ಅಮೃತಧಾರೆ ರಾಜೇಶ್ ಅವರ ನಿಜವಾದ ಪತ್ನಿ ಇವರೇ;

 | 
Uu

ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ಯಾರಿಗೆ ತಾನೆ ಗೊತ್ತಿಲ್ಲ. ಅನೇಕ ಸಿನಿಮಾಗಳಲ್ಲಿ ಮಿಂಚಿರುವ ರಾಜೇಶ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಮೃತಧಾರೆ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಾಜೇಶ್ ನಟರಂಗ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರೊಬ್ಬ ಉತ್ತಮ ಕಲಾವಿದ ಎನ್ನುವುದನ್ನು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ.

ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ ನಟ ರಾಜೇಶ್ ನಟರಂಗ ಪ್ರಭುದ್ದ ನಟ. ತಮ್ಮ ಅತ್ಯದ್ಭುತ ನಟನ ಶೈಲಿಯಿಂದಲೇ ಎಲ್ಲರ ಮನಸ್ಸನ್ನ ಗೆದ್ದವರು. ರಾಜೇಶ್ ನಟರಂಗ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು, ಹೌದು ಬಸವನ ಗುಡಿಯ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮಾಡಿದ್ರು.

ಈ ಸಮಯದಲ್ಲಿ ಇವರಿಗೆ ಅಭಿನಯದ ಮೇಲೆ ತುಂಬಾ ಆಸಕ್ತಿ ಇದ್ದ ಕಾರಣ ನಟರಂಗ ಎಂಬ ರಂಗಸಂಸ್ಥೆ ಒಂದನ್ನು ಸೇರುತ್ತಾರೆ ಆಗ ಮೊದ ಮೊದಲು ಸಿಕ್ಕಂತಹ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಈಗ ಇವರು ಚಲನಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇನ್ನು ರಾಜೇಶ್ ಅವರು ಥಿಯೇಟರ್ ಗ್ರೂಪ್ನಲ್ಲಿ ಕಲಿತು ಬಿ ಎಸ್ ಸಿ ಪದವಿಯನ್ನು ಮುಗಿಸಿ ನಂತರ ಆರು ತಿಂಗಳು ಕಂಪ್ಯೂಟರ್ ಕೋರ್ಸ್ಗೆ ಸೇರಿದರು. 

ಆದರೆ ಕೆಲ ಕಾರಣಗಳಿಂದ ಅದನ್ನು ಬೇಗನೆ ಬಿಟ್ಟು ದೆಹಲಿಗೆ ಹೋಗಿ ಅಲ್ಲಿ ತೆರೆಮರೆಯ ಚಟುವಟಿಕೆಗಳ ಬಗ್ಗೆ ನಿರ್ವಹಣೆಯನ್ನು ಮಾಡುವುದಕ್ಕೆ ಪ್ರಾರಂಭ ಮಾಡಿಕೊಂಡರು. ಅದರಲ್ಲಿ ಅವರಿಗೆ ಆಸಕ್ತಿ ಹೆಚ್ಚಾಯ್ತು ಮತ್ತು ಉತ್ತಮ ಕೆಲಸಗಳನ್ನು ಕೂಡ ಮಾಡಿದರು. ಇನ್ನು ರಾಜೇಶ್ ಅವರು ಕನ್ನಡದ ಜನಪ್ರಿಯ ಚಾನಲ್ ಆಗಿರುವ ಉದಯ ಟಿವಿಯಲ್ಲಿ ಮೂರುವರೆ ವರ್ಷಗಳ ಕಾಲ ನಿರ್ಮಾಪಕರಾಗಿ ಕೆಲಸ ಮಾಡಿದರು. ಇದಾದ ಮೇಲೆ ಇವರು ಟಿವಿ ಶೋಗಳಲ್ಲಿ ನಟನೆ ಮಾಡುವುದಕ್ಕೆ ಶುರು ಮಾಡಿಕೊಂಡರು. ಇನ್ನು ಮಾಯಾ ಮೃಗ ಇವರಿಗೆ ದೊಡ್ಡ ಬ್ರೇಕ್ ನೀಡಿತು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೆಂಗಳೂರಲ್ಲಿ ಸ್ವಂತ ಮನೆ ಓಡಾಡೋದಕ್ಕೆ ಹೆಂಡತಿಗೆ ಬೇರೆ ಗಂಡನಿಗೆ ಬೇರೆ ಕಾರು ಹೊಂದಿರುವ ನಟ ಹುಟ್ಟು ಶ್ರೀಮಂತರೇನಲ್ಲ. ಎಲ್ಲವನ್ನೂ ಕಷ್ಟ ಪಟ್ಟು ಗಳಿಸಿದ್ದು. ಒಟ್ಟಿನಲ್ಲಿ ಕೆಲವರು ತಮ್ಮ ನಟನೆಗಿಂತ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗೋದು ನಮ್ಮ ಇಂಡಸ್ಟ್ರಿಯಲ್ಲಿ ಕಾಮನ್ ಆಗ್ಬಿಟ್ಟಿದ್ದೆ ಆದ್ರೆ ನಟ ರಾಜೇಶ್ ನಟರಂಗ ಎಲ್ಲರಂತಲ್ಲ ಎಲ್ಲಿಯೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ಮಗಳು ಸಹ ಕಲಾವಿದೆಯಾದ್ರೂ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿಲ್ಲ ಮಾತಾನಾಡಿಲ್ಲ ಅನ್ನೋದು ವಿಶೇಷ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.