ಮಗುವನ್ನು ಗಂಡನ ಕೈಯಲ್ಲಿ ಕೊಟ್ಟು ದುಬೈಗೆ ಹಾರಿದ ಸತ್ಯ ಧಾರಾವಾಹಿ ನಟನ ಪತ್ನಿ
Feb 26, 2025, 17:14 IST
|

ಚಿತ್ರರಂಗದವರು ವಿಭಿನ್ನ ರೀತಿಯಲ್ಲಿ ಮಕ್ಕಳನ್ನು ಬೆಳೆಸುತ್ತಾರೆ. ಹೌದು ಸತ್ಯ ಧಾರಾವಾಹಿ ನಟ ಸಾಗರ್ ಬಿಳಿಗೌಡ ಅವರು ಪತ್ನಿ ಸಿರಿ ರಾಜು ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಸಿರಿ ಅವರು ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಹೋಗಿರೋದು ಕೆಲವರಿಗೆ ಚಿಂತೆ ಆಗಿದೆ. ಈ ಚಿಂತೆಯನ್ನು ಸಾಗರ್ ಕಡಿಮೆ ಮಾಡಿದ್ದಾರೆ ಎನ್ನಬಹುದು.
ಅಷ್ಟಕ್ಕೂ ನಮ್ಮ ಪುಟ್ಟ ಮಗುವನ್ನು ಮನೆಯಲ್ಲಿಯೇ ಬಿಟ್ಟು ಟ್ರಾವೆಲಿಂಗ್ ಮಾಡುತ್ತಿದ್ದಾಳೆ ಎಂದು ಕೆಲವರಿಗೆ ಚಿಂತೆಯಾಗಿದೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ನಮ್ಮ ಮಗುವನ್ನು ನೋಡಿಕೊಳ್ಳಲು ಅವಳ ತಂದೆ, ಅಜ್ಜಿ-ತಾತ ಎಲ್ಲರೂ ಇದ್ದಾರೆ. ಮಗುವನ್ನು ನೋಡಿಕೊಳ್ಳುವ ಸಾಮರ್ಥ್ಯ ಇದೆ. ಮಗುವನ್ನು ಮನೆಯಲ್ಲಿಯೇ ಬಿಟ್ಟು ಹೊರಗಡೆ ಹೋಗಲು ತಾಯಿಗೆ ದೊಡ್ಡ ನಂಬಿಕೆ ಬೇಕು. ನಾನು ಆ ನಂಬಿಕೆಯನ್ನು ಗಳಿಸಿದ್ದೇನೆ ಎಂದು ಭಾವಿಸ್ತೀನಿ.
https://youtube.com/shorts/5Wbv0RVbMTU?si=qrLiYCOQtq-3HeEP
ನನ್ನ ಪತ್ನಿಗೂ ಹಾಲಿಡೇ ಬೇಕು, ಅವಳಿಗೂ ಸ್ವಲ್ಪ ರಿಲ್ಯಾಕ್ಸ್ ಆಗೋಕೆ ಸಮಯ ಬೇಕು. ನಾವು ಮಗು ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದಾಗಿನಿಂದ ಇಲ್ಲಿಯವರೆಗೆ ಮನೆ ಕೆಲಸಗಳನ್ನು ಮಾಡಿಕೊಳ್ಳುತ್ತ, ಮಗುವಿನ ಆರೈಕೆಯನ್ನು ಮಾಡೋದು ಸುಲಭ ಅಲ್ಲ, ಅದನ್ನು ಸಿರಿ ತುಂಬ ನೀಟ್ ಆಗಿ ಮಾಡಿದ್ದಾಳೆ. ಆಗ ನಾನಂತೂ ಏಕಕಾಲಕ್ಕೆ ಎರಡು ಶೋಗಳನ್ನು ಮಾಡುತ್ತಿದ್ದೆ, ಟ್ರಾವೆಲ್ ಕೂಡ ಮಾಡುತ್ತಿದ್ದೆ.
ಅಂದಹಾಗೆ ಸಿರಿ ರಾಜು ಅವರು ವಿಯೆಟ್ನಾಂಗೆ ಹೋಗಿದ್ದು, ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಗರ್ ಬಿಳಿಗೌಡ ಅವರ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಕೆಲ ಸೆಲೆಬ್ರಿಟಿಗಳು ಕೂಡ ಕಾಮೆಂಟ್ ಮಾಡಿ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಪತಿಯ ಪೋಸ್ಟ್ ನೋಡಿ ಸಿರಿ ರಾಜು ಅವರು, ಇದನ್ನು ಓದಿ ನನ್ನ ಕಣ್ಣಲ್ಲಿ ನೀರು ಬಂತು ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.