ಎಲ್ಲಾ ಮಾಡಿ ಕೈಕೊಟ್ಟ ಪ್ರೇಮಿ, ಯುವಕನ ಮನೆ ಮುಂದೆ ನಡುರಾತ್ರಿ ಧರಣಿ ಕೂತ ಸ್ಕೂಲ್ ಟೀಚರ್

 | 
Ghu

ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎನ್ನುವ ಮಾತು ಕೇಳಿ ಇರುತ್ತೀರಿ. ಆಕೆ ತನ್ನ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ಹೀಗೆ ಶಾಲೆ ಕಾಲೇಜಿಗೆ ಹೋಗಿ ಬರ್ತಿರಬೇಕಾದ ಸಂದರ್ಭದಲ್ಲಿಅದೇ ಊರಿನ ಒಬ್ಬಾತನ ಜೊತೆಗೆ ಸ್ನೇಹ ಬೆಳೆದಿತ್ತು. ಆರಂಭದಲ್ಲಿ ಎಲ್ಲರಂತೆ ಇವರದ್ದೂ ಕೇವಲ ಸ್ನೇಹವಾಗಿಯೇ ಇತ್ತು. ದಿನಗಳು ಕಳೆದಂತೆ ಅವರಿಬ್ಬರ ನಡುವೆ ಹೆಚ್ಚು ಹೆಚ್ಚು ಆತ್ಮೀಯತೆ ಬೆಳೆಯಲಾರಂಭಿಸಿತ್ತು. 

ಇಬ್ಬರೂ ಅಂದುಕೊಂಡಂತೆ ಪರಸ್ಪರ ಪ್ರೀತಿ ಮಾಡಲಾರಂಭಿಸಿದ್ದರು. ಇಬ್ಬರ ಸಂಬಂಧ ಕೇವಲ ಪ್ರೀತಿಯಲ್ಲಿದ್ದರೆ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಲೇ ಇರಲಿಲ್ಲ. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಬಳಸಿಕೊಂಡಾತ ಜಾತಿ ಕಾರಣ ನೀಡಿ ಮದುವೆಯಾಗಲು ಹಿಂದೇಟು ಹಾಕಿದ್ದ. ತನಗೆ ನ್ಯಾಯಬೇಕೆಂದು ಹಠ ಹಿಡಿದ ಆಕೆ ಪ್ರಿಯಕರನ ಮನೆ ಮುಂದೆ ಕುಳಿತು, ನ್ಯಾಯಬೇಕು ಎನ್ನುತ್ತಿದ್ದಾಳೆ.

ಹೌದು ಎಂಟು ವರ್ಷಗಳ ಕಾಲ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಮದುವೆಯಾಗುವುದಾಗಿ ನಂಬಿಕೆ, ಯುವಕನೊಬ್ಬ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾಳೆ. ಅಂದಹಾಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡು ಮದುವೆಯಾಗಲು ನಿರಾಕಿಸಿದ್ದಾನೆ ಎಂದು ಆರೋಪಿಸಿ ಗ್ರಾಮದ ಮಂಜು ಎಂಬಾತನ ಮನೆ ಮುಂದೆ ರಮ್ಯಶ್ರೀ ಎಂಬಾಕೆ ಪ್ರತಿಭಟನೆಗೆ ಕುಳಿತಿದ್ದಾಳೆ.

ಮಂಜು ಮನೆಯವರೆಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ಸುಮಾರಿಗೆ ಆತನ ಮನೆ ಬಳಿಗೆ ಬಂದ ಆಕೆ, ಮಂಜು ಹಾಗೂ ತನ್ನ ನಡುವೆ ಹೇಗೆಲ್ಲಾ ಸಂಬಂಧ ಬೆಳೆಯಿತು. ಆತ ಮದುವೆಗೂ ಮೊದಲು ತನ್ನ ಜೊತೆ ಹೇಗೆಲ್ಲಾ ಇದ್ದ, ಈಗ ಮದುವೆಯಾಗಲು ಯಾಕೆ ನಿರಾಕರಿಸುತ್ತಿದ್ದಾನೆ. ತನಗೆ ನ್ಯಾಯ ಬೇಕೇ ಬೇಕು ಎಂದೆಲ್ಲಾ ಹೇಳಿ ಮನೆಯ ಮುಂದೆ ಒಬ್ಬಳೇ ಕುಳಿತಿದ್ದಾಳೆ

ಒಂದು ರಾತ್ರಿ ಪೂರ್ತಿ ಮಂಜು ಮನೆಯ ಎದುರಿಗೆ ಕುಳಿತಿದ್ದಳು, ಬೆಳಗಾಗುತ್ತಲೇ ಆಕೆಯ ಮೇಲೆ ಮಂಜು ಮನೆಯವರು ಹಲ್ಲೆ ನಡೆಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ರಮ್ಯ ಶ್ರೀ ಹಾಗೂ ಮಂಜು ಮನೆಯವರ ನಡುವೆ ದೊಡ್ಡ ವಾಗ್ಯುದ್ಧವೇ ನಡೆದಿದ್ದು ಗಲಾಟೆಯಲ್ಲಿ ಗಾಯಗೊಂಡಿರೊ ರಮ್ಯ ಶ್ರೀ ಸದ್ಯ ಮಂಡ್ಯ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ಪೊಲೀಸ್ ಠಾಣೆಗೂ ದೂರು ನೀಡಲು ಮುಂದಾಗಿದ್ದಾಳೆ.