ಧ್ರುವ ಚಿಕ್ಕಪ್ಪ ಸೂಸು ಮಾಡಿಕೊಂಡಿದ್ದಾರೆ ಎಂದ ರಾಯನ್, ಬಿದ್ದುಬಿದ್ದು ನಕ್ಕ ಮೇಘನಾ ರಾಜ್

 | 
Hhh

ಮಕ್ಕಳ ತೊದಲು ಮಾತು ಕೇಳಲು ಅದೇನೋ ಆನಂದ ಹೌದು ನಟ ಧ್ರುವ ಸರ್ಜಾ ಸಮಯ ಸಿಕ್ಕಾಗೆಲ್ಲ ಸಹೋದರ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ಜೊತೆ ಕಾಲ ಕಳೆಯುತ್ತಾರೆ. ರಾಯನ್ ಕೂಡ ಚಿಕ್ಕಪ್ಪನ ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಬಾರಿ ಚಿಕ್ಕಪ್ಪನ ಹುಟ್ಟು ಹಬಕ್ಕೆ ವಿಶೇಷ ವಿಡಿಯೋವೊಂದನ್ನು ತಾಯಿ ಮೇಘನಾ ಮೂಲಕ ಶೇರ್ ಮಾಡಿದ್ದಾನೆ ಪುಟಾಣಿ.
 
ಈ ವಿಡಿಯೋದಲ್ಲಿ ರಾಯನ್ ಗೆ ಧ್ರುವ ಸರ್ಜಾ ಡಾನ್ಸ್ ಕಲಿಸುತ್ತಿದ್ದಾರೆ. ಅಲ್ಲದೇ ಎತ್ತಿ ಮಗುವನ್ನು ಧ್ರುವ ಮುದ್ದಾಡುತ್ತಾರೆ. ಈ ಹಿಂದೆ ವಿಡಿಯೋವನ್ನು ಮೇಘನಾ ರಾಜ್  ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ರಾಯನ್ ಗೆ ಹೇಳಿಕೊಟ್ಟಿದ್ದಾರೆ ಧ್ರುವ ಸರ್ಜಾ. ಥೇಟ್ ಮಗುವಿನಂತೆಯೇ ಅವರು ಕುಣಿಸಿದ್ದಾರೆ.

ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದಾರೆ. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಧ್ರುವ ಅವರ ಹುಟ್ಟು ಹಬ್ಬಕ್ಕಾಗಿ ಹಂಚಿಕೊಂಡಿದ್ದಾರೆ ಮೇಘನಾ. ಈ ಮೂಲಕ ಚಿಕ್ಕಪ್ಪನಿಗೆ ಶುಭಾಶಯ ಹೇಳಿದ್ದಾನೆ ರಾಯನ್. ಇದೀಗ ರಾಯನ್ ತನ್ನ ತೊದಲು ಮಾತಲ್ಲಿ ಚಿಕ್ಕಪ್ಪ ಪಂಚೆಯಲ್ಲಿ ಸುಸ್ಸು ಮಾಡಿಕೊಂಡಿದ್ದಾರೆ ಎಂದು ಅಮ್ಮ ಮೇಘನಾ ರಾಜ್ ಬಳಿ ಬಂದು ಹೇಳಿದ್ದಾನೆ. 

ಆಗ ಮೇಘನಾ ರಾಜ್ ಎಷ್ಟು ಡರ್ಟಿ ಅಲ್ವಾ ಎಂದಿದ್ದಾರೆ ಅದಕ್ಕೆ ಹಾ ಹೌದು ಎಂದಿದ್ದಾನೆ ರಾಯನ್ ಅದನ್ನು ಕೇಳಿ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರೂ ನಕ್ಕಿದ್ದಾರೆ. ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ರಾಜ್ ಅವರ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ಪ್ರತಿ ಫೋಟೋ ಬಂದಾಗಲೂ ಚಿರು ಅಭಿಮಾನಿಗಳು ಮತ್ತು ಮೇಘನಾ ರಾಜ್ ಅಭಿಮಾನಿಗಳು ಪ್ರೀತಿಯಿಂದ ಅವುಗಳನ್ನು ಬರಮಾಡಿಕೊಳ್ಳುತ್ತಾರೆ. ಈ ಬಾರಿ  ರಾಜಮಾರ್ತಾಂಡ ಸಿನೆಮಾ ಇಂದಾಗಿ ಬಿಗ್ ಸ್ಕ್ರೀನ್ ನಲ್ಲೇ ರಾಯನ್ ರಾಜ್ ಅವರನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.