ಸುದೀಪ್ ವಂಚನೆ ಆರೋಪ, ಕಿಚ್ಚನ ನಿಜಮುಖ ಬಯಲು ಮಾಡಿದ ಸಂಸದ ಜಗ್ಗೇಶ್

 | 
ರಿ

ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಅತ್ಯದ್ಭುತ ಕಲಾವಿದ. ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರುವ ಇವ್ರು ಇಂದಿಗೂ ಕೂಡ ಬಹಳ ಬೇಡಿಕೆಯ ನಾಯಕ ನಟ. ವಿಕ್ರಾಂತ್ ರೋಣ ಸಿನಿಮಾದ ನಂತರ ಯಾವುದೇ ಸಿನಿಮಾಗಳನ್ನ ಅನೌನ್ಸ್ ಮಾಡದ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. 

ಈ ಮಧ್ಯೆ ಇನ್ನು ಹೆಸರಿಡದ ಕಿಚ್ಚ ಅವ್ರ 46ನೇ ಸಿನಿಮಾ ಕಿಚ್ಚ 46 ಹೆಸರಲ್ಲಿ ಆ ಚಿತ್ರದ ಟೀಸರ್ ಬಿಡುಗಡೆಯಗಿತ್ತು, ಅದ್ರಲ್ಲಿನ ಕಿಚ್ಚ ಅವ್ರ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನು ಟೀಸರ್ ಬಿಡುಗಡಯಾದ ಬೆನ್ನಲೇ ಕಿಚ್ಚ ಸುದೀಪ್ ಅವ್ರಿಗೆ ದೊಡ್ಡ ವಿವಾದ ಒಂದು ಅಂಟಿಕೊಂಡಿದೆ. ಹೌದು ನಟ ಕಿಚ್ಚ ಸುದೀಪ್ ಅವರು ಸಿನಿಮಾ ಮಾಡಿಕೊಡ್ತೀನಿ ಅಂತ ಹಣ ತಗೊಂಡು ಸಿನಿಮಾ ಮಾಡಿಕೊಟ್ಟಿಲ್ಲ, 8 ವರ್ಷದಿಂದ ಅವರು ನಮ್ಮನ್ನು ಸತಾಯಿಸುತ್ತಿದ್ದಾರೆ ಅಂತ ನಿರ್ಮಾಪಕ ಎಂ.ಎನ್ ಕುಮಾರ್ ಆರೋಪ ಮಾಡ್ತಿದ್ದಾರೆ. 

ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಅಡ್ವಾನ್ಸ್ ಹಣ ನೀಡಿದ್ದೇನೆ, ಯಾವಾಗ ಕೇಳಿದ್ರೂ ನಾಳೆ ಅಂತಾರೆ, ಏನು ಮಾಡಬೇಕು” ಅಂತ ನಿರ್ಮಾಪಕ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನಾನು ಕೆಸಿಎನ್ ಮೂವೀಸ್‌ನಿಂದ ಬಂದವನು. ನಾನು ಸುದೀಪ್ ಅವರ ಜೊತೆ ರಂಗ ಎಸ್‌ಎಸ್‌ಎಲ್‌ಸಿ, ಮಾಣಿಕ್ಯ, ಮುಕುಂದ ಮುರಾರಿ, ಕಾಶಿ ಫ್ರಂ ವಿಲೇಜ್ ಮುಂತಾದ ಸಿನಿಮಾ ಮಾಡಿದ್ದೇನೆ. 

ಸ್ವಾತಿ ಮುತ್ತು, ವಿಷ್ಣುವರ್ಧನ ಸೇರಿ ಕೆಲ ಸಿನಿಮಾಗಳ ವಿತರಣೆ ಕೂಡ ಮಾಡಿದ್ದೇನೆ. ಆದ್ರೆ ಆನಂತರ ಕಳೆದ 8 ವರ್ಷಗಳಿಂದ ನಾನು ನಿಮ್ಮ ಸಿನಿಮಾ ಮಾಡುತ್ತೇನೆ ಅಂತ ಹೇಳಿಕೊಂಡು ಬರುತ್ತಲೇ ಇದ್ದಾರೆ. ನಾವು ಸುದೀಪ್ ಅವರ ಮ್ಯಾನೇಜರ್ ಬಳಿ ಕಾಂಟ್ಯಾಕ್ಟ್ ಮಾಡಿದಾಗಲೂ ಸಿನಿಮಾ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ. ಅಲ್ದೇ ವಿಕ್ರಾಂತ್ ರೋಣ ಸಿನಿಮಾ ಆದಮೇಲೆ ನಮ್ಮ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ದರು. ಜೊತೆಗೆ ನಂದಕಿಶೋರ್ ಅವರಿಗೆ ಹಣ ಕೊಡಿ, ಅವರು ಕಥೆ ಮಾಡಲಿ ಅಂತ ಸುದೀಪ್ ಹೇಳಿದಂತೆ ನಾವು ಮಾಡಿದ್ದೇವೆ. 

ಈಗ ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ ಅಂತ ಕುಮಾರ್ ಆರೋಪ ಮಾಡ್ತಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ಅವನ ಕುರಿತಾಗಿ ಹೀಗೆಲ್ಲ ಹೇಳುವುದು ಒಳ್ಳೆಯದಲ್ಲ. ಕನ್ನಡದ ಇನ್ಯಾವ ನಟರಿಗೂ ಅವನಿಗಿದ್ದಷ್ಟು ಪ್ರೌಢಿಮೆ ಇಲ್ಲ. ಎಲ್ಲೇನು ಮಾತಾಡಬೇಕು. ಹೇಗಿರಬೇಕು ಕನ್ನಡಿಗರ ಮೆಚ್ಚಿನ ನಟ ಅವನನ್ನು ನೋಡಿ ಕಲಿಯಬೇಕು. ಅದರ ಹೊರತಾಗಿ ಸುಮ್ಮಸುಮ್ಮನೆ ಆರೋಪ ಮಾಡೋದಲ್ಲ. ಬಾಯಿದೆ ಎಂದು ಮಾತಾಡಬೇಡ್ರಿ ಯೋಚಿಸಿ ಮಾತಾಡಿ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.