ಯೂನಿಫಾರ್ಮ್ ಹಾಕದೆ ಬೆಳ್ತಂಗಡಿ ಶಾಸಕನ ಮುಂದೆ ನಿಂತ ಸರ್ಕಾರಿ ಅಧಿಕಾರಿ, ರೊಚ್ಚಿಗೆದ್ದು ಹಿಗ್ಗಾಮುಗ್ಗಾ ಬೈದ ಪೂಂಜಾ

ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿದ ಹಿನ್ನಲೆ ಅರಣ್ಯ ಇಲಾಖೆಯು ಫೌಂಡೇಶನ್ ಸಮೇತ ಮನೆಯನ್ನ ಧ್ವಂಸಗೊಳಿಸಿದೆ. ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ದೌಡಾಯಿಸಿದ್ದು ಮನೆ ಕಟ್ಟಿದವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಮನೆ ಧ್ವಂಸಗೊಳಿಸಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು ಅರಣ್ಯ ಸಚಿವರಿಗೆ ಕರೆ ಮಾಡಿ ಗುಡುಗಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಇನ್ನು ಯೂನಿಫಾರ್ಮ್ ಹಾಕದ ಆರ್ಎಫ್ಓ ವಿರುದ್ದವೂ ಪೂಂಜ ಗರಂ ಆದರು. ಸ್ಪಾಟ್ಗೆ ಯೂನಿಫಾರ್ಮ್ ಹಾಕ್ದೆ ಹೇಗ್ ಬಂದ್ರಿ. ಮದುವೆ ಮನೆಗೆ ಬಂದಿರೋದೇನ್ರಿ ಎಂದು ಅಧಿಕಾರಿ ವಿರುದ್ಧ ಹೌಹಾರಿದರು. ಯುನಿಫಾರ್ಮ್ ಹಾಕಿಲ್ಲ ಸಸ್ಪೆಂಡ್ ಮಾಡಿ ಎಂದು ಎಸಿಎಫ್ಗೆ ಆಗ್ರಹಿಸಿದರು. ಸ್ಥಳದಿಂದಲೇ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಶಾಸಕ ಹರೀಶ್ ಪೂಂಜಾ ಫೋನ್ ಮಾಡಿದರು.
ಯಥಾ ಸ್ಥಿತಿ ಕಾಪಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು. ಹಿರಿಯ ಅಧಿಕಾರಿಗಳ ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಹರೀಶ್ ಪೂಂಜ, 150 ವರ್ಷದಿಂದ ಇಲ್ಲಿ ಸುಮಾರು 250 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಮನೆ ಅಡಿ ಸ್ಥಳದ ಹಕ್ಕು ಪತ್ರ ನೀಡಬೇಕು ಎಂದು ಇಲ್ಲಿನ ನಿವಾಸಿಗಳ ಆಗ್ರಹವಿತ್ತು.
ಅರಣ್ಯ ಇಲಾಖೆಯ ಅಡ್ಡಿಯಿಂದ ಹಕ್ಕು ಪತ್ರ ನೀಡಲು ಸಾಧ್ಯವಾಗಿರಲಿಲ್ಲ. 6500 ಎಕ್ರೆಗೂ ಹೆಚ್ಚಿನ ಪ್ರದೇಶವನ್ನು ಅರಣ್ಯ ಇಲಾಖೆ ಎಂದು ಗುರುತು ಮಾಡಿ. ಅರಣ್ಯ ಇಲಾಖೆಗೆ ಸೇರಿಸುವಂತಹ ವ್ಯವಸ್ಥಿತ ಷಡ್ಯಂತ್ರ ಮಾಡಿದ್ರು. ಹೊಸ ಮನೆ ಕಟ್ಟಿಸಬೇಕು ಎಂದವರಿಗೆ ಕಿರುಕುಳ ನೀಡುತ್ತಿದ್ದಾರೆ. ಇಲ್ಲಿರುವ ದೇವಣ್ಣ ಎಂಬುವವರ ಮನೆಯನ್ನ ಧ್ವಂಸ ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ, ಬಡವರಿಗೆ ತೊಂದರೆ ಕೊಡಬೇಡಿ.
ಪೂರ್ತಿ ಮನೆಯನ್ನ ಧ್ವಂಸ ಮಾಡಿದ್ದಾರೆ. ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಲಿ. ಈ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲ್ಲವೆನ್ನುವ ಭರವಸೆ ಇದೆ. ಗಡಿ ಗುರುತು ಮಾಡಿ ಇವರಿಗೆ ಬೇರೆಯೇ ಜಾಗವನ್ನ ಬಿಟ್ಟುಕೊಡಿ. ಹಕ್ಕು ಪತ್ರವನ್ನ ನೀಡಲು NOC ಯನ್ನು ಅರಣ್ಯ ಇಲಾಖೆಯೇ ನೀಡಬೇಕು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.