ಒಮ್ಮೆಲೇ ಕನ್ನಡ ಭಾಷೆ ಮೇಲೆ ಒಲವು ತೋರಿಸಿದ ರಶ್ಮಿಕಾ ಮಂದಣ್ಣ; ಕನ್ನಡಿಗರು ಫಿದಾ

 | 
Hu

ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ, ಮೂಲತಃ ಕೊಡಗಿನವರಾಗಿದ್ದಾರೆ. ಕೊಡಗಿನಲ್ಲೇ ಹುಟ್ಟಿ ಬೆಳೆದ ರಶ್ಮಿಕಾ ಇದೀಗ ಕೂರ್ಗಿ ಸಂಪ್ರದಾಯದಂತೆ ಸೀರೆಯುಟ್ಟು ಮಿಂಚುತ್ತಿದ್ದಾರೆ. ರಾಯಲ್ ಬ್ಲೂ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಚೆಂದದ ಗೊಂಬೆಯಂತೆ ಕಾಣ್ತಿದ್ದಾರೆ. ಇತ್ತೀಚಿಗಷ್ಟೇ ನಟಿ ರಶ್ಮಿಕಾ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಿದ್ರು.

ಸಾಲು ಸಾಲು ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಆಗಾಗ ಕೊಡಗಿಗೆ ಬಂದು ಪೋಷಕರ ಜೊತೆ ಕಾಲ ಕಳೆಯುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ತಾನು ಹುಟ್ಟಿ ಬೆಳೆದ ಊರು ಹಾಗೂ ಪ್ರೀತಿಪಾತ್ರರರನ್ನು ಎಷ್ಟು ಮಿಸ್ ಮಾಡಿಕೊಳ್ಳುವೆ ಎನ್ನುವುದನ್ನು ಪದಗಳಲ್ಲಿ ವರ್ಣಿಸಿದ್ದಾರೆ. ಅಷ್ಟೇ ಅಲ್ಲದೇ ಮಾತೃ ಭಾಷೆಯಲ್ಲೇ ಮಾತಾಡಿ ಕೊಡಗಿನ ಜನರ ಹೃದಯ ಗೆದ್ದಿದ್ದಾರೆ.

ಎಲ್ಲರಿಗೂ ನಮಸ್ಕಾರ, ನಾನು ಕೊಡಗಿನಲ್ಲಿ ನಡೆಯುತ್ತಿರುವ ನನ್ನ ಫ್ರೆಂಡ್ ಮದುವೆಗಾಗಿ ಇಲ್ಲಿಗೆ ಬಂದಿದ್ದೇನೆ. ಕೊಡಗಿನ ಜನರಿಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಬೆಳೆಯುತ್ತಿದ್ದೇನೆ, ನನ್ನ ಮೇಲೆ ಕಾವೇರಮ್ಮನ ಆಶೀರ್ವಾದ ಇದೆ. ನೀವು ಸದಾ ನನಗೆ ಬೆಂಬಲವಾಗಿ ನಿಂತಿದ್ದೀರಾ? ಇದೇ ರೀತಿ ನನ್ನನ್ನು ಬೆಂಬಲಿಸಿ, ನೀವು ನನ್ನ ಮನಸ್ಸಿನಲ್ಲಿದ್ದೀರಾ ಸದಾ ಇರುತ್ತೀರಾ ಎಂದು ನಟಿ ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ಹೇಳಿದ್ದಾರೆ.

ಕೊಡವ ಭಾಷೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಮಾತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ನಟಿ ಇನ್ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ನಾನಾ ಕಮೆಂಟ್​ಗಳು ಹರಿದು ಬರ್ತಿದೆ. ನೆಟ್ಟಿಗರೊಬ್ಬರು ಇಂಗ್ಲಿಷ್​​ ಭಾಷೆಯಲ್ಲಿ ಮಾತಾಡಿದ್ರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ, ನಾನು ಎಲ್ಲಿಯವಳು, ಎಲ್ಲಿಂದ ಬಂದಿದ್ದೇನೆ ಎಂದು ಎಲ್ಲರಿಗೂ ತಿಳಿಯಲು ನನ್ನ ಭಾಷೆಯಲ್ಲೇ ಮಾತಾಡಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.