ರಶ್ಮಿಕಾ ಮಂದಣ್ಣ ಹಿಂದಿಕ್ಕಿ ಬೆಳೆದ ಶರಣ್ಯ ಶೆಟ್ಟಿ; ಇನ್ನುಮುಂದೆ ಕನ್ನಡದ ಶರಣ್ಯ ನ್ಯಾಷನಲ್ ಕ್ರಶ್

 | 
Jd
ಸ್ಯಾಂಡಲ್​ವುಡ್​​ನಲ್ಲಿ ಹೊಸ ಹೊಸ ನಟಿಯರು ಬರುತ್ತಲೇ ಇರುತ್ತಾರೆ. ಕೆಲವರು ಬೇಗನೆ ಕ್ಲಿಕ್ ಆಗುತ್ತಾರೆ. ಕೆಲವರು ಎಷ್ಟೇ ಸಿನಿಮಾ ಮಾಡಿದರೂ ಕ್ಲಿಕ್ ಆಗಲ್ಲ. ಅವರಿಗೆ ಬ್ರೇಕ್ ಎನ್ನುವಂತಹ ಸಿನಿಮಾ ಕೂಡಾ ಸಿಗಲ್ಲ. ಆದರೆ ಈ ಚೆಲುವೆಗೆ ಅದೃಷ್ಟ ಕೈಗೂಡಿದೆ. ಈ ಸೂಪರ್ ಕ್ಯೂಟ್ ಚೆಲುವೆ ಕನ್ನಡ ಚಿತ್ರರಂಗದ ಮುದ್ದಾದ ನಟಿ. ಸದ್ಯಕ್ಕೆ ಇವರೇ ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ಕ್ರಶ್ ಅಂತೆ. ಹೀಗಂತ ಟ್ರೋಲ್ ಪೇಜ್​​ಗಳು ನಟಿಯ ಫೋಟೋಗಳನ್ನು ಶೇರ್ ಮಾಡುತ್ತಾ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟಕ್ಕೂ ಈ ನಟಿ ಯಾರು ಗೊತ್ತಾ?
ಆಕೆ ಇನ್ಯಾರೂ ಅಲ್ಲ, ಶರಣ್ಯ ಶೆಟ್ಟಿ. ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಗಣೇಶ್ ಜೊತೆ ಕಾಣಿಸಿಕೊಂಡಿದ್ದ ಶರಣ್ಯ ಶೆಟ್ಟಿ ಅವರೇ ಈ ಚೆಲುವೆ. ಹೌದು ಸದ್ಯ ಈ ಸಿನಿಮಾದಲ್ಲಿ ನಟಿಯನ್ನು ನೋಡಿ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರಂತೆ. ಇವರು ಕ್ರಶ್ ಅಂತ ಹೇಳಿ ಹೊಗಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಗಟ್ಟಿಮೇಳದಲ್ಲಿ ಶರಣ್ಯ ಶೆಟ್ಟಿ ನಟಿಸಿದ್ದರು. ಅವರು ಸೀರಿಯಲ್​ನಲ್ಲಿ ಸಾಹಿತ್ಯ ಎನ್ನುವ ಪಾತ್ರ ಮಾಡಿದ್ದರು. 
ಆದರೆ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿರಿತೆರೆ ಮೂಲಕ ಬಣ್ಣದ ಯಾನ ಆರಂಭಿಸಿದರೂ ನಟಿ ಶರಣ್ಯಾ ಶೆಟ್ಟಿ ಅವರಿಗೆ ಆರಂಭದಲ್ಲಿ ಹೆಸರು ತಂದುಕೊಟ್ಟಿದ್ದು ಮಾತ್ರ ಕಿರುತೆರೆ. ಈ ಚೆಲುವೆಯ ನಗು ತುಂಬಾ ಕ್ಯೂಟ್ ಆಗಿದೆ. ಕಾಲೇಜಿನಲ್ಲಿ ಫ್ಯಾಷನ್ ಟೀಂ ಸೇರಿಕೊಂಡ ಶರಣ್ಯಾ ಶೆಟ್ಟಿ ಅವರು ಹಲವು ಬಾರಿ ರ್ಯಾಂಪ್ ವಾಕ್ ಮಾಡಿದ್ದಾರೆ. ಮಾಡೆಲ್ ಆಗಿರುವ ಶರಣ್ಯಾ ಶೆಟ್ಟಿ ಅವರು ಇದೀಗ ನಟಿ ಕೂಡ ಆಗಿದ್ದಾರೆ. ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದರು. ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯಾ ಸ್ಫರ್ಧೆ ಮಾಡಿದ್ದರು.
ಅವರಿಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಹೆಚ್ಚಿನ ಮನ್ನಣೆ ತಂದುಕೊಟ್ಟಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್​​​ಗೆ ಹೀರೋಯಿನ್ ಆಗಿ ಶರಣ್ಯ ಶೆಟ್ಟಿ ದಿಢೀರ್ ಫೇಮಸ್ ಆದರು. ಅಷ್ಟೇ ಅಲ್ಲದೆ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಕೂಡಾ ವ್ಯಕ್ತವಾಯಿತು. ಮೂಲತಃ ಶಿವಮೊಗ್ಗದವರಾದ ಶರಣ್ಯಾ ಶೆಟ್ಟಿ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಎಂಜಿನಿಯರ್ ಓದು ಮುಗಿಸಿದ್ದು, ಶೇ.98 ಪಡೆದಿದ್ದಾರೆ. ಶರಣ್ಯಾ ಪೋಷಕರಿಗೆ ಮಗಳು ಡಾಕ್ಟರ್‌ ಅಥವಾ ಎಂಜಿನಿಯರ್‌ ಆಗಬೇಕು ಎಂಬ ಆಸೆ ಇತ್ತಂತೆ. ಆದರೆ ಶರಣ್ಯಾ ಆಕ್ಟರ್ ಆಗಿದ್ದಾರೆ. 
ಇನ್ನು ಶರಣ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸದಾ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಈ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶರಣ್ಯಾ ಶೆಟ್ಟಿ ಕ್ಯಾಟ್ ವಾಕ್ ಸೇರಿದಂತೆ ಎಲ್ಲವನ್ನೂ ಕಲಿತಿದ್ದರು. ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದರು. 
ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯಾ ಸ್ಫರ್ಧೆ ಮಾಡಿದ್ದರು. ಬಳಿಕ 2019ರ ಮಿಸ್‌ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಜೊತೆಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಫೈನಲಿಸ್ಟ್ ಕೂಡಾ ಆಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.