ಹುಡುಗಿ ವೇಶ ಹಾಕಿ ಕೋಟಿ ಬೆಲೆಯ ಮನೆ ನಿರ್ಮಾಣ ಮಾಡಿದ ಗಿಚ್ಚಿಗಿಲಿಗಿಲಿ ರಾಘು

 | 
Nx
ರಾಗಿಣಿ ಅಲಿಯಾಸ್‌ ರಾಘವೇಂದ್ರ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ಸಖತ್‌ ಫೇಮಸ್‌ ಆದವರು. ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಎಲ್ಲರನ್ನೂ ಎಂಟರ್‌ಟೈನ್‌ ಮಾಡಿದ್ದ ರಾಘು ತಮ್ಮ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಸದ್ಯ ಮಜಾ ಟಾಕೀಸ್‌ನಲ್ಲಿ ಮೋಡಿ ಮಾಡುತ್ತಿರುವ ರಾಘು, ತಮ್ಮ ಕನಸಿನಂತೆ ಮನೆಯನ್ನು ಕಟ್ಟಿಸಿದ್ದಾರೆ. ಈ ಮನೆಗೆ ರಾಯರ ನೆರಳು ಅಂತ ಹೆಸರನ್ನು ಇಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರವಾಳ ಗ್ರಾಮದಲ್ಲಿ ರಾಘವೇಂದ್ರ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಅಂದಹಾಗೆ ಈ ಮನೆಯ ಗೃಹಪ್ರವೇಶ 2023ರಲ್ಲಿಯೇ ಅದ್ದೂರಿಯಾಗಿ ನೆರವೇರಿದೆ. ಈ ಕುರಿತ ವಿಡಿಯೋ ಝಲಕ್‌ ಅನ್ನು ರಾಘವೇಂದ್ರ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಯೆಸ್..‌ ತಮ್ಮ ಕನಸಿನ ಮನೆಯ ಗೃಹಪ್ರವೇಶವನ್ನು ರಾಘು 2023ರಲ್ಲಿಯೇ ನೆರವೇರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಇದೀಗ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ನಮಸ್ಕಾರ ನನ್ನ ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು. ಎಲ್ಲರಿಗೂ ಒಂದು ಸೂರು ಇರಬೇಕು ಆ ಸೂರಿನಲ್ಲಿ ನಗು ನಗುತ್ತಾ ಇರಬೇಕು ಅಂತ ತುಂಬಾ ಆಸೆ ಇರುತ್ತದೆ. ಹೈಫೈ ಆಗಿಲ್ಲವಾದ್ರೂ ಒಂದೊಳ್ಳೆ ಚಿಕ್ಕ ಮನೆ ಇರಬೇಕು ಅನ್ನೋದೇ ಎಲ್ಲರ ಕನಸು. ನನಗೆ ಯಾವತ್ತೂ ಹೀಗೆ ಅನಿಸಿರಲಿಲ್ಲ ಯಾಕಂದ್ರೆ ನಾವು ಹುಟ್ಟಿದಾಗಿನಿಂದಲೂ ನಮ್ಮದೊಂದು ಒಳ್ಳೆಯ ಮನೆಯಲ್ಲಿ ಇದ್ದೆವು ಎಂದಿದ್ದಾರೆ ರಾಘವೇಂದ್ರ.
ಮಧ್ಯದಲ್ಲಿ ಕಾರಣಾಂತರಗಳಿಂದ ಆ ಮನೆಯಿಂದ ಬಾಡಿಗೆ ಮನೆಗೆ ಬಂದೆವು. ಅಲ್ಲಿಂದ ಒಂದು ಜಾಗ ಖರೀದಿ ಮಾಡಿದ್ದೆವು. ಈಗ ನಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದೇವೆ .ಮನೆ ಕಟ್ಟುವುದು ತುಂಬಾ ಕಷ್ಟ. ಅದರಲ್ಲೂ ನಮಗೆ ಹೇಗೆ ಬೇಕೋ ಹಾಗೆ ಕಟ್ಟುವುದು ಇನ್ನೂ ಕಷ್ಟ. ಕಷ್ಟ ಪಟ್ಟರೆ ಆಗುತ್ತದೆ ಈಗ ಅದು ಆಗಿದೆ. ನನ್ನ ತಂದೆ ತಾಯಿ ಕಷ್ಟಪಟ್ಟು ಇಷ್ಟು ವರ್ಷಗಳ ಹೋರಾಟಕ್ಕೆ ಸಿಕ್ಕಿರುವ ಪ್ರತಿಫಲ ಇದು ಎಂದು ಸಂತಸ ಹಂಚಿಕೊಂಡಿದ್ದಾರೆ ರಾಘು. 
ರಾಘವೇಂದ್ರ ಅವರ ಮನೆಯ ಗೃಹಪ್ರವೇಶದಲ್ಲಿ ಶುಭ ಪೂಂಜಾ ಮತ್ತು ಅವರ ಪತಿ ಸುಮಂತ್‌, ಮಾನಸ, ಮಂಜು ಪಾವಗಡ ಸೇರಿದಂತೆ ಅನೇಕರು ಸಂಭ್ರಮದಲ್ಲಿ ಭಾಗಿಯಾಗಿ ಗೆಳೆಯನಿಗೆ ಶುಭ ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub