ಬಂಗಾರಪ್ಪನ ಮಾತಿಗೆ ಸಿಡಿದೆದ್ದ ರಂಗಣ್ಣ; ಮೋದಿಜಿ ಬಗ್ಗೆ ಮಾತನಾಡಬೇಡ

 | 
Ju

ನಂಗೆ ಕನ್ನಡ ಮಾತಾಡೋಕೆ ಬರತ್ತೆ. ಆದ್ರೆ ಓದೋಕೆ ಬರಲ್ಲ ಎಂದು ಎಲ್ಲರ ಮುಂದೆ ಹಾಸ್ಯಕ್ಕೀಡಾದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ನಿಮ್ಮ ನರೇಂದ್ರ ಮೋದಿ ಅವರಿಗೆ ಕನ್ನಡ ಬರುತ್ತಾ? ಇಲ್ಲಿ ಬಂದು ಕನ್ನಡ ಮಾತಾಡ್ತಾರೆ, ತಮಿಳುನಾಡಿಗೆ ಹೋಗಿ ತಮಿಳಲ್ಲಿ ಮಾತಾಡ್ತಾರೆ. ಯಾರೋ ಬರೆದು ಕೊಟ್ಟಿದ್ದನ್ನು ಹೇಳ್ತಾರೆ, ಅದನ್ನು ತಿಳ್ಕೊಳ್ಳಿ. ನನ್ನ ಕನ್ನಡವನ್ನು ಟ್ರೋಲ್‌ ಮಾಡುವುದರಿಂದ ನಿಮ್ಮ ಹೊಟ್ಟೆ ಏನು ತುಂಬಲ್ಲ ಎಂದು ಕಿಡಿ ಕಾರಿದ್ದಾರೆ.

ಈ ಮೂಲಕ ತಮಗೆ ಕನ್ನಡ ಬರಲ್ಲ ಎಂದು ಟ್ರೋಲ್‌ ಮಾಡಿದವರಿಗೆ ತಿರುಗೇಟು ನೀಡಿದರು.ನನಗೆ ಕನ್ನಡ ಓದೋದು ಸ್ವಲ್ಪ ಕಷ್ಟ. ಆದರೆ, ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತೀನಿ. ಈಗ ಏನಾದ್ರೂ ತಡವರಿಸುತ್ತಿದ್ದೇನಾ? ಟ್ರೋಲ್ ಮಾಡೋರಿಗೆ ಬೇರೆ ಕೆಲಸ ಇಲ್ಲ. ಅವರಿಗೆ ಶಾಪ ಹಾಕ್ತೀನಿ ಅಂದಿದ್ದೆ, ಅನಿವಾರ್ಯವಾಗಿ ಅದನ್ನು ಮತ್ತೆ ಹೇಳಬೇಕಾಗುತ್ತದೆ ಎಂದು ಟ್ರೋಲ್ ಮಾಡುವವರ ವಿರುದ್ಧ ಬೈದಿದ್ದಾರೆ.

ನನ್ನ ಕನ್ನಡವನ್ನು ಟ್ರೋಲ್‌ ಮಾಡುವ ಬದಲು ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯದು ಇದೆ ಅದನ್ನು ಟ್ರೋಲ್ ಮಾಡಿ. ನಾನೇನು ನಿಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡಲ್ಲ, ನನ್ನ ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾನು ಕೇವಲ ಶಿಕ್ಷಣ ಇಲಾಖೆಯನ್ನು ನಡೆಸುತ್ತೇನೆ ಅಷ್ಟೇ. ಯಾವುದೇ ಪೋಷಕರು, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಈ ಟ್ರೋಲ್‌ನಿಂದ ಯಾವನ ಹೊಟ್ಟೆನೂ ತುಂಬಲ್ಲ, ಯಾರಿಗೂ ಏನು ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು, ಟ್ರೋಲ್ ಮಾಡುವವರಿಗೆ ಕೆಲಸ ಇಲ್ಲ, ನಾನು ಮುಂಚೆಯೇ ಹೇಳಿದ್ದೆ, ಅವರಿಗೆ ಶಾಪ ಹಾಕುತ್ತೇವೆ ಅಂತ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲು ಇನ್ನು ಸಾಕಷ್ಟು ಚೆನ್ನಾಗಿರೋ ವಿಚಾರಗಳಿದೆ ಅಂತದನ್ನು ಟ್ರೋಲ್ ಮಾಡಿ. ನನ್ನ ಕನ್ನಡ ತಗೊಂಡು ಟ್ರೋಲ್ ಮಾಡ್ತೀರಿ, ನಾನೇನು ನಿಮ್ಮ ಮಕ್ಕಳಿಗೆ ಪಾಠ ಹೇಳಿ ಕೊಡ್ತೀನಾ? ನಾವು ಇಲಾಖೆಯನ್ನು ಮಾತ್ರ ನೋಡಿಕೊಳ್ಳುತ್ತೇವೆ. ಪೋಷಕರು ಕೂಡ ಇಂತಹ ಟ್ರೋಲ್​ಗಳಿಗೆ ಹೆದರುವುದು ಬೇಡ, ಈ ಟ್ರೋಲ್ ಮಾಡೋದು ಬಿಟ್ಟು ಬಿಡಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.