ಮನೆಯಲ್ಲಿ ಲುಂಗಿ ಎತ್ತಿ ಓಡಾಡಿದ ಶಿವಣ್ಣ, ಪಕ್ಕದಲ್ಲಿದ್ದ ಪತ್ನಿ ಶಾ ಕ್

 | 
Je
 ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ಸ್ಟಾರ್ ನಟ ಶಿವರಾಜ್ ಕುಮಾರ್. ಇದೀಗ ಭೈರತಿ ರಣಗಲ್ ಸಿನಿಮಾದ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಇದರ ನಡುವೆಯೇ ಶಿವರಾಜ್ ಕುಮಾರ್ ಮನೆಯಲ್ಲಿ ಶುಭಕಾರ್ಯವೊಂದು ನಡೆದಿದೆ. ಶಿವರಾಜ್ ಕುಮಾರ್ ಅವರು ನೂತನ ಫಾರ್ಮ್ ಹೌಸ್ ನಿರ್ಮಿಸಿದ್ದು ಅದರ ಗೃಹ ಪ್ರವೇಶ ಇತ್ತೀಚೆಗಷ್ಟೆ ನಡೆದಿದೆ. ಕುಟುಂಬಸ್ಥರು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಗೃಹ ಪ್ರವೇಶ ನಡೆದಿದೆ.
ಕೆಲ ವರ್ಷಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರುಗಳು ಕನಕಪುರದ ಬಳಿ ಜಮೀನು ಖರೀದಿ ಮಾಡಿದ್ದರು. ಅಲ್ಲಿ ಈಗ ಬೃಹತ್ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಫಾರ್ಮ್ ಹೌಸ್​ ಗೃಹಪ್ರವೇಶವನ್ನು ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಕುಟುಂಬದವರು ಮಾಡಿದ್ದಾರೆ. 
ಕುಟುಂಬಸ್ಥರು ಮತ್ತ ಆಪ್ತರ ಸಮ್ಮುಖದಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ಮಾಡಿದಂತೆ ಕಂಡು ಬಂದಿದೆ. ಶಿವಣ್ಣ ವೈಟ್ ಪಂಚೆ ಶರ್ಟ್ ಶಲ್ಯ ಧರಿಸಿದ್ದರೆ ಅವರ ಪತ್ನಿ ಗೀತಾ ಶಿವರಾಜ್​ ಕುಮಾರ್ ಅವರೂ ಟ್ರೆಡಿಷನಲ್ ಆಗಿಯೇ ರೆಡಿಯಾಗಿದ್ದರು. ಇಬ್ಬರ ಕೊರಳಲ್ಲೂ ಹಾರ ಇತ್ತು. ಮಕ್ಕಳು ಮೊಮ್ಮಕ್ಕಳು ಎಲ್ಲರ ಆಗಮನದಿಂದ ಮನೆ ಕಳೆಗಟ್ಟಿತ್ತು.
ಪೂಜೆ ಮಾಡಿ, ತಮ್ಮ ಮನೆ ದೇವರ ಫೋಟೊ ಹಿಡಿದುಕೊಂಡು ಶಿವರಾಜ್ ಕುಮಾರ್ ಫಾರ್ಮ್ ಹೌಸ್ ಪ್ರವೇಶ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೋ ಪೂಜೆಯನ್ನು ಸಹ ಶಿವರಾಜ್ ಕುಮಾರ್ ದಂಪತಿ ಮಾಡಿದ್ದಾರೆ. ಆತ್ಮೀಯರು ಮತ್ತು ಕುಟುಂಬದ ಸದಸ್ಯರುಗಳು ಈ ಪೂಜೆಯಲ್ಲಿ ಭಾಗಿಯಾಗಿದ್ದರು. ಅದೇ ಸಮಯದಲ್ಲಿ ಮೊಮ್ಮಕ್ಕಳ ಜೊತೆ ಹಾಯಾಗಿ ಶಿವಣ್ಣ ದಂಪತಿಗಳು ಕಳೆದಿದ್ದಾರೆ.
ಶಿವರಾಜ್ ಕುಮಾರ್ ಫಾರ್ಮ್ ಹೌಸ್ ವಿಶಾಲವಾಗಿದ್ದು, ಭಿನ್ನವಾದ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮನೆಯ ಮುಂದೆ ವಿಶಾಲ ಜಾಗವಿದ್ದು, ಅಲ್ಲಿ ಉದ್ಯಾನ, ತೋಟಗಳನ್ನು ಬೆಳೆಸುವ ಯೋಜನೆ ಶಿವಣ್ಣ ದಂಪತಿಗೆ ಇದ್ದಂತಿದೆ. ಇತ್ತೀಚೆಗಷ್ಟೆ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಭೇಟಿ ನೀಡಿದ್ದರು. ತಮ್ಮ ನೂತನ ಫಾರ್ಮ್​ ಹೌಸ್ ಗೃಹ ಪ್ರವೇಶಕ್ಕೆ ಮುಂಚೆ ತಮ್ಮ ಗ್ರಾಮ ದೇವರಿಗೆ ನಮಿಸಿ ಬಂದಿದ್ದರು. ಅಲ್ಲಿನ ಕುಟುಂಬ ಸದಸ್ಯರಿಗೆ ಆಹ್ವಾನವನ್ನೂ ಸಹ ನೀಡಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.