ರಮ್ಯಾ ಹೃ.ದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಚಾರ, ಬೆಚ್ಚಿಬಿದ್ದ ಫ್ಯಾನ್ಸ್

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬುಧವಾರ ಬೆಳಗ್ಗೆ ಹಠಾತ್ ಟ್ರೆಂಡ್ ಆಗಿತ್ತು. ಎಸ್‌ಎಸ್ ಮ್ಯೂಸಿಕ್, ದಿನಕರನ್ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್ ಪೇಜ್‌ಗಳು ಕೂಡ ನಟಿ ರಮ್ಯಾ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಕಾರ್ಡಿಯಾಕ್ ಅರೆಸ್ಟ್‌ನಿಂದ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದವು.
ಆದರೆ, ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಕುರಿತಾಗಿ ಮಾಹಿತಿ ಪಡೆದಿದ್ದು ರಮ್ಯಾ ಸಾವಿನ ಸುದ್ದಿ ಫೇಕ್. ಇನ್ನು ರಮ್ಯಾ ಜೊತೆ ಸ್ವಿಜರ್ಲೆಂಡ್‌ನ ಜಿನೇವಾದಲ್ಲಿರುವ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಕೂಡ ಟ್ವೀಟ್ ಮಾಡಿ ರಮ್ಯಾ ಅವರಿಗೆ ಏನೂ ಆಗಿಲ್ಲ ಎಂದು ಖಚಿತಪಡಿಸಿದ್ದಾರೆ.
ಈಗ ತಾನೆ ನಾನು ರಮ್ಯಾ ಅವರ ಜೊತೆ ಮಾತನಾಡಿದೆ. ಆಕೆ ಚೆನ್ನಾಗಿಯೇ ಇದ್ದಾರೆ. ಈಗ ಜೆಕ್ ಗಣರಾಜ್ಯದ ಪ್ರೇಗ್‌ಗೆ ತೆರಳುತ್ತಿದ್ದು, ಆ ಬಳಿಕ ಬೆಂಗಳೂರಿಗೆ ವಾಪಾಸಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಅದಕ್ಕೂ ಮುನ್ನ ರಮ್ಯಾ ಜೊತೆಯಲ್ಲಿ ಜಿನೇವಾದಲ್ಲಿ ಇರುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ. ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಮಹಿಳೆ ರಮ್ಯಾರನ್ನು ಜನೇವಾದಲ್ಲಿ ಭೇಟಿ ಮಾಡಿದೆ.
ಬೆಂಗಳೂರಿನ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ರಮ್ಯಾ ಜೊತೆಗಿನ ಸೆಲ್ಫಿಯನ್ನೂ ಕೂಡ ಹಂಚಿಕೊಂಡಿದ್ದಾರೆ. ಪತ್ರಕರ್ತೆ ಧನ್ಯಾ ರಾಜೇಂದ್ರನ್ ಕೂಡ ಸ್ವತಃ ರಮ್ಯಾರಿಗೆ ದೂರವಾಣಿ ಕರೆ ಮಾಡಿ ಸುದ್ದಿ ಫೇಕ್ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಈಗ ತಾನೆ ರಮ್ಯಾ ಜೊತೆ ಮಾತನಾಡಿದೆ. ಆಕೆ ಜಿನೇವಾದಲ್ಲಿದ್ದಾರೆ. ದೇವರ ಕರೆ ಬರುವವರೆಗೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದಾರೆ. ಇಂಥ ಸುದ್ದಿಗಳನ್ನು ಹರಿಬಿಟ್ಟ ವ್ಯಕ್ತಿಗಳಿಗೆ ನಾಚಿಕೆಯಾಗಬೇಕು ಎಂದು ಅವರು ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.