ಕರುನಾಡ ನೆಚ್ಚಿನ ಆಂಕರ್ ಜೊತೆ ಪ್ರಜ್ವಲ್ ರೇವಣ್ಣ; ಲೀ.ಕ್

 | 
ು
ಇದೀಗ ಎಲ್ಲೆಡೆಯೂ ಚುನಾವಣೆಯ ಮಾತುಗಳೇ ಕೇಳಿಬರ್ತಿದೆ. ಈ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮೊಮ್ಮಗ, ಹೆಚ್​ಡಿ ರೇವಣ್ಣ ಪುತ್ರ ಜೆಡಿಎಸ್​ ನಾಯಕ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಆಗಿದೆ.  ರಾಜ್ಯದೆಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ಪ್ರಜ್ವಲ್​ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. 
ಸಿನಿಮಾ ನಟಿ ಪೂನಂ ಕೌರ್ ಸೋಶಿಯಲ್ ಮೀಡಿಯಾದಲ್ಲಿ ಪ್ರಜಲ್ವ್​ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅಶ್ಲೀಲ ವಿಡಿಯೋ ಮಾಡುವಂತೆ ಒತ್ತಾಯಿಸಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ದೌರ್ಜನ್ಯದ ವಿರುದ್ಧ ಪೂನಂ ಕೌರ್ ಕಿಡಿಕಾರಿದ್ದಾರೆ. 
ಇಂತಹ ದುಷ್ಟರಿಗೆ ಮತ ಹಾಕಿದ್ರೆ ದೇಶದಲ್ಲಿ ಹೆಣ್ಣು ಮಗುವಿಗೆ ರಕ್ಷಣೆ ಎಲ್ಲಿರುತ್ತೆ? ನ್ಯಾಯ ಸಿಗುವುದಿಲ್ಲ ಎಂದು ನಟಿ ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದ್ರೆ ಹೆಣ್ಣಿಗೆ ಎಲ್ಲಿದೆ ರಕ್ಷಣೆ ಎನ್ನುವ ಪ್ರಶ್ನೆ ಎದ್ದಿದೆ. ಸಚಿವರ ಮಗ ಹುಡುಗಿಯ ಫೋನ್ ಕದ್ದಾಲಿಕೆ ಮಾಡಿದ್ದಾನೆ.
ಮತ್ತೊಬ್ಬ ಸಚಿವರ ಮಗ ಅಂಕಿತಾ ಎಂಬ ಹುಡುಗಿಯನ್ನು ಬೆಟ್ಟದಿಂದ ತಳ್ಳಿದ. ಮತ್ತೊಬ್ಬ ಹುಡುಗಿಗೆ ಸಚಿವರ ಮಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಮತ್ತೊಬ್ಬ ಸಚಿವ ಬಾಲಕಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿ ಪರಾರಿಯಾಗಿದ್ದಾನೆ. ಇದೀಗ ಮಾಜಿ ಸಚಿವರ ಮಗನ ಅಶ್ಲೀಲ ವಿಡಿಯೋ, ರಾಜಕಾರಣಿಗಳ ಮಕ್ಕಳ ದೌರ್ಜನ್ಯದ ಬಗ್ಗೆ ಪೂನಂ ಕೌರ್ ಕಿಡಿಕಾರಿದ್ದಾರೆ.