ಯಶ್ ಬಳಿ ಎಷ್ಟು ಕೋಟಿ ಹಣವಿದೆ ಅಂತ ರಾಧಿಕಾ ಪಂಡಿತ್ ಇದುವರೆಗೆ ಕೇಳಿಲ್ಲವಂತೆ
Oct 24, 2024, 22:21 IST
|

ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪತ್ನಿ ಬಗ್ಗೆಯೂ ಮಾತನಾಡಿದ್ದಾರೆ. ಅವರು ನನ್ನ ಶಕ್ತಿ ಎಂದು ಯಶ್ ಅವರು ಹೇಳಿದ್ದಾರೆ.ರಾಧಿಕಾ ಸಿಕ್ಕಿದ್ದು ನನ್ನ ಅದೃಷ್ಟ. ಅವಳು ಯಾವಾಗಲೂ ನನ್ನ ಬೆಂಬಲಿಸಿದ್ದಾಳೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ.
ಇಬ್ಬರೂ ಒಟ್ಟಾಗಿ ಬೆಳೆದವರು. ನಾವಿಬ್ಬರೂ ಗೆಳೆಯರಾಗಿ ಪರಿಚಯ ಆದವರು. ನಂತರ ಮದುವೆ ಆದೆವು. ನಾನು ಏನು ಎಂಜಾಯ್ ಮಾಡುತ್ತೇನೆ ಅನ್ನೋದು ಫ್ರೆಂಡ್ ಆಗಿ ಅವಳಿಗೆ ಗೊತ್ತು. ಈ ಚಿತ್ರದಿಂದ ಏನು ಸಿಗುತ್ತದೆ? ಎಷ್ಟು ಹಣ ಸಿಗುತ್ತದೆ ಎಂದು ಯಾವಾಗಲೂ ಕೇಳಿಲ್ಲ. ಇದು ಒಳ್ಳೆಯ ಆಯ್ಕೆಯೇ ಅಥವಾ ಕೆಟ್ಟ ಆಯ್ಕೆಯೇ ಎಂದು ಕೇಳಿಲ್ಲ. ನೀನು ಖುಷಿಯಾಗಿದ್ದೀಯಾ ಎಂದಷ್ಟೇ ಕೇಳುತ್ತಾಳೆ. ಅವಳು ಅಟೆಷನ್ಷನ್ ಹಾಗೂ ಸಮಯವನ್ನು ಮಾತ್ರ ಕೇಳುತ್ತಾಳೆ ಎಂದಿದ್ದಾರೆ ಯಶ್.
ರಾಧಿಕಾ ಪಂಡಿತ್ ಹಾಗೂ ಯಶ್ ಧಾರಾವಾಹಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಹಿರಿತೆರೆಗೆ ಒಟ್ಟಾಗಿ ಕಾಲಿಟ್ಟರು. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರು 2016ರ ಡಿಸೆಂಬರ್ 6ರಂದು ವಿವಾಹ ಆದರು. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಇಬ್ಬರೂ ಮತ್ತೊಮ್ಮೆ ತೆರೆಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025