ಚಂದ್ರಯಾನ್-3 ಲ್ಯಾಂಡಿಂಗ್ ಹಿಂದಿನ ಮಾಸ್ಟರ್ ಮೈಂಡ್ ಮಹಿಳಾ ವಿಜ್ಞಾನಿ ಇವ್ರೇ ನೋಡಿ

 | 
ರು ಿ

 ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆ ಈಗ ಎಲ್ಲೆಡೆಯೂ ಅದೇ ಸುದ್ದಿ ಹೌದು ಈ ಯೋಜನೆಯ ಹಿಂದೆ ನೂರಾರು ವಿಜ್ಞಾನಿಗಳು, ಸಾವಿರಾರು ಕಾರ್ಮಿಕರ ಶ್ರಮವಿದೆ. ಆದರೆ ಚಂದ್ರಯಾನ ಯೋಜನೆಯನ್ನು ಮುನ್ನಡೆಸುತ್ತಿರುವ ವ್ಯಕ್ತಿ ಬಗ್ಗೆ ತಿಳಿದಿದೆಯೇ? ಎಸ್ ಸೋಮನಾಥ್ ಅವರು ಇಸ್ರೋ ಅಧ್ಯಕ್ಷರಾಗಿದ್ದರೂ, ಚಂದ್ರಯಾನ-3ರ ನೇತೃತ್ವ ವಹಿಸಿರುವುದು ಅವರಲ್ಲ. ಭಾರತದ 'ರಾಕೆಟ್ ವುಮನ್' ಎಂದೇ ಗುರುತಿಸಲಾದ ರಿತು ಕರಿಧಾಲ್ ಶ್ರೀವಾಸ್ತವ ಎಂಬ ಮಹಿಳಾ ವಿಜ್ಞಾನಿ.

ಅಂದಹಾಗೆ, ಸುಮಾರು 54 ಮಂದಿ ಮಹಿಳಾ ವಿಜ್ಞಾನಿಗಳು/ ಎಂಜಿನಿಯರ್‌ಗಳು ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ.ರಿತು ಕರಿಧಾಲ್ ಶ್ರೀವಾಸ್ತವ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ. ಮಂಗಳಯಾನದ ಮಾರ್ಸ್ ಆರ್ಬಿಟರ್ ಮಿಷನ್‌ನ ಕನಸು ರೂಪಿಸುವುದರಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಉತ್ತರ ಪ್ರದೇಶದ ಲಖನೌದಲ್ಲಿ 1975ರ ಏಪ್ರಿಲ್ 13ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಿತು, ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಲಖನೌ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ನಂತರ, 1996ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದರು. ಅದೇ ವಿಭಾಗದಲ್ಲಿ ಪಿಎಚ್‌ಡಿಗೆ ಕೂಡ ನೋಂದಾಯಿಸಿಕೊಂಡು, ಬೋಧನೆಯನ್ನೂ ಮಾಡಿದ್ದರು. ಆರು ತಿಂಗಳ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪೂರೈಸಿದರು. ಅವರು ವಿದ್ಯಾರ್ಥಿದೆಸೆಯಲ್ಲಿ ಬಹಳ ಚುರುಕಾಗಿದ್ದರು ಎನ್ನುತ್ತಾರೆ ಲಖನೌ ವಿವಿಯಲ್ಲಿನ ಅವರ ಗುರುಗಳು.

ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ಬಾಹ್ಯಾಕಾಶದ ಅನ್ವೇಷಣೆಯ ಕಡೆಗೆ ವಿಶೇಷ ಆಸಕ್ತಿ ಮೂಡಿತ್ತು. ಇಸ್ರೋ ಅಥವಾ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸುವ ಪ್ರತಿ ಬಾಹ್ಯಾಕಾಶ ಚಟುವಟಿಕೆ ಕುರಿತಾದ ಪತ್ರಿಕಾ ಲೇಖನಗಳನ್ನು ಸಂಗ್ರಹಿಸುವುದು ಶಾಲಾ ದಿನಗಳಿಂದಲೂ ಅವರು ಬೆಳೆಸಿಕೊಂಡು ಬಂದ ಹವ್ಯಾಸವಾಗಿತ್ತು. ಸಂಪನ್ಮೂಲಗಳು ಹಾಗೂ ತರಬೇತಿ ಸಂಸ್ಥೆಗಳ ಕೊರತೆ ನಡುವೆ ಅವರು ಇಂತಹ ಓದನ್ನೇ ತಮ್ಮ ಸ್ಫೂರ್ತಿಯ ಸೆಲೆಯನ್ನಾಗಿಸಿಕೊಂಡಿದ್ದರು.

ರಾತ್ರಿ ಆಕಾಶದತ್ತ ಕುತೂಹಲದಿಂದ ವೀಕ್ಷಿಸುವುದು, ಬಾಹ್ಯಾಕಾಶದಾಚೆಗಿನ ಲೋಕದ ಕುರಿತು ಆಲೋಚಿಸುವುದು ಅವರಲ್ಲಿ ವಿಜ್ಞಾನದ ಕುರಿತಾದ ಆಸಕ್ತಿಯನ್ನು ಹೆಚ್ಚಿಸಿತ್ತು. ಚಂದ್ರನ ಬಗ್ಗೆ ಅವರಿಗೆ ವಿಪರೀತ ಕುತೂಹಲ. ನಕ್ಷತ್ರಗಳ ಕುರಿತೂ ಸಾಕಷ್ಟು ಅಧ್ಯಯನ ನಡೆಸಿದರು.

1997ರ ನವೆಂಬರ್‌ನಲ್ಲಿ ಅವರು ಇಸ್ರೋ ವಿಜ್ಞಾನಿಯಾಗಿ ಸೇರಿಕೊಳ್ಳುವ ಮೂಲಕ ತಮ್ಮ ಕನಸಿನ ಮೊದಲ ಮೆಟ್ಟಿಲನ್ನು ತುಳಿದರು ಎಂದು ವಿಮೆನ್ ಎಕನಾಮಿಕ್ ಫೋರಂ ಮಾಹಿತಿ ಹೇಳುತ್ತದೆ. ಇಸ್ರೋದ ಅನೇಕ ಪ್ರತಿಷ್ಠಿಯ ಯೋಜನೆಗಳಲ್ಲಿ ರಿತು ಕೆಲಸ ಮಾಡಿದ್ದಾರೆ. ಹಾಗೆಯೇ ಹಲವು ಯೋಜನೆಗಳಲ್ಲಿ ಕಾರ್ಯಾಚರಣಾ ನಿರ್ದೇಶಕಿಯ ಜವಾಬ್ದಾರಿಯುತ ಪಾತ್ರ ನಿರ್ವಹಿಸಿ ಯಶಸ್ವಿಯಾಗಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.