ಕೋಟಿ ಬೆಲೆಯ ಕಾರು ಖರೀದಿ ಮಾಡಿದ ರಾಮಾಚಾರಿ ಸೀರಿಯಲ್ ನಟಿ; ಈಕೆಯ ಒಂದು ತಿಂಗಳ ಆದಾಯ ಎಷ್ಟು ಗೊ ತ್ತಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಮಾಚಾರಿ. ಈ ಸೀರಿಯಲ್ ನ ನಾಯಕಿ ಚಾರು ಖ್ಯಾತಿಯ ಮೌನ ಗುಡ್ಡೆಮನೆ. ಮೊದಲ ಸೀರಿಯಲ್‌ನಲ್ಲೇ ವಿಭಿನ್ನ ಶೇಡ್ ಗಳ ಪಾತ್ರ ನಿರ್ವಹಿಸಿ, ವೀಕ್ಷಕರ ಮನಗೆದ್ದ ಬೆಡಗಿ ಇವರು.
ಕನ್ನಡಿಗರ ಮನೆಮಾತಾಗಿರುವ ಮೌನ ಗುಡ್ಡೆಮನೆ ಇದೀಗ ತಮ್ಮ 21 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೂನ್ 6 ರಂದು ನಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ತಮ್ಮ ಜೀವನದ ಬಹುದೊಡ್ಡ ಕನಸನ್ನು ನನಸು ಮಾಡುವ ಮೂಲಕ, ತಮ್ಮ ಸ್ಪೆಷಲ್ ದಿನವನ್ನು ಸೂಪರ್ ಸ್ಪೆಷಲ್ ಮಾಡಿಕೊಂಡಿದ್ದಾರೆ.
ಹೌದು ನಟಿ ಮೌನ ಗುಡ್ಡೆಮನೆ ಹುಟ್ಟುಹಬ್ಬದ ಸಂದರ್ಭ ತಮ್ಮ ಕನಸಿನ ಕಾರು ಖರೀದಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ ತಮ್ಮ ಕುಟುಂಬದ ಜೊತೆ ಮೈಸೂರಿನ ಶ್ರೀ ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಹೊಸ ಕಾರಿನ ಪೂಜೆ ಮಾಡಿಸಿ ಬಂದಿದ್ದಾರೆ. ನನ್ನ ಕನಸಿನತ್ತ ಒಂದು ಸಣ್ಣ ಹೆಜ್ಜೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾರಿನ ಜೊತೆಗಿನ ಒಂದಷ್ಟು ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.
ಮೌನ ಜೊತೆ ಇವರ ಸಹೋದರಿ ಮತ್ತು ತಾಯಿಯನ್ಯೂ ಕಾಣಬಹುದು.ಕೇವಲ 21ನೇ ವಯಸ್ಸಿಗೆ ಮೌನ ಗುಡ್ಡೆಮನೆ ದುಬಾರಿ ಕಾರಿನ ಒಡೆಯರಾಗಿದ್ದಾರೆ. ಇವರು ಕಿಯಾ ಕಾರು ಖರೀದಿಸಿದ್ದು, ಇದರ ಬೆಲೆ ಸಾಮಾನ್ಯವಾಗಿ 14 ರಿಂದ 24 ಲಕ್ಷ ರೂಪಾಯಿವರೆಗೂ ಇರುತ್ತೆ. ಹುಟ್ಟು ಹಬ್ಬದ ದಿನ ಕಾರು ಖರೀದಿಸಿದ ನಟಿಗೆ ನಟ -ನಟಿಯರು, ಅಭಿಮಾನಿಗಳು ಶುಭ ಕೋರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.