ಸಾವಿನ ಕೊನೆಯ ಹಂತದಲ್ಲಿದ್ದ ಬಾಲಕನಿಗೆ ಒಂದು ಕೋಟಿ ಕೊಟ್ಟ ಸುದೀಪ್, ಮೆಚ್ಚುಗೆ ಹೊರಹಾಕಿದ ಕನ್ನಡಿಗರು

 | 
ಹಹ

ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಡುವ ಈ ಸಮಸ್ಯೆಗೆ ತುತ್ತಾಗಿರುವ ಜನೀಶ್ ಎಂಬ ಪುಟ್ಟ ಮಗುವನ್ನು ನೋಡಿ ಕನ್ನಡಿಗರ ಕಣ್ಣಾಲಿ ಒದ್ದೆಯಾಗಿದ್ದು, ಸಹೃದಯರು ಸಹಾಯ ಹಸ್ತ ಚಾಚುತ್ತಿದ್ದಾರೆ. 11 ತಿಂಗಳ ಪುಟ್ಟ ಮಗುವನ್ನು ಕಾಡುತ್ತಿರುವ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಸಮಸ್ಯೆಯನ್ನು ಬಗೆಹರಿಸಲು ₹16 ಕೋಟಿ ಮೊತ್ತದ ಇಂಜೆಕ್ಷನ್​ ನೀಡಬೇಕಿದ್ದು, ಈ ದುಬಾರಿ ಚುಚ್ಚುಮದ್ದನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದೆ.

ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಡುವ ಈ ಸಮಸ್ಯೆಗೆ ತುತ್ತಾಗಿರುವ ಜನೀಶ್ ಎಂಬ ಪುಟ್ಟ ಮಗುವನ್ನು ನೋಡಿ ಕನ್ನಡಿಗರ ಕಣ್ಣಾಲಿ ಒದ್ದೆಯಾಗಿದ್ದು, ಸಹೃದಯರು ಸಹಾಯ ಹಸ್ತ ಚಾಚುತ್ತಿದ್ದಾರೆ. ನಟ ಕಿಚ್ಚ ಸುದೀಪ್​, ಪ್ರೇಮ್, ಶಾಸಕ ಮುನಿರತ್ನ, ಟಿ.ಎ.ಶರವಣ, ಮೊಯ್ದೀನ್​ ಬಾವಾ, ಪದ್ಮನಾಭ ರೆಡ್ಡಿ, ಸಾ.ರಾ,ಮಹೇಶ್, ನಿರ್ಮಾಪಕ ಉಮಾಪತಿ, ಗಾಯತ್ರಿ ಪ್ರಕಾಶ್, ಅಮೃತ್​ ರಾಜ್, ಆಸೀಫ್, ನರೋನಾ ಸೇರಿದಂತೆ ನೂರಾರು ಪ್ರಮುಖರು ದೊಡ್ಡ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. 

ಇನ್ನೊಂದೆಡೆ ಸರ್ಕಾರದಿಂದಲೂ ನೆರವು ನೀಡುವ ಭರವಸೆ ವ್ಯಕ್ತವಾಗಿದೆ. ಹೆಚ್ಚಿನವರು ತಮ್ಮ ಹೆಸರು ಹೇಳಲಿಚ್ಛಿಸದೆ ನೇರವಾಗಿ ಮಗುವಿನ ಪೋಷಕರ ಬ್ಯಾಂಕ್ ಅಕೌಂಟ್​ಗೆ ಹಣ ಹಾಕುವುದಾಗಿ ಹೇಳುತ್ತಿದ್ದಾರೆ. ನಟ ಸುದೀಪ್ ಆಸ್ಪತ್ರೆಗೆ ಭೇಟಿ ನೀಡಿ 1 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ. ಎನ್ನಲಾಗ್ತಿದೆ.
ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್, ಜ್ಯೋತಿ ದಂಪತಿ ಪುತ್ರ ಜನೀಶ್​ಗೆ ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಗುವಿನ ವಂಶವಾಹಿಯಲ್ಲಿಯೇ (ಜೀನ್) ತೊಂದರೆ ಕಾಣಿಸಿಕೊಂಡಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆ ಉಂಟಾಗಿದೆ. ಹೀಗಾಗಿ ಕಿಚ್ಚ ಸುದೀಪ್ ಅಂತೆ ಬೇರೆ ನಟರು ಕೂಡ ಸಹೃದಯತೆಯಿಂದ ಸಹಾಯ ಮಾಡಬೇಕೆಂದು ಕೇಳಿಕೊಂಡರು. ಇದೀಗ ಕಿಚ್ಚ ಸುದೀಪ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನು ಮಾತನಾಡಿದ ದೃಶ್ಯ ವೈರಲ್ ಆಗಿದ್ದು ಸುದೀಪ್ ಫ್ಯಾನ್ಸ್ ಸಂತೋಷದಿಂದ ಕಿಚ್ಚನ ಗುಣಗಾನ ಮಾಡುತ್ತಿದ್ದಾರೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.