ಅಭಿ ಮದುವೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ರಾಕ್ ಲೈನ್ ವೆಂಕಟೇಶ್, ಈ ಸಂಬಂಧ ಕೇಳಿ ಕಣ್ಣೀರಿಟ್ಟ ದರ್ಶನ್

 | 
ಕಿ

ಕೆಲ ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ನಿರ್ಮಾಪಕ, ಅಂಬರೀಶ್ ಕುಟುಂಬದ ಅತ್ಯಾಪ್ತ ರಾಕ್ ಲೈನ್ ನಡುವಿನ ವಾಗ್ವಾದ ನಡೆದಿತ್ತು. ರೆಬಲ್ ಸ್ಟಾರ್ ಅಂಬರೀಶ್ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ಗರಂ ಆಗಿದ್ದರು.

ತನ್ನ ಮತ್ತು ಸುಮಲತಾ ನಡುವೆ ಕೆಟ್ಟದಾಗಿ ಸಂಬಂಧ ಕಟ್ಟಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದು ರಾಕ್ ಲೈನ್ ವೆಂಕಟೇಶ್ ಗಂಭೀರ ಆರೋಪ ಮಾಡಿದ್ದರು.
ಸುಮಲತಾ ಜೊತೆ ಜೊತೆ ಯಾರಾದರೂ ಇದ್ದೇ ಇರುತ್ತೇವೆ. ಅವರಿಗೆ ಮೆಟ್ಟಿಲು ಇಳಿಯಲು ಆಗದೆ ಇರುವಾಗ ಕೈ ಹಿಡಿದು ಕರೆದುಕೊಂಡು ಬಂದಿದ್ದೇನೆ, ಫ್ಲೈಟ್‌ನಲ್ಲಿ ಮೆಟ್ಟಿಲು ಇಳಿಯಲು ಆಗಲ್ಲ ಆಗೆಲ್ಲ ಕೈ ಹಿಡಿದು ಕರೆದುಕೊಂಡು ಬಂದಿದ್ದೇನೆ. 

ಇದನ್ನೆಲ್ಲ ಕೆಟ್ಟ ಭಾವನೆ, ಕೆಟ್ಟ ವಿಷಯ ಅಂತ ಸಮಾಜಕ್ಕೆ ತಿಳಿಸಲು ಹೋದರೆ ಮರ್ಯಾದೆ ಹೋಗೋದು ನಿಮ್ಮದು' ಎಂದು ತಿವಿದಿದ್ದಾರೆ. ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಗ್ಯುದ್ಧದ ನಡುವೆಯೇ ಸುಮಲತಾ ಹಾಗೂ ರಾಕ್ ಲೈನ್ ವೆಂಕಟೇಶ್ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.

ಈ ಪೋಟೋಗಳಿಗೆ ಸಂಬಂಧಿಸಿದಂತೆ ಸುಮಲತಾ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾನು ನನ್ನ ಸಾರ್ವಜನಿಕ ಜೀವನದಲ್ಲಿ 40 ವರ್ಷದಿಂದ ಇದ್ದೀನಿ, ಇಂತಾ ಒಂದಲ್ಲ ಸಾವಿರಾರು, ಲಕ್ಷಾಂತರ ಫೋಟೋಸ್ ಇದೆ. ನಾವು ಸಿನಿಮಾದಲ್ಲಿ ಮಾಡಿದ ಡ್ಯಾನ್ಸ್ ಇದೆ, ಎಲ್ಲವನ್ನು ಹಾಕೋದಕ್ಕೆ ಹೇಳಿ ಎಂಟರ್ ಟೈನ್ ಮೆಂಟ್ ಆದರೂ ಸಿಗುತ್ತೆ ಎಂದು ತಿರುಗೇಟು ನೀಡಿದ್ದಾರೆ.

ಸುಮಲತಾ ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವ ಮೂಲಕ, ಜನರು ಬೇರೆ ರೀತಿಯಲ್ಲಿ ಈ ಫೋಟೋಗಳನ್ನು ಊಹಿಸುವಂತೆ ಮಾಡುವ ಪ್ರಯತ್ನ ಇದಾಗಿದೆಯೇ ಎನ್ನುವ ಅನುಮಾನಗಳ ನಡುವೆಯೇ ಸುಮಲತಾ ಹಾಗೂ ಕುಮಾರಸ್ವಾಮಿ ವಾಗ್ಯುದ್ಧ ತಾರಕಕ್ಕೇರಿದೆ. 

ಸುಮಲತಾ ಅವರು ಗಣಿಗಾರಿಕೆ ವಿಚಾರವಾಗಿ ಅಪಸ್ವರ ಎತ್ತಿರುವುದೇ ಈ ಎಲ್ಲಾ ವಿದ್ಯಮಾನಗಳೀಗೆ ಕಾರಣ ಎನ್ನಲಾಗಿದೆ. ಈ ವಾಗ್ಯುದ್ಧ ಇದೀಗ ಮಾನಹಾನಿಯವರೆಗೆ ಸಾಗಿದೆ. ಇನ್ನು ಅಂಬರೀಶ್ ಕುಟುಂಬದೊಂದಿಗೆ ರಾಕ್ ಲೈನ್ ಮೊದಲಿನಿಂದಲೂ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗ್ತಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.