ಪ್ರದೀಪ್ ಈಶ್ವರ್ ಗೆ ಹಿಗ್ಗಾಮುಗ್ಗಾ ಜಾಡಿಸಿದ ರಂಗಣ್ಣ, ಗಡಗಡ ನಡುಗಿದ ಕರುನಾಡು

 | 
ರ್

 ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇನ್ನಷ್ಟು ಶಕ್ತಿ ತುಂಬಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದರು.

‘ಶ್ರೀಮಂತರು, ಪ್ರತಿ ಪಕ್ಷಗಳು ಅಕ್ಕಿಯನ್ನು ಪಡಿತರವೆಂದು ನೋಡಬಹುದು. ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ಎಂದರೆ ದೇವರು. ಅನ್ನಭಾಗ್ಯ ಜಾರಿಗೊಳಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಇಂಗ್ಲಿಷ್‌ ಶಿಕ್ಷಣ ಬೆನ್ನತ್ತಿ ಹೋಗುವವರಿಗೆ ನನ್ನ ಮಾತು ಇಷ್ಟೇ, ಇಂಗ್ಲಿಷ್‌ ಇರುವುದೇ ತಪ್ಪು ತಪ್ಪಾಗಿ ಮಾತನಾಡಲು. ಸರಿಯಾಗಿ ಮಾತನಾಡಲು ಕನ್ನಡವಿದೆ. ಕನ್ನಡವನ್ನು ಸರಿಯಾಗಿ ಬಳಸೋಣ. ನನ್ನಂತಹ ಬಡ ಕುಟುಂಬದ ಹುಡುಗ ವಿಧಾನಸೌಧ ತಲುಪಲು ಕಾರಣರಾದ ಡಾ।ಬಿ.ಆರ್‌. ಅಂಬೇಡ್ಕರ್, ನನ್ನಂತಹ ಅನಾಥರಿಗೆ ಅನ್ನ ನೀಡಿ ಬೆಳೆಸಿದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರನ್ನು ಸ್ಮರಿಸುತ್ತೇನೆ’ ಎಂದು ಹೇಳಿದರು.

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಬಡವರಿಗೆ ಉಪಯುಕ್ತವಾಗಿವೆ. ಬಡವರ ಮಕ್ಕಳು ಬೆಳೆಯಬೇಕೆಂಬ ಉದ್ದೇಶದಿಂದ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದರು.
ಇನ್ನು ಸ್ಪೀಕರ್ ಖಾದರ್ ಅವರು ಹೊಸ ಶಾಸಕರು ಧೈರ್ಯದಿಂದ ಮಾತನಾಡಬೇಕು. ಮಾತನಾಡುವಾಗ ಹೆಚ್ಚು ಕಮ್ಮಿ ಆದರೂ ತಲೆಕೆಡಿಸಿಕೊಳ್ಳಬೇಡಿ. ಟ್ರೋಲ್‌ ಮಾಡುತ್ತಾರೆ ಎಂಬ ಭಯ ಬೇಡ. ನನ್ನ ಬಗ್ಗೆಯೂ ಟ್ರೋಲ್ ಮಾಡಿದ್ದರು. ನಾನು ಈ ಸ್ಥಾನಕ್ಕೆ ಏರುವಲ್ಲಿ ಟ್ರೋಲ್ ಪಾತ್ರವೂ ಇದೆ. ಆದ್ದರಿಂದ ಮುಕ್ತವಾಗಿ ಮಾತನಾಡಿ ಎಂದು ಉತ್ತೇಜನ ನೀಡಿದರು.

ಇನ್ನು ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಬೆನ್ನುತಟ್ಟಿ ಹುರಿದುಬಿಸಿದರೆ ರಂಗಣ್ಣ ಮಾತ್ರ ಟ್ರೋಲಿಗರ ಜೊತೆ ಸೇರಿ ಬೈದಿದ್ದಾರೆ ಎನ್ನಲಾಗ್ತಿದೆ.
ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.