ರಮೇಶ್ ಅರವಿಂದ್ ಪತ್ನಿ ಜೊತೆ ಎಲ್ಲೂ ಕಾಣಿಸಿಕೊಂಡಿಲ್ಲ ಯಾ ಕೆ, ಇಂತಹ ನಟನಿಗೂ ಆ ಸಮಸ್ಯೆ ಕಾಡುತ್ತಿದೆ
Oct 10, 2024, 17:03 IST
|

ರಮೇಶ್ ಅರವಿಂದ್ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಮೋಟಿವೇಷನಲ್ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ. ಒಂದು ಸಮಯದಲ್ಲಿ ರಮೇಶ್ ಅರವಿಂದ್ 9 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗಿದ್ದವು. ಆ ವೇಳೆನೇ ರಮೇಶ್ ಅರವಿಂದ್‌ಗೆ ತ್ಯಾಗರಾಜ ಅನ್ನೋ ಬಿರುದು ಕೂಡ ಸಿಕ್ಕಿತ್ತು. ಸ್ಯಾಂಡಲ್‌ವುಡ್‌ನ ಈ ಮಿಸ್ಟರ್ ಪರ್ಫೆಕ್ಟ್ ಕೇವಲ ವೃತ್ತಿ ಬದುಕಿನಲ್ಲಷ್ಟೇ ಅಲ್ಲ. ವೈಯಕ್ತಿಕ ಜೀವನದಲ್ಲೂ ಅಷ್ಟೇ ಪರ್ಫೆಕ್ಟ್.
ರಮೇಶ್ ಅರವಿಂದ್ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ತಮ್ಮ ತಂಡವನ್ನು ಕಟ್ಟಿಕೊಂಡು ಆಗಾಗ ಕಾಲೇಜ್‌ನಲ್ಲಿ ನಡೆಯುವ ಉತ್ಸವಗಳಿಗೆ ಹೋಗುತ್ತಿದ್ದರು. ಈ ವೇಳೆ ಅದೇ ಕಾಲೇಜ್ ಫೆಸ್ಟಿವಲ್‌ಗೆ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಬಂದಿದ್ದರು. ಅಲ್ಲೇ ಹುಡುಗಿಯರ ಗುಂಪಿನಲ್ಲಿದ್ದ ಅರ್ಚನಾ ಅವರು ರಮೇಶ್ ಅರವಿಂದ್ ಇಷ್ಟ ಆಗಿದ್ದರು. ತಮ್ಮ ಈ ಲವ್ ಸ್ಟೋರಿಯನ್ನು ರಮೇಶ್ ಅರವಿಂದ್ ಅವರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಬಿಎಂಎಸ್ ಕಾಲೇಜಿನಲ್ಲಿ ಉತ್ಸವ್ ಅಂತ ಇಂಟರ್ ಕಾಲೇಜ್ ಉತ್ಸವ ನಡೆಯೋದು. ನಮ್ಮ ಕಾಲೇಜು ಪರವಾಗಿ ನಮ್ಮ ತಂಡದ ಜೊತೆ ನಾನು ಹೋಗಿದ್ದೆ. ಸುನಿತಾ ಅನಂತಸ್ವಾಮಿ ಅಂತ ನಮ್ಮ ಅನಂತಸ್ವಾಮಿ ಅವರ ಮಗಳು, ಅವರು ಗಾಯಕಿ. ಎನ್‌ಎಂಕೆಆರ್‌ವಿ ಕಾಲೇಜ್‌ನಿಂದ ಬಂದಿದ್ದರು. ಅವರದ್ದೊಂದು ಗ್ರೂಪ್ ಇತ್ತು. ಅದರಲ್ಲಿ ನನ್ನ ಪ್ರೆಸೆಂಟ್ ಹೆಂಡತಿ ಅರ್ಚನಾ ಅವರು ಇದ್ದರು. ಎಂದು ರಮೇಶ್ ಅರವಿಂದ್ ಹೇಳಿಕೊಂಡಿದ್ದರು.
ಆ ಕಾರ್ಯಕ್ರಮ ನಡೆಯುವ ವೇಳೆ ರಮೇಶ್ ಅರವಿಂದ್ ಅವರೇ ಹೋಗಿ ಪತ್ನಿ ಅರ್ಚನಾ ಅವರನ್ನು ಪರಿಚಯ ಮಾಡಿಕೊಂಡಿದ್ದರು. ಆ ಘಟನೆಯನ್ನು ಕೂಡ ರಮೇಶ್ ಅರವಿಂದ್ ಇದೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಉತ್ಸವ್ ನಡೀತಿತ್ತು. ಅಲ್ಲಿ ಇವರು ನಿಂತಿದ್ದರು. ಅಲ್ಲಿ ಹೋಗಿ ಇವರನ್ನು ಇಂಟ್ರುಡ್ಯೂಸ್ ಮಾಡಿಕೊಂಡೆ. ಅವಾಗ ಇವರಿಗೆ ಬಾರಿ ಆಟಿಟ್ಯೂಡ್. ನಿಮ್ಮ ಹೆಸರು ಅಂದೆ. ಅದಕ್ಕೆ ಅರ್ಚನಾ ಅಂದರು. ಆಗಾಗ ಕಾಲೇಜ್ ಫೆಸ್ಟ್ ನಡೀತಿತ್ತು. ಅಲ್ಲಿಗೆ ಹೋಗಿ ಅವರನ್ನು ಮೀಟ್ ಮಾಡೋದು ನಡೀತಿತ್ತು. ಹೇಗೋ ಮಾಡಿ ಫೋನ್ ನಂಬರ್ ತಗೊಂಡು ಬಿಟ್ಟೆ. ಕೈ ಮೇಲೆ ಬರೆದುಕೊಂಡಿದ್ದೆ. ಗಾಬರಿಗೆ ಕೈಗಳು ಬೆವೆತು ಎರಡು ನಂಬರ್ ಅಳಿಸಿ ಹೋಗಿತ್ತು.ಎಂದು ಆ ಸ್ವಾರಸ್ಯಕರ ಸಂಗತಿಯನ್ನು ಹೇಳಿಕೊಂಡಿದ್ದರು.
ಹೀಗೆ ರಮೇಶ್ ಅರವಿಂದ್ ಹಾಗೂ ಅರ್ಚನಾ ಇಬ್ಬರ ಪರಿಚಯ 4-5 ವರ್ಷ ನಡೀತು. ಬಳಿಕ ರಮೇಶ್ ಅರವಿಂದ್ ಅವರೇ ಅರ್ಚನಾ ಅವರಿಗೆ ಸ್ಟ್ರೈಟ್ ಆಗಿ ಪ್ರಪೋಸ್ ಮಾಡಿದ್ದರು. ಇದನ್ನು ಪತ್ನಿ ಅರ್ಚನಾ ರಿವೀಲ್ ಮಾಡಿದ್ದರು. ರಮೇಶ್ ಅರವಿಂದ್ ಅವರೇ ಪ್ರಪೋಸ್ ಮಾಡಿದ್ದು, ನಾವ್ಯಾಕೆ ಮದುವೆ ಆಗಬಾರದು ಅಂತ ಹೇಳಿದ್ದರು. ಯಾಕೆ ಆಗಬಾರದು ಅಂತ ನಾನು ಹೇಳಿದ್ದೆ ಅಷ್ಟೇ. ಅದೇ ಇವರು ಪ್ರಪೋಸ್ ಮಾಡಿ ಮದುವೆ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025