ಹೆಣ್ಣಿನ ತೇಜೋವಧೆ ಮಾಡಿದ್ರೆ ಹುಷಾರ್, ಕೆರೆಹಳ್ಳಿಗೆ ಕ್ಲಾಸ್ ತೆಗೆದುಕೊಂಡ ಸೌಮ್ಯ ಹೆಗ್ಡೆ
Apr 27, 2025, 17:33 IST
|

ಹಿಂದುತ್ವ ಕುಲ ಕಳಂಕ ಸ್ತ್ರೀಶೋಷಕ ದೇಶ-ಧರ್ಮನಾಶಿ ಮೀರ್ ಸಾದಿಕ ಪುನೀತ್ ಕೆರೆಹಳ್ಳಿ ಹಾಗೂ ಇವರ ಬೆಂಬಲಿಗರೇ ,ಸಂಗಡಿಗರೇ.ಸೌಜನ್ಯ ವಿಚಾರವನ್ನು ಸೇರಿದಂತೆ ಮೊನ್ನೆ ಕಾಶ್ಮೀರದ ಪೇಹೆಲ್ಗಾಂ ನಲ್ಲಿ ಹಿಂದೂ ನರಮೇಧ ನಡೆಸಿದ ಪಾಕಿಸ್ತಾನಿ ಇಸ್ಲಾಮಿಕ್ ಟೆರರಿಸ್ಟ್ ಗಳಿಗೂ ದೇಶ ಒಳಗೆ ಹಿಂದುತ್ವದ ಸೋಗಿನಲ್ಲಿರೋ ನಿಮ್ಮಂತೋರಿಗೂ ಏನು ಸಹ ಬೇಧ ಇಲ್ಲಾ. ಹೆಣ್ಣು ಮಕ್ಕಳ ಭದ್ರತೆ ಇಸ್ಲಾಮಿಕ್ ಧರ್ಮದ ಕುರಿತಾಗಿ ಪೇಚಿನಲ್ಲಿರೋ ರಾಷ್ಟ್ರೀಯ ಭದ್ರತೆ ಎರಡು ವಿಚಾರವನ್ನ ಕೋಮಿನ ಬಣ್ಣ ಬಳಿದು, ಬೆಂಕಿ ಹಚ್ಚಿ ಆ ಬೆಂಕಿಗೆ ಅಮಾಯಕ ಹಿಂದೂ ಯುವಕರನ್ನ, ನಾಗರೀಕರನ್ನ ತಳ್ಳಿ ನೀವು ಐಶಾರಾಮಿ ಕಾರುಗಳಲ್ಲಿ ಓಡಾಡಿಕೊಂಡು ಕ್ಯೂ ಆರ್ ಕೋಡ್ ಹಾಕಿ ನಮ್ಮ ಪಾಪದ ಹಿಂದೂಗಳ ಹತ್ರ ಭಿಕ್ಷೆ ಹಾಕಿಸಿಕೊಳ್ಳೋರಿಗೆ ನನ್ನ ಬಗ್ಗೆ ಅಪಪ್ರಚಾರ ಮಾಡುವ ವ್ಯರ್ಥ ಚಟ ಇನ್ನು ಬಿಟ್ಟಿಲ್ಲ ಅಂದಮೇಲೆ ಇನ್ನುಮೇಲೆ ನಾನೇ ನಿಮ್ಮ ಪಾಲಿಗೆ ಕರ್ಮದಾತ ಶನಿ ಹಾಗೂ ಕಾಳಿ ಮಾತೆ.
ಸಿದ್ಧಾಂತ ವಿರೋಧಿಗಳ ಅಥವಾ ನನ್ನ ಭಾಷೆ,ಭಾವನೆ ಉದ್ದೇಶ ತಿಳಿಯುದೇ ಮಾಡೋ ಕೆಟ್ಟ ಕಮೆಂಟ್ ಗೆ ನಾನು ಸೋಷಿಯಲ್ ಮೀಡಿಯಾದಲ್ಲಿ ದಲ್ಲಾಗಲಿ ನಿಜ ಜೀವನದಲ್ಲಾಗಲಿ ಕ್ಯಾರೇ ಮಾಡಿದವಳಲ್ಲ ಮಾಡೋದು ಸಹ ಇಲ್ಲಾ.. ಆದ್ರೆ ನಿಮ್ಮಂತೋರ ವ್ಯವಸ್ಥಿತ ಷಡ್ಯಂತ್ರಗಳನ್ನ ಮಟ್ಟ ಹಾಕದ್ದೆ ಬಿಡಲ್ಲ ಯಾರು ಹೇಳಿದ್ದು ನಂಗೆ ರೀಚ್ ಕಡಿಮೆ ಆಯ್ತು ಅಂತಾ? ಅಥವಾ ನಂಗೆ ರೀಚ್ ಇದ್ರೇನೆ ಬದುಕು ಅನ್ನೋ ತರ?? ನನ್ನ ಹೆಸರೇಳಿಕೊಂಡು ನೀವು ರೀಚ್ ತಗೊಳ್ತಾ ಇರೋದ್ರ ಮರ್ಮ ಜನಕ್ಕೆ ಸಹ ತಿಳಿಯುತ್ತೆ ಬೇಕಾಗಿದ್ದ ಕ್ರಿಯೇಟ್ ಮಾಡಿ, ಆಡಿಯೋ ಅಲ್ಲಲ್ಲಿ ಕಟ್ ಮಾಡಿ ಎಡಿಟ್ ಮಾಡಿ ಅದನ್ನ ಪೋಸ್ಟ್ ಮಾಡೋರು ನಂಗೆ ಸೋಶಿಯಲ್ ಮೀಡಿಯಾ ಪಾಠ ಮಾಡೋದು ಒಳ್ಳೆಯ ಹಾಸ್ಯ ನಿಮ್ಮ ಸಲಹೆ ನೀವೇ ಇಟ್ಕೊಂಡು ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳಿ ಒಳ್ಳೇದಾಗತ್ತೇನೋ .
ನೋಡೋರ ಸಲುವಾಗಿ ಲೈಕ್ಸ್ ಸಲುವಾಗಿ ಮಾಡೋದು ಇವರೆಲ್ಲ ಅಂತಾ ನಿಮ್ಮ ನಿಮ್ಮ ಸೋಶಿಯಲ್ ಹ್ಯಾಂಡಲ್ನಲ್ಲಿ ವ್ಯೂ ಇಲ್ಲದ್ದೇನೆ ಕಾಣಿಸಿಕೊಳ್ಳುತ್ತಿದ್ದೀರಾ? ಸೇಲಾಗಿ ಪಾಕಿಸ್ತಾನ ಪಾಲಾದಳು ಅನ್ನೋ ಕರುನಾಡ ಸುಳ್ಳ ಗಿಳಿ ಮತ್ತು ಗ್ಯಾಂಗ್ ನೀವೆಲ್ಲ ಯಾವ ಪುರುಷಾರ್ಥಕ್ಕೆ ಇಂಥ ಕಚ್ದ ಯೋಚನೆ ಮಾಡ್ತೀರಾ? ನೀವೆಲ್ಲ ಯಾಕೆ ಯೌಟ್ಯೂಬ್ ಚಾನೆಲ್ ಇಟ್ಕೊಂಡು ಲೈಕ್ಸ್ ವ್ಯೂಸ್, ಫೇಕ್ ಕಥೆ ಸೃಷ್ಟಿಸಿ ಸೆಟ್ ಮಾಡುವ ಸಲುವಾಗಿ ಹಪಹಪಿಸ್ತೀರಾ? ನಿಮ್ಮೆಲ್ಲರ ಆದಾಯದ ಮೊತ್ತ ಹಾಗೂ ಮೂಲ ಏನು? ನಮ್ಮ ದೇಶದ ಎಷ್ಟು ರಾಜ್ಯಗಳನ್ನ ನೋಡಿದ್ದೀರಾ? ಕಾಶ್ಮೀರಕ್ಕೆ ಹೋಗಿ ಬಂದ ಸ್ವಂತ ಅನುಭವ ಇದ್ಯಾ?ಎಷ್ಟು ಆರ್ಮಿ ಆಫೀಸರ್ ಗಳ ಬಳಿ ಚರ್ಚಿಸಿದೀರಾ? ದೇಶಕ್ಕೆ ದೇಶವೇ ಒಂದಾಗಿ ನಿಂತು ಯುದ್ಧ ಸಾರುವ ಒಗ್ಗಟ್ಟನ್ನ ತೋರೋ ಸಮಯದಲ್ಲು ಇಂಥ ನೀಚತನ ಹೇಗೆ ಸಾಧ್ಯ? ಇಂಥ ಸಮಯಲ್ಲಿ ಕೊಚ್ಛೆ ರಾಜಕೀಯ ಯಾಕೆ? ಪ್ರಧಾನಿ ಮೋದಿಯವರು ನಿಮ್ಮನ್ನೆಲ್ಲ ಯಾವತ್ತೋ ಹತ್ತಿರ ಸೇರಿಸಿಕೊಂಡಾರು ಅನ್ನೋ ಭ್ರಮೆ ಇನ್ನು ಇದ್ಯಾ? ಹೀಗೆ ಅಡ್ಡಡ್ಡ ಮಾತಾಡಿ ಉದ್ದದ್ದ ಬೆತ್ತದಲ್ಲಿ ಪದೆ ಪದೇ ಬಾರಿಸಿಕೊಳ್ಳೋದು ಶೋಭೆಯೇ? ಇದೊಂದು ಬದುಕೇ? ಛಿ!
ಬದಲಾಗಿ ಅನ್ನೋದಕ್ಕೆ ಸಮಯ ಮೀರಿದೆ... ಯುದ್ಧದಲ್ಲಿ ನರಳೋಕೆ ಸಿದ್ದರಾಗಿ ಅಷ್ಟೇ! ಸೌಮ್ಯಾ ಕೃಷ್ಣ ಹೆಗಡೆ ಆದ ನನ್ನನ್ನ ರಮ್ಯಾ ಕೃಷ್ಣ ಅನ್ನೋ ನಿಮಗೆ ನೆನಪಿರ್ಲಿ, ಬಾಹುಬಲಿಯ ಶಿವಗಾಮಿ ದೇವಿ ಗತ್ತು ತಾಕತ್ತು ಪುನೀತ್ ಕೆರೆಹಾವು ಅಂತಾ ನಿಮ್ಮನ್ನ ಜನ ಕರೀತಾರೆ ಆದ್ರೆ ಆ ಕೆರೆಹಾವಿಗೆ ನಾನು ಅವಮಾನ ಮಾಡಲ್ಲ ಮೋದಿಯವರನ್ನ ಎಲ್ಲೆಲ್ಲಿ ಸಪೋರ್ಟ್ ಮಾಡ್ಬೇಕೊ ಅಲ್ಲಿ ಯಾವತ್ತೂ ಮಾಡ್ತೀನಿ ಹಾಗೆ ದೇಶದ ವಿಚಾರ ಧರ್ಮದ ವಿಚಾರ ಬಂದಾಗ ವ್ಯಕ್ತಿ ಪಕ್ಷದ ಆರಾಧನೆ ಮಾಡದ್ದೆ ದೇಶ ಭಕ್ತಿಯನ್ನ ನನ್ನದಾಗಿಸಿಕೊಳ್ತೀನಿ ನಿಮ್ಮೆಲ್ಲರ ಹಾಗೆ ಒಂದು ರಾಜಕೀಯ ಪ್ರೇರಿತ ಸಿದ್ದಾoತಕ್ಕೆ ಕಟ್ಟುಬಿದ್ದು ಅನೈತಿಕ ಬದುಕು ಜೀವಿಸೋ ದರಿದ್ರದಲ್ಲಿ ಆ ಕಾಲಭೈರವ ನನ್ನನ್ನ ಇಟ್ಟಿಲ್ಲ ನಾನು ಯಾವತ್ತೂ ಸತ್ಯದ ಪರ. ನೀವ್ಯಾರು ನನ್ನನ್ನ ಎಲ್ಲಿಗೋ ಕಳಿಸಿಕೊಡೋಕೆ? ನೀವೆಲ್ಲ ಸೌಜನ್ಯ ಶಾಪದಿಂದ ವಿಮುಕ್ತಾರಾಗೋದು ಹೇಗೆ ಅನ್ನೋ ಭಯದಲ್ಲಿರಿ.. ಸಾಧ್ಯವಾದ್ರೆ ನಿಜವಾದ ಹಿಂದುತ್ವ ಮೈಗೂಡಿಸಿಕೊಡು ಆಯಸ್ಸು ಮುಗಿಯುವಾಗ ಪಶ್ಚತ್ತಾಪ ಇಲ್ಲದೆ ಸಾಯುವ ಶ್ರೇಷ್ಠ ಅವಕಾಶವನ್ನ ನಿಮ್ಮ ಆತ್ಮಕ್ಕೆ ಕರುಣಿಸಿ.. ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023