಿನಯ್. ಈಗ ಕಾರ್ತಿಕ್‌ಗೆ ಬಳೆಗಳ ರಾಜ ಎಂದು ವಿನಯ್ ಟಾಂಗ್ ಕೊಟ್ಟಿದ್ದಾರೆ. ಅವರ ಈ ನಡೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ನಾಮೀನೇಟ್ ಮಾಡಿದ್ರು ಎಂಬ ಕಾರಣಕ್ಕೆ ಕಾರ್ತಿಕ್ ವಿರುದ್ಧ ವಿನಯ್ ಕಿಡಿಕಾರಿದ್ದಾರೆ. ನನ್ನ ಹೆಂಡ್ತಿಗೆ ಹೇಳಿ ಕಾರ್ತಿಕ್‌ಗೆ ಬಳೆ ಕೊಡಿಸಬೇಕು ಅಂತ ವಿನಯ್ ಗೌಡ ಅವರು ಈಶಾನಿ, ಮೈಕಲ್ ಮುಂದೆ ಹೇಳಿದ್ದರು.ಗಂಡಸು ತರಹ ಆಡು.. ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡೋದಲ್ಲ. ಬಾರೋ.. ಬಾ… ಬಾರೋ.. ಏಯ್ ಗಂಡಸು ಬಾ.. ದೊಡ್ಡ ಗಂಡಸು ನನ್ಮಗನೇ.. ನಾನೇ ಬಳೆ ಹಾಕೊಂಡಿರೋದು. ಎಂದೆಲ್ಲ ಹೇಳಿದ್ದಾರೆ.

ಸಂಗೀತಾ, ತನಿಷಾ ಕುಪ್ಪಂಡ, ನಮ್ರತಾ ಗೌಡ ಜೊತೆ ಕಾರ್ತಿಕ್ ಆತ್ಮೀಯತೆಯಿಂದ ಇದ್ದಾರೆ. ಸಂಗೀತಾ ಜೊತೆ ಕಾರ್ತಿಕ್ ಸಮಯ ಕಳೆಯುತ್ತಿರೋದರಿಂದ ವಿನಯ್ ಗೌಡ ಅವರು ಪದೇ ಪದೇ ಬಳೆ ಎನ್ನುವ ಪದವನ್ನು ಬಳಸುತ್ತಿದ್ದಾರೆ. ಇದರ ಬಗ್ಗೆ ವಿನಯ್ ಅವರೇ ಉತ್ತರ ಕೊಡಬೇಕಿದೆ. 

ಪದೇ ಪದೇ ಪ್ರತಾಪ್- ಕಾರ್ತಿಕ್‌ಗೆ ಹೀಗೆ ವಿನಯ್ ಟೀಕೆ ಮಾಡ್ತಿರೋದು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಅವರ ಈ ನಡೆಯನ್ನ ಅನೇಕರು ಖಂಡಿಸುತ್ತಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ವಿನಯ್ ಮ್ಯಾಟರ್‌ಗೆ ಸುದೀಪ್ ಅದ್ಯಾವಾಗ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅಂತ ಕಾಯ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.