ಎಲ್ಲರನ್ನೂ ಕಾಮಿಡಿ ಮೂಲಕ ನಗಿಸುತ್ತಿದ್ದ ಶರಣ್ ಇನ್ನು ನೆನಪು ಮಾತ್ರ, ಕಂಗಾಲಾದ ಅಕ್ಕ

 | 
ಲ್

ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ನಟನೊಬ್ಬ ಕುಡಿದು ವಾಹನ ಚಲಾಯಿಸಿ, ಮತ್ತೋರ್ವ ನಟ, ಸಹಾಯಕ ನಿರ್ದೇಶಕನ ಸಾವಿಗೆ ಕಾರಣವಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ನಟ ಶರಣ್‌ ರಾಜ್ ಎಂದು ಗುರುತಿಸಲಾಗಿದೆ. ಇವರು ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಕೆಲ ಸಿನಿಮಾಗಳಲ್ಲಿ ನಟರಾಗಿಯೂ ಬಣ್ಣ ಹಚ್ಚಿದ್ದಾರೆ. 

ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಶರಣ್‌ ರಾಜ್ ನಿಧನರಾಗಿದ್ದಾರೆ. ಹೌದು ಶರಣ್ ರಾಜ್‌ ಅವರು ರಾತ್ರಿ 11.30ರ ಸುಮಾರಿಗೆ ಕೆಲಸ ಮುಗಿಸಿ, ಮನೆಗೆ ತೆರಳುತ್ತಿದ್ದರು. ಕೆಕೆ ನಗರದ ಸಮೀಪ ಹಾದು ಹೋಗುತ್ತಿರುವಾಗ ಅವರ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಶರಣ್‌ರಾಜ್ ಅವರು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. 

ಇನ್ನು, ಅಪಘಾತ ಎಸಗಿದ ಕಾರಿನ ಚಾಲಕನನ್ನು ನಟ ಪಳನಿಯಪ್ಪನ್ ಎಂದು ಗುರುತಿಸಲಾಗಿದ್ದು, ಆತ ಕೂಡ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು ಎಂದು ಮಾಹಿತಿ ತಿಳಿದುಬಂದಿದೆ. ಅಂದಹಾಗೆ, ನಟ ಪಳನಿಯಪ್ಪನ್ ಕುಡಿದು ವಾಹನ ಚಲಾಯಿಸಿರುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ವೆಟ್ರಿಮಾರನ್‌ ಅವರು ಭಾರತದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅಂತಹ ಸ್ಟಾರ್ ನಿರ್ದೇಶಕರ ಬಳಿ ಶರಣ್‌ ರಾಜ್ ಕೆಲಸ ಮಾಡಿಕೊಂಡಿದ್ದರು. 

ವೆಟ್ರಿಮಾರನ್ ಅವರ ಸೂಪರ್ ಹಿಟ್ ಸಿನಿಮಾಗಳಾದ ವಡಾ ಚೆನ್ನೈ, ಅಸುರನ್‌ ಸಿನಿಮಾಗಳಲ್ಲೂ ಶರಣ್‌ ರಾಜ್ ನಟಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮದುರವೊಯಲ್‌ನ ಧನಲಕ್ಷ್ಮೀ ರಸ್ತೆಯಲ್ಲಿ ಶರಣ್ ರಾಜ್‌ ಅವರು ವಾಸವಾಗಿದ್ದರು. ತಮ್ಮ ಮನೆಗೆ ವಾಪಸಾಗುವಾಗ ಕೆಕೆ ನಗರದ ಆರ್ಕೊಟ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಬಳಿಕ ಅಲ್ಲಿನ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶರಣ್ ರಾಜ್ ಮೃತದೇಹವನ್ನು ಕಳುಹಿಸಲಾಗಿದ್ದು, ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. 

ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಲಿಗ್ರಾಮಂ ವಾಸಿಯಾಗಿರುವ ಆರೋಪಿ ಪಳನಿಯಪ್ಪನ್‌, ಅಪಘಾತದ ವೇಳೆ ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಎಂದು ಗೊತ್ತಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಸದ್ಯ ಬಂಧಿಸಿ, ವಿಚಾರಣೆ ಮಾಡುತ್ತಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.