ರಶ್ಮಿಕಾ ಮಂದಣ್ಣ ಫಿಗರ್ ನೋಡಿ ಕ್ಲೀನ್ ಬೌಲ್ಡ್ ಆದ ಬಾಲಿವುಡ್ ನ ಟರು
Aug 1, 2024, 14:11 IST
|

ಅದ್ಯಾಕೋ ಗೊತ್ತಿಲ್ಲ ಬಾಲಿವುಡ್ ನಟಿಯರನ್ನು ಡೀಪ್ಫೇಕ್ ವಿಡಿಯೋ ಭೂತ ಬಿಟ್ಟು ಬಿಡದೆ ಕಾಡ್ತಿದೆ. ಡೀಪ್ಫೇಕ್ಗೆ ಈಗಾಗಲೇ ಅನೇಕ ನಟಿಯರು ಬಲಿಯಾಗಿದ್ದಾರೆ. ಅದರಲ್ಲೂ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್ಫೇಕ್ ವಿಡಿಯೋ ವೈರಲ್ ಆಗಿದೆ. ಯಾರದೋ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಎಡಿಟ್ ಮಾಡಿರುವ ಕಿಡಿಗೇಡಿಗಳು ವಿಡಿಯೋ ವೈರಲ್ ಮಾಡಿದ್ದಾರೆ. ರಶ್ಮಿಕಾ ವಿಡಿಯೋ ನೋಡಿದ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ.
ಇನ್ನು ರಶ್ಮಿಕಾ ಹೊಸ ಡೀಪ್ಫೇಕ್ ವಿಡಿಯೋದಲ್ಲಿ ಯುವತಿಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದಾರೆ. ಯಾರೋದು ಯುವತಿಯ ದೇಹಕ್ಕೆ ರಶ್ಮಿಕಾ ಮುಖ ಎಡಿಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಡೀಪ್ಫೇಕ್ ವಿಡಿಯೋ ಮಾಡಬೇಡಿ ಎಂದು ರಶ್ಮಿಕಾ ಫ್ಯಾನ್ಸ್ ಕೂಡ ಕಮೆಂಟ್ ಮಾಡ್ತಿದ್ದಾರೆ.
ಈ ಹಿಂದೆ ಕೂಡ ನಟಿ ರಶ್ಮಿಕಾ ಡೀಪ್ಫೇಕ್ ವಿಡಿಯೋ ಭಾರೀ ಸುದ್ದಿ ಆಗಿತ್ತು.ಯುವತಿಯೊಬ್ಬರು ಸಣ್ಣ ಬಟ್ಟೆ ಧರಿಸಿ ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಲಾಗಿತ್ತು. ಮೊದಲ ಬಾರಿ ವಿಡಿಯೋ ವೈರಲ್ ಆದಾಗ ಅದು ನಟಿ ರಶ್ಮಿಕಾ ಮಂದಣ್ಣ ಎಂದೇ ಅನೇಕರು ನಂಬಿದ್ರು. ಬಳಿಕ ಇದು ಡೀಪ್ಫೇಕ್ ವಿಡಿಯೋ ಎನ್ನುವ ಸತ್ಯ ಹೊರಬಿದ್ದಿತು.
ಇದೀಗ ಮತ್ತೊಮ್ಮೆ ಇಂತಹದೇ ಘಟನೆ ನಡೆದಿದೆ. ಇನ್ನು ಈ ಕುರಿತಾಗಿ ಅಮಿತಾಭ್ ಬಚ್ಚನ್, ವಿಜಯ್ ದೇವರಕೊಂಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಡೀಪ್ಫೇಕ್ ವಿಡಿಯೋ ವಿರುದ್ಧ ಧ್ವನಿ ಎತ್ತಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದರು. ರಶ್ಮಿಕಾ ಡೀಪ್ಫೇಕ್ ವಿಡಿಯೊ ವೈರಲ್ ಮಾಡಿದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ಇನ್ನೂ ಕಿಡಿಗೇಡಿಗಳು ಬುದ್ಧಿ ಬಂದಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.