ಹಿಂದೂತ್ವ ಎನ್ನುತ್ತಾ ಕೋಟಿ ಕೋಟಿ ಲೂಟಿ ಮಾಡುವ ರಾಜಕಾರಣಿಗಳು, ಯೋಗಿಜಿಯನ್ನು ನೋಡಿ ಕಲಿಯಬೇಕು

 | 
Hhh

ಉತ್ತರ ಪ್ರದೇಶದ ಅತ್ಯಂತ ಪವರ್‌ ಪುಲ್‌ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ಯೋಗಿ ಆದಿತ್ಯನಾಥ್‌ ತಂಗಿಯಾಗಿರುವಂತ ಶಶಿದೇವಿ. ಒಂದು ರಾಜ್ಯದ ಮುಖ್ಯಮಂತ್ರಿಯ ತಂಗಿ ರಸ್ತೆಯ ಬದಿಯಲ್ಲಿ ಹೂವು ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆಂದರೆ ಯಾರಿಗೂ ಕೂಡ ನಂಬಲು ಸಾಧ್ಯವಾಗುವುದಿಲ್ಲ. ನಮ್ಮ ರಾಜ್ಯವು ಸೇರಿ ಹಲವಾರು ರಾಜ್ಯಗಳಲ್ಲಿ ಕುಟುಂಬ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಗಮನಿಸುತ್ತಿರುತ್ತೇವೆ. 

ಆದರೆ ಇಲ್ಲೊಬ್ಬ ಸ್ವಾಭಿಮಾನಿ ಮುಖ್ಯಮಂತ್ರಿ ತಂಗಿ ಅವರಪಾಡಿಗೆ ಅವರು ಹೂವಿನ ವ್ಯಾಪಾರ ಮಾಡಿ ಜೀವನ ನೆಡೆಸುತ್ತಿದ್ದಾರೆ ಎಂದರೆ ಒಂದು ಕ್ಷಣ ನಂಬಲು ಕೂಡ ಕಷ್ಟವಾಗುತ್ತದೆ. ಹೌದು ಯೋಗಿ ಆದಿತ್ಯ ನಾಥ್‌ ಮೂಲ ಹೆಸರು ಅಜಯ್‌ ಮೋಹನ್‌ ಸಿಂಗ್‌ ಬಿಶ್ತ್. ಉತ್ತರಾಖಂಡದ ಫೌರಿಘರವಾಲ್‌ ನ ಪಹಾಂಚೂರ್‌ ಭಾಗದಲ್ಲಿ. ತಂದೆ ಆನಂದ ಸಿಂಗ್‌. ಅವರು ಫಾರೆಸ್ಟ್‌ ರೇಂಜರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತಕ್ಕಮಟ್ಟಿಗೆ ಚೆನ್ನಾಗಿದ್ದಂತಹ ಕುಟುಂಬ. ಯೋಗಿ ಆದಿತ್ಯನಾಥ ಅವರ ಕುಟುಂಬವನ್ನು ಗಮನಿಸುತ್ತಾ ಹೋಗುವುದಾದರೆ ಒಟ್ಟು 7 ಜನ ಮಕ್ಕಳು 4 ಗಂಡು ಮಕ್ಕಳು ಹಾಗೂ 3 ಹೆಣ್ಣುಮಕ್ಕಳು ಇರುತ್ತಾರೆ. 

ಅದರಲ್ಲಿ ಯೋಗಿ ಆದಿತ್ಯನಾಥ್‌ 2ನೆಯವರು. ಅವರು ಡಿಗ್ರಿ ಓದಿ ಕಂಪ್ಲೀಟ್‌ ಆದ ನಂತರ ಊರನ್ನು ಸಂಪೂರ್ಣವಾಗಿ ಬಿಟ್ಟು ಹೋಗುತ್ತಾರೆ. ಸನ್ಯಾಸಿ ಆಗಬೇಕು ಅಥವಾ ಬೇರೆ ರೀತಿಯಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಮನೆಬಿಟ್ಟು ಹೊರಟು ಹೋಗುತ್ತಾರೆ. ಅವರು ಆರಂಭ ದಿನಗಳಲ್ಲಿ ಅಯೋಧ್ಯ ರಾಮ ಮಂದಿರದ ಚಳುವಳಿ ನಡೆಯುತ್ತಿರುತ್ತದೆ. ಅದರಲ್ಲಿ ತಮ್ಮನ್ನ ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದಾದ ಬಳಿಕ ಆ ಭಾಗದಲ್ಲಿ ಅತ್ಯಂತ ಪವರ್‌ ಪುಲ್‌ ಎಂದು ಕರೆಸಿಕೊಳ್ಳುವ ಘೋರಕನಾಥ ಮಠಕ್ಕೆ ಸೇರ್ಪಡೆಯಾಗುತ್ತಾರೆ. 

ಅದಾದ ಬಳಿಕ ಮುಖ್ಯಸ್ಥರಾಗುತ್ತಾರೆ. ಮುಂಚೆ ಇದ್ದ ಮುಖ್ಯಸ್ಥರು ವಿಧಿವಶರಾದ ನಂತರ ಯೋಗಿ ಆದಿತ್ಯ ನಾಥ ಮುಖ್ಯಸ್ಥರಾಗುತ್ತಾರೆ. ಘೋರಕನಾಥ ಮಠದ ಮುಖ್ಯಸ್ಥರು ಬಹಳ ಗೌರವ ಅಭಿಮಾನ ಪ್ರೀತಿ ಆ ಭಾಗದ ಜನರಿಗಿರುತ್ತದೆ. ಘೋರಕನಾಥ ಪುರದಿಂದ ನಿರಂತರವಾಗಿ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿ ಬರುತ್ತಾರೆ. 26 ವರ್ಷಕ್ಕೆ ಸಂಸದರಾಗಿರುತ್ತಾರೆ. 2 ಅವಧಿಯಲ್ಲಿ ಉತ್ತರ ಪ್ರದೇಶದ ಸಿ ಎಂ ಆಗುತ್ತಾರೆ. ಯೋಗಿ ಆದಿತ್ಯನಾಥ್‌ ತಮ್ಮ ಕುಟುಂಬವನ್ನು ಚಿಕ್ಕ ವಯಸ್ಸಿನಲ್ಲಿ ಬಿಟ್ಟು ಹೋಗಿಬಿಡುತ್ತಾರೆ. ಅವರು ಅನಂತರ ಸಿಎಂ ಆದರೂ ಸಹ ಕುಟುಂಬದ ಸಂಪರ್ಕಕ್ಕೆ ಬಂದಿರುವುದಿಲ್ಲ. 

ಕುಟುಂಬದವರಿಗೆ ಸಹಾಯ ಮಾಡುವುದಾಗಲಿ ಅಥವಾ ಅವರಿಗೆ ಐಷರಾಮಿ ಜೀವನ ಸಾಗಿಸಲು ಸಹಕರಿಸುವುದಾಗಲಿ ಮಾಡುವುದಿಲ್ಲ. ತನ್ನ ಅಧಿಕಾರವನ್ನು ಬಳಸಿಕೊಂಡು ಅವರಿಗೆ ಸಹಾಯ ಮಾಡುವುದಿಲ್ಲ. ಅವರ ಕುಟುಂಬದಲ್ಲಿ ಅವರ ಅಣ್ಣ ತಂಗಿಯರು ತಕ್ಕ ಮಟ್ಟಿಗೆ ಚೆನ್ನಾಗಿದ್ದಾರೆ. ಆದರೆ ಕೊನೆಯ ತಂಗಿಯಾದ ಶಶಿದೇವಿ ಈಗಲೂ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ಸಾಗಿಸತ್ತಿದ್ದಾರೆ.
ಶಶಿ ದೇವಿಯನ್ನು ಮದುವೆ ಮಾಡಿಕೊಟ್ಟ ನಂತರ ಉತ್ತರಾಖಂಡದ ಋಷಿಕೇಷದಿಂದ 30 ಕಿಲೋ ಮೀಟರ್‌ ದೂರದಲ್ಲಿರುವ ಒಂದು ಚಿಕ್ಕ ಹಳ್ಳಿಯಲ್ಲಿ ಪಾರ್ವತಿ ದೇವಿ ಮಂದಿರ ಇದೆ. ಆ ಮಂದಿರಕ್ಕೆ ನೂರಾರು ಭಕ್ತರು ಬರುತ್ತಾರೆ. ಆಭಕ್ತರನ್ನು ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಪಾರ್ವತಿ ದೇವಿ ಮಂದಿರದಿಂದ ಸ್ವಲ್ಪ ಮುಂದೆ ಚಿಕ್ಕ ಗೂಡು ಅಂಗಡಿಯನ್ನು ಹಾಕಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.