ಮಹಾಮಾರಿ ಕ್ಯಾನ್ಸರ್ ತುತ್ತಾದ ಶಿವ ರಾಜ್ ಕುಮಾರ್
Nov 9, 2024, 17:41 IST
|

ಸದ್ಯದಲ್ಲೇ ಒಂದು ತಿಂಗಳು ಅಮೆರಿಕಾಕ್ಕೆ ಶಿವಣ್ಣ ತೆರಳಲಿದ್ದಾರೆ. ಅಲ್ಲಿ 4 ಸೆಷನ್ ಟ್ರೀಟ್‌ಮೆಂಟ್ ನಡೆಯಲಿದ್ದು, ಬಳಿಕ ಒಂದು ಸರ್ಜರಿ ಸಹ ಆಗಬೇಕಾಗಿದೆ ಎನ್ನಲಾಗಿದೆ. ಆದರೆ ಅದನ್ನು ಇಲ್ಲಿಯೇ ಮಾಡಿಸಿಕೊಳ್ಳುವುದೋ ಅಥವಾ ಅಮೆರಿಕಾದಲ್ಲೋ ಎಂಬುದನ್ನು ಬಳಿಕ ನಿರ್ಧರಿಸಲಾಗುವುದು ಎಂದಿವೆ ಆಪ್ತ ಮೂಲಗಳು.
ಕನ್ನಡ ಸಿನಿಮಾರಂಗದ ಹಿರಿಯ ನಟ ಶಿವರಾಜ್‌ಕುಮಾರ್ ಅವರು ಬಹಳಷ್ಟು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕಾಡುತ್ತಿದ್ದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದುಕೊಳ್ಳುತ್ತಲೇ ತಮ್ಮ ನಟನೆಯ 'ಭೈರತಿ ರಣಗಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ, ಕಿರುತೆರೆಯ 'ಡಿಕೆಡಿ' ರಿಯಾಲಿಟಿ ಶೋದಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು ನಾನು ನನ್ನ ಅನಾರೋಗ್ಯವನ್ನು ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ.
ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನೂ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ ಎಂದಿದ್ದಾರೆ. ಶಿವರಾಜ್‌ಕುಮಾರ್ ಅವರೇ ಸ್ವತಃ ಹೇಳಿದಂತೆ ನನ್ನ ಅನಾರೋಗ್ಯ ಹಾಗು ಕಂಡೀಷನ್ ಬಗ್ಗೆ ಕನ್ನಡ ಸಿನಿಮಾ ಉದ್ಯಮದಲ್ಲಿ ಅನೇಕರಿಗೆ ತಿಳಿದಿದೆ. ಈ ಬಗ್ಗೆ ನನ್ನ ಆಪ್ತರು ಬಹಳಷ್ಟು ಧೈರ್ಯ ಹೇಳಿದ್ದಾರೆ.
ಹೌದು, ನನಗೆ ಕ್ಯಾನ್ಸರ್ ಖಾಯಿಲೆ ಬಂದಿದೆ. ಆದರೆ, ಪ್ರಾರಂಭದಲ್ಲಿ ನಾನು ಭಯಪಟ್ಟರೂ ಈಗ ಧೈರ್ಯ ತಂದುಕೊಂಡಿದ್ದೇನೆ. ಚಿಕಿತ್ಸೆ ತೆಗೆದುಕೊಳ್ಳಲಿದ್ದೇನೆ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025