ಹೆಂಡತಿ ಶವದ ಮುಂದೆ ಕೈಮುಗಿದ ರಾಘು, ದಯವಿಟ್ಟು ಬಿಟ್ಟು ಹೋಗಬೇಡ ಎಂದು ಕೂಗಾಟ

 | 
ರರಪ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಅವರ ಮುದ್ದಿನ ಮಡದಿ ಮೊನ್ನೆಯಷ್ಟೆ ಬ್ಯಾಂಕಾಕ್ ನಲ್ಲಿ ಹೃದಯಾಘಾತಕ್ಕೆ‌ ಇಹಲೋಕ ತ್ಯಜಿಸಿದ್ದಾರೆ. ಹೌದು, ವಿಪರೀತ ಎದೆನೋವು ಕಾಣಿಸಿಕೊಂಡ ಪರಿಣಾಮ ರಾಘ ಪತ್ನಿ ಸ್ಪಂದನಾ ಕೊನೆಯುಸಿರೆಳೆದರು. 

ಇನ್ನು ಬ್ಯಾಂಕಾಕ್ ನಲ್ಲಿ ಪತ್ನಿ ಜೊತೆಗಿದ್ದ ರಾಘು ತೀರಾ ಆಘಾತಗೊಂಡಿದ್ದರು. ಪತ್ನಿ ಇನ್ನಿಲ್ಲ‌ ಎಂಬ ವಿಚಾರ ತಿಳಿದು ಕಂಗಾಲಾಗಿದ್ದರು ವಿಜಯ್ ರಾಘವೇಂದ್ರ. ಇನ್ನು ನಿನ್ನೆ ತಡರಾತ್ರಿ ವಿಜಯ್ ರಾಘವೇಂದ್ರ ನಿವಾಸಕ್ಕೆ ಸ್ಪಂದನಾ ಅವರ ಮೃತ ದೇಹ ತರಲಾಗಿದೆ. ರಾಘ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ‌ ನೆರೆದಿದ್ದರು. 

ಪತ್ನಿ ಸ್ಪಂದನಾ ಅವರ ಮೃತ ದೇಹ ಮನೆಗೆ ತಲುಪುತ್ತಿದ್ದಂತೆ ಸಾಕಷ್ಟು ಜನ ಕಣ್ಣೀರು ಹಾಕಿದ್ದಾರೆ. ರಾಘು ಪುತ್ರ ಶೌರ್ಯ ಕೂಡ ತಾಯಿಯ ಮುಖ ನೋಡಿ ನೋವಿನಿಂದ ಮೌನವಾಗಿ ಕೂತಿದ್ದರು. ಇನ್ನು ಸ್ಪಂದನಾ ಮೃತ ದೇಹಕ್ಕೆ ವಿಜಯ್ ರಾಘವೇಂದ್ರ ಅವರು ಕೈ ಮುಗಿಯುವ ವಿಡಿಯೋ ಕೂಡ ಕಾಣಬಹುದು. ನೆಚ್ಚಿನ ಮಡದಿಗೆ ಕೊನೆಯ ಅರ್ಪಣೆ ನೀಡುತ್ತಿದ್ದಾರೆ ರಾಘು. 

ಸ್ಪಂದನಾ ಅವರು ಇನ್ನಿಲ್ಲ‌ ಎಂಬ ಕೂಗು ರಾಘು ಮುಖದಲ್ಲಿ ‌ಕಾಡುತ್ತಿದೆ. ಇಷ್ಟು ವರ್ಷಗಳ ಕಾಲ ಜೊತೆಗಿದ್ದ ಜೀವ ಒಮ್ಮೆಲೆ ಬಿಟ್ಟು ಹೋದಾಗ ರಾಘು ಪರಿಸ್ಥಿತಿ ಚಿಂತಾಜನಕವಾಗಿ ಕಾಣುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.