ಭಾವನಾಗೆ ತಾಳಿ ಕಟ್ಟಿದ ಸಿದ್ದು; ಇವತ್ತಿನ ಸಂಚಿಕೆಯಲ್ಲಿ ರೋಚಕ ತಿರುವು

 | 
Ru

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ರೋಚಕ ತಿರುವು ಬಂದಿದೆ. ವಿಜಯ್ ರಾಘವೇಂದ್ರ, ರಮ್ಯಾ ನಟನೆಯ ಸೇವಂತಿ ಸೇವಂತಿ‘ ಸಿನಿಮಾದ ದೃಶ್ಯವೊಂದು ಈ ಧಾರಾವಾಹಿಯಲ್ಲಿ ರಿಪೀಟ್ ಆಗಿದೆ. ಈ ದೃಶ್ಯದಿಂದ ಧಾರಾವಾಹಿಯ ಕಥೆಯೇ ಹೊಸ ತಿರುವು ಪಡೆದುಕೊಳ್ಳಲಿದೆ. ಭಾವನಾಳನ್ನು ಉಳಿಸಿಕೊಳ್ಳಲು, ಭಾವನಾ ತನಗೆ ಸಿಗಬೇಕು ಎಂದು ಸಿದ್ದೇಗೌಡ್ರು ಎಲ್ಲರಿಗೂ ಶಾಕ್‌ ಉಂಟುಮಾಡುವ ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಊರಹಬ್ಬಕ್ಕೆಂದು ಶ್ರೀನಿವಾಸ್, ಬೈರೇಗೌಡ ಕುಟುಂಬ, ಜಾಹ್ನವಿ-ಜಯಂತ್ ಎಲ್ಲರೂ ಒಟ್ಟಿಗೆ ಸೇರಿದ್ದಾರೆ. ಸಿದ್ದೇಗೌಡ-ಪೂರ್ವಿ ನಿಶ್ಚಿತಾರ್ಥ ನಡೆದಿದೆ. ಸಿದ್ದು ತುಂಬ ಒಳ್ಳೆಯವನು ಅಂತ ಪೂರ್ವಿಗೆ ಪರೋಕ್ಷವಾಗಿ ನೀಲು ಹೇಳಿ ಅವನ ಮೇಲೆ ಪ್ರೀತಿ ಬರುವ ಹಾಗೆ ಮಾಡುತ್ತಿದ್ದಾಳೆ. ಎಲ್ಲಿ ತನ್ನ ಭಾವನಾಳನ್ನು ಕಳೆದುಕೊಳ್ತೀನಿ ಎನ್ನುವ ಭಯದಲ್ಲಿ ಸಿದ್ದೇಗೌಡ್ರು ರಾತ್ರಿ  ಮಲಗಿದ್ದಾಗ ಭಾವನಾಗೆ ತಾಳಿ ಕಟ್ಟಿದ್ದಾರೆ.

ಹೌದು, ಭಾವನಾಗೆ ಸಿದ್ದೇಗೌಡ್ರು ತಾಳಿ ಕಟ್ಟಿದ್ದಾರೆ. ತನಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿರುವ ಗೌಡ್ರು ತನ್ನ ಬೆನ್ನ ಹಿಂದೆ ಬಿದ್ದಿರೋದು ಭಾವನಾಗೆ ಇಷ್ಟವೇ ಆಗ್ತಿಲ್ಲ. ಭಾವನಾ ತನ್ನನ್ನು ಇಷ್ಟಪಡಲ್ಲ ಅಂತ ಸಿದ್ದೇಗೌಡ್ರಿಗೆ ಗೊತ್ತಿದೆ. ಹಾಗಾಗಿ ಅವನು ಭಾವನಾ ಒಪ್ಪಿಗೆಯೇ ಇಲ್ಲದೆ ಅವಳಿಗೆ ತಾಳಿ ಕಟ್ಟಿದ್ದಾನೆ. ಈ ಪ್ರೋಮೋ ರಿಲೀಸ್ ಆಗಿದ್ದು, ಇದು ಕನಸೋ ನನಸೋ ಅಂತ ಕಾದು ನೋಡಬೇಕಿದೆ.

ಒಂದು ವೇಳೆ ಇದು ನಿಜವಾಗಲೂ ನಡೆದರೆ ಧಾರಾವಾಹಿ ರೋಚಕ ತಿರುವು ಪಡೆದುಕೊಳ್ಳುತ್ತದೆ. ಭಾವನಾಗೆ ಯಾರು ತಾಳಿ ಕಟ್ಟಿದರು ಅಂತ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಾರೆ. ಇದರಿಂದ ಪೂರ್ವಿ-ಸಿದ್ದೇಗೌಡ್ರ ಮದುವೆ ಹೇಗೆ ಮುರಿಯುತ್ತದೆ ಅಂತ ಕಾದು ನೋಡಬೇಕಿದೆ. ಈಗಾಗಲೇ ಪೂರ್ವಿಗೆ ಸಿದ್ದೇಗೌಡ್ರ ಮೇಲೆ ಒಳ್ಳೆಯ ಭಾವನೆಗಳು ಬರಲು ಶುರುವಾಗಿವೆ. ಹಾಗಾಗಿ ಸಿದ್ದು ತನಗೆ ಬೇಕು ಅಂತ ಪೂರ್ವಿ ಹಠ ಹಿಡಿದುಕೊಂಡು ಕೂರಲೂಬಹುದು. ಆದರೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.