ನಾನು ಬಳೆ ಹಾಕಿಲ್ಲ ಎಂದಿ‍ದ್ದ ಸುದೀಪ್, ರೊಚ್ಚಿಗೆದ್ದ ಕಾವ್ಯ ಶಾಸ್ತ್ರಿ ಹೇಳಿದ್ದೇನು ಗೊತ್ತಾ

 | 
Bbg

ಬಿಗ್‌ ಬಾಸ್‌ 10ನೇ ಸೀಸನ್ ನಾಲ್ಕನೇ ವಾರದಲ್ಲಿ ಮನೆಯೊಳಗೆ ಬಳೆ ಸದ್ದು ಹೆಚ್ಚಾಗಿಯೇ ಕೇಳಿಸಿತ್ತು, ಸಾಮಾಜಿಕ ಜಾಲತಾಣದಲ್ಲಿಯೂ ಟ್ರೆಂಡ್‌ ಮಾಡಿತ್ತು. ಅಲ್ಲದೇ ಈ ವಾರದ ಕಿಚ್ಚನ ಚಪ್ಪಾಳೆಯನ್ನೂ ‘ಬಳೆ’ ಪಡೆದುಕೊಂಡಿತ್ತು. ಹಳ್ಳಿಜೀವನ ಆಟದ ವೇಳೆ ವಿನಯ್‌ ಮತ್ತು ಸಂಗೀತಾ ನಡುವಿನ ಜಗಳ ತಾರಕ್ಕೇರಿದ್ದು, ನಾನೇನು ಬಳೆ ತೊಟ್ಟುಕೊಂಡಿಲ್ಲ ಎಂದು ವಿನಯ್‌ ಹೇಳಿದ್ದರು. 

ಈ ಮಾತು ಬಳೆ ತೊಡುವವರು ಬಲಹೀನರು ಎಂಬಂತೆ ಬಿಂಬಿತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕಿಚ್ಚನ ಪಂಚಾಯತಿ ವೇಳೆ ಬಳೆ ಮಾತು ಮುನ್ನೆಲೆಗೆ ಬಂದು, ‘ಬಳೆ ಬಲಹೀನತೆಯ ಸಂಕೇತ ಅಲ್ಲ, ಅದು ಶಕ್ತಿಯ ಸಂಕೇತ’ ಎಂದು ಕಿಚ್ಚ ಬುದ್ದಿವಾದ ಹೇಳಿದ್ದರು.

ಕಿಚ್ಚನ ಮಾತುಗಳಿಗೆ ಬಾರಿ ಮೆಚ್ಚುಗೆಯಾಗಿದ್ದು, ಇದರೊಂದಿಗೆ ಬಳೆ ಕುರಿತಂತೆ ಕಿಚ್ಚನ ಹಳೆ ಟ್ವೀಟ್‌ವೊಂದು ಹರಿದಾಡುತ್ತಿದೆ. ಪೈಲ್ವಾನ್ ಚಿತ್ರದ ಪೈರಸಿ ವಿಚಾರದ ವೇಳೆ ಸುದೀಪ್‌ ಮಾಡಿದ ಟ್ವೀಟ್‌ ಈಗ ಮುನ್ನೆಲೆಗೆ ಬಂದಿದೆ. ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. 

ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ’ ಎಂದು ಸುದೀಪ್ ಕೋಪದಲ್ಲಿ ಟ್ವೀಟ್ ಮಾಡಿದ್ದರು. ಬಳೆ ತೊಡುವವರು ಬಲಹೀನರು, ಕಡಗ ತೋಡುವವರು ಬಲಶಾಲಿಗಳು ಎಂಬಂತೆ ಅರ್ಥಕೊಡುವ ಸುದೀಪ್‌ ಅವರ ಈ ಟ್ವೀಟ್‌ ಹೆಂಗೆಳೆಯರ ಕೆಂಗಣ್ಣಿಗೆ ಗುರಿಯಾಗಿತ್ತು. 

ಹಲವಾರು ನಟಿಯರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಗ್‌ ಬಾಸ್‌ನಲ್ಲಿ ಬಳೆ ಬಗ್ಗೆ ಹಗುರವಾಗಿ ಮಾತನಾಡಿದ್ದ ವಿನಯ್‌ಗೆ ಬುದ್ದಿವಾದ ಹೇಳಿದ ಕಿಚ್ಚ ಸುದೀಪ್‌ ತಾವು ಹಿಂದೆ ಹೇಳಿರುವುದನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ನಟಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶಾಸ್ತ್ರಿ ಕಿಡಿಕಾರಿದ್ದಾರೆ. ಧೈರ್ಯವಿದ್ದರೆ ಅವರ ಈ ಪೋಸ್ಟ್ ಹಂಚಿಕೊಳ್ಳಿ ಎಂದು ಹೇಳಿ ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.