ಒಡಿಶಾ ಭೀಕರ ರೈಲು ಅಪಘಾತ, ಬೆಂಗಳೂರು ಹುಡುಗ ಬಚಾವಾದ ಸ್ಟೋರಿ ಕೇಳಿದ್ರೆ ಮೈಜುಮ್ಮನ್ನುತ್ತೆ

 | 
Hs

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತವನ್ನು ಕಣ್ಣಾರೆ ಕಂಡ ಕುದುರೆಮುಖದ ಸಂತೋಷ್​ ಎಂಬುವರು ಈ ಬಗ್ಗೆ ವಿಡಿಯೊ ಮಾಡಿ, ಮಾಹಿತಿ ನೀಡಿದ್ದಾರೆ. ಅಪಘಾತದ ನಡೆದ ಸಂದರ್ಭದಲ್ಲಿ ಬೆಂಗಳೂರು-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ.

ಅದರಲ್ಲಿ ತಾವಿದ್ದಲ್ಲಿಂದಲೇ ಸಂತೋಷ್ ಎಂಬುವರು ವಿಡಿಯೊ ಮೂಲಕ ಮಾತನಾಡಿ ‘ನಾವು ಶಿಕರ್ಜಿ ಯಾತ್ರೆಗೆ ಹೊರಟಿದ್ದೆವು. ನಾವಿದ್ದ ಬೆಂಗಳೂರು-ಹೌರಾ ರೈಲು ಒಡಿಶಾ ಗಡಿ ಪಾಸ್​ ಆಗಿ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಪ್ರಯಾಣವೂ ಚೆನ್ನಾಗಿಯೇ ಆಗುತ್ತಿತ್ತು. ಆದರೆ ರಾತ್ರಿ 8.30ರ ಹೊತ್ತಿಗೆ ರೈಲು ಒಮ್ಮೆಲೇ ನಿಂತುಬಿಡ್ತು. ಬಸ್​ ಅಪಘಾತವಾದಾಗಲೆಲ್ಲ ಹೇಗೆ ಶಬ್ದ ಬರುತ್ತದೆಯೋ, ಹಾಗೇ ಶಬ್ದ ಬಂತು ಎಂದು ಹೇಳಿದ್ದಾರೆ.

ಡಿಕ್ಕಿಯ ರಭಸಕ್ಕೆ ನಮ್ಮ ರೈಲಿನ ಕೆಲವು ಬೋಗಿಗಳು ಉರುಳಿಬಿದ್ದಿದ್ದವು. ಅವುಗಳಲ್ಲಿ ಇದ್ದವರಿಗೆ ಗಾಯವಾಗಿತ್ತು. ಕೆಲವು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲಿದ್ದ ಸ್ಥಳೀಯರು, ಜನರೆಲ್ಲ ಸಹಾಯಕ್ಕೆ ಬಂದರು. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಲ್ಲಿನ ಡಿಸಿ, ಅಧಿಕಾರಿಗಳು ಬಂದು ನಮ್ಮನ್ನೆಲ್ಲ ವಿಚಾರಿಸಿದರು. ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಮಾಹಿತಿ ಪಡೆದು, ರಾತ್ರಿ 12ರ ಹೊತ್ತಿಗೆ ಕೋಲ್ಕತ್ತಕ್ಕೆ ರೈಲಿನ ವೈವಸ್ಥೆ ಮಾಡಿಸಿಕೊಟ್ಟರು. ನಾವೆಲ್ಲರೂ ಸೇಫ್​ ಆಗಿದ್ದು, ಯಾತ್ರೆ ಮುಗಿಸಿ, ದೇವರ ದರ್ಶನ ಪಡೆದೇ ಬರುತ್ತೇವೆ ಎಂದು ಹೇಳಿದ್ದಾರೆ.ಇನ್ನು ಯಶವಂತ ಹೌರಾ ಎಕ್ಸ್​ಪ್ರೆಸ್​ನಲ್ಲಿ 110 ಜನ ಕನ್ನಡಿಗರು ಕೂಡ ಪ್ರಯಾಣಿಸಿದ್ದು, ಸುರಕ್ಷಿತವಾಗಿದ್ದಾರೆ.

ಏಕಾಏಕಿ ಅಪಘಾತ ಸಂಭವಿಸಿದ್ದು, ನಮಗೆ ಏನಾಯ್ತು ಎಂದು ತಿಳಿಯುವಷ್ಟರಲ್ಲಿ ಚೀರಾಟ, ಅಳು ಕೇಳಿಸುತ್ತಿತ್ತು…ರೈಲಿನ ಬೋಗಿಯಿಂದ ಕೆಳಗಿಳಿದು ಬಂದು ನೋಡಿದಾಗ ರೈಲ್ವೆ ಹಳಿಯ ತುಂಬಾ ರಕ್ತದೋಕುಳಿ ಹರಿಯುತ್ತಿತ್ತು..ಸುಮಾರು 200ಕ್ಕೂ ಅಧಿಕ ಶವಗಳು ಕೈ-ಕಾಲು ತುಂಡಾಗಿ ಬಿದ್ದಿದ್ದು…ಈ ಭಯಾನಕ ದೃಶ್ಯವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಸಂತೋಷ್ ತಿಳಿಸಿದ್ದಾರೆ.

ಪವಾಡಸದೃಶವಾಗಿ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಬಹುಶಃ ಇದೊಂದು ಅತೀ ದೊಡ್ಡ ರೈಲ್ವೆ ದುರಂತಗಳಲ್ಲಿ ಒಂದಾಗಿದೆ ಎಂದು ಸಂತೋಷ್ ಹೇಳಿಕೊಂಡಿದ್ದಾರೆ.


 

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.