ರಾಜಾಹುಲಿ‌ ಸಿನಿಮಾದ ನಟ ಕಾಮುಕ, ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಸೀರಿಯಲ್ ನಟಿ ತನಿಶಾ

 | 
ಲಿ

ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆ ಎಂದು ಅರಿವಾಗುವುದೇ ಇಲ್ಲ. ಸಿನಿಮಾದಲ್ಲಿ ಹೀರೋಗಳು ಆದರೆ ನಿಜ ಜೀವನದಲ್ಲಿ ವಿಲನ್ ಆದ ಸಿನಿಮಾ ನಟ ಹರ್ಷನ ಕುರಿತು ನಟಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ಹೌದು ರಾಜಾಹುಲಿ ಸಿನಿಮಾದಲ್ಲಿ ನಟ ಯಶ್​ರ ಗೆಳೆಯನ ಪಾತ್ರದಲ್ಲಿ ನಟಿಸಿರುವ ಹರ್ಷ ತಮಗೆ ಅಸಭ್ಯವಾಗಿ ಸಂದೇಶ ಕಳಿಸಿದ್ದಾರೆ ಎಂದು ನಟಿ ತನಿಷಾ ಕುಪ್ಪಂಡ  ಅವಲತ್ತುಕೊಂಡಿದ್ದಾರೆ. ಪೆಂಟಗನ್ ಕನ್ನಡ ಸಿನಿಮಾದಲ್ಲಿ ನಟಿಸಿರುವ ತನಿಷಾ ಈ ಆರೋಪ ಮಾಡಿದ್ದು, ತಾವು ಹಾಕಿದ್ದ ಇನ್​ಸ್ಟಾಗ್ರಾಂ ಸ್ಟೋರಿಗೆ ರಿಪ್ಲೈ ಮಾಡಿರುವ ಹರ್ಷ, ನೀಲಿ ಚಿತ್ರಗಳಲ್ಲಿ ನಟಿಸುತ್ತೀಯ? ಎಂದು ಸ್ಮೈಲಿ ಇಮೇಜಿನೊಂದಿಗೆ ಸಂದೇಶ ಕಳಿಸಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ರಿ

ಈ ಹಿಂದೆ ನಟಿ ತನಿಷಾ ಅವರ ಸಂದರ್ಶನ ಮಾಡಿದ್ದ ಯೂಟ್ಯೂಬರ್ ಒಬ್ಬ ನೀವು ಅಶ್ಲೀಲ ಸಿನಿಮಾಗಳಲ್ಲಿ ನಟಿಸಲು ಸಿದ್ದರಿದ್ದೀರಾ ಎಂದು ಅಸಭ್ಯ ಪ್ರಶ್ನೆ ಕೇಳಿದ್ದ. ಇದನ್ನು ಪ್ರತಿಭಟಿಸಿದ್ದ ನಟಿ ಯೂಟ್ಯೂಬರ್ ವಿರುದ್ಧ ದೂರು ನೀಡಿದ್ದರು. ಅದೇ ವಿಷಯವಾಗಿ ಮಾಹಿತಿ ನೀಡಲು ಇಂದು ಸುದ್ದಿಗೋಷ್ಠಿ ಕರೆಯಲಾಗಿತ್ತು, ಯೂಟ್ಯೂಬರ್ ಮಾಡಿದ ಕೃತ್ಯದಿಂದ ತಮಗೆ ಆಗಿರುವ ನೋವಿನ ಬಗ್ಗೆ ಮಾತನಾಡುತ್ತಾ, ಅವನಾದರೂ ಹೊರಗಿನವರು, ಅವನಿಂದಾಗಿ ಈಗ ನಮ್ಮವರೇ ನನ್ನನ್ನು ಕೆಟ್ಟದಾಗಿ ನೋಡುವಂತಾಗಿದೆ. ರುೀ

ಸಹನಟನೇ ಒಬ್ಬ ನನ್ನನ್ನು ಬ್ಲೂ ಫಿಲಂನಲ್ಲಿ ನಟಿಸುತ್ತೀಯಾ ಎಂದು ಕೇಳಿ ಮೆಸೇಜ್ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದರು. ಯಾರು ಹಾಗೆ ಮೆಸೇಜ್ ಮಾಡಿದ್ದು ಹೆಸರು ಹೇಳಿ ಎಂದಾಗ, ಮೊದಲಿಗೆ, ಆತ ಗುರುದೇಶಪಾಂಡೆ ಸಿನಿಮಾದಲ್ಲಿ ನಟಿಸಿದ್ದಾನೆ ಎಂದಷ್ಟೆ ಹೇಳಿದರು, ಬಳಿಕ ಪತ್ರಕರ್ತರು ಒತ್ತಾಯ ಮಾಡಿದಾಗ ಹರ್ಷ ಹೆಸರು ಹೇಳಿದರು ನಟಿ ತನಿಷಾ. ಇನ್​ಸ್ಟಾಗ್ರಾಂನಲ್ಲಿ ನಾನು ಹಾಕಿದ್ದ ಸ್ಟೋರಿಗೆ ಪ್ರತಿಕ್ರಿಯೆ ನೀಡಿ, ಬ್ಲೂ ಫಿಲಂನಲ್ಲಿ ನಟಿಸಿದ್ದೀಯ ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಸ್ಮೈಲಿ ಇಮೇಜು ಬೇರೆ ಹಾಕಿದ್ದಾನೆ. ಕರ

ನಾನು ಗೆಳೆಯರು ಎಂದುಕೊಂಡವರೇ ಹೀಗೆ ಕೀಳಾಗಿ ನೋಡುತ್ತಿದ್ದಾರೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು. ಯಶ್ ನಾಯಕನಾಗಿ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ರಾಜಾಹುಲಿಯಲ್ಲಿ ಯಶ್ ಗೆಳೆಯನ ಪಾತ್ರದಲ್ಲಿ ಹರ್ಷ ನಟಿಸಿದ್ದಾರೆ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ಹರ್ಷ ರಾಜಾಹುಲಿ, ವರ್ಧನ, ರಘುವೀರ್, ಗಜಪಡೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.ಅಂತೂ ಈಗಲಾದರೂ ಹೀರೊ ರೂಪದಲ್ಲಿ ಇರುವ ವಿಲನ್ ಬುದ್ದಿ ಆಚೆಗೆ ಬಂದಿದೆ ಅಂತಿದ್ದಾರೆ ಗಾಂಧಿ ನಗರದ ಜನ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.