ವಿದೇಶದಲ್ಲಿ ಲಕ್ಷ ಲಕ್ಷ ಸಂಬಳ ಬಿಟ್ಟು ಭಾಗ್ಯಲಕ್ಷ್ಮಿ ಧಾರಾವಾಹಿಗೆ ತಾಂಡವ್ ಎಂಟ್ರಿ ಕೊಟ್ಟಿದ್ದು ಯಾರ ಮೋಹಕ್ಕೆ ಗೊ.ತ್ತಾ

 | 
Ghu

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಒಂದೊಂದು ಡೈಲಾಗ್‌ಗಳು ಕೂಡ ಪ್ರೇಕ್ಷಕರ ಮನ ಮುಟ್ಟುವಂತಿದೆ. ಇದರಲ್ಲಿ ಭಾಗ್ಯ ಹಾಗೂ ಕುಸುಮಳನ್ನು ಜನ ಮೆಚ್ಚಿಕೊಂಡಿದ್ದಾರೆ. ಅತ್ತೆ ಮಾವ ಎಂದರೆ ಹೀಗಿರಬೇಕು ಎಂದು ಮಾತನಾಡಿಕೊಂಡವರೂ ಇದ್ದಾರೆ. ಆದರೆ, ಭಾಗ್ಯಳಲ್ಲಿ ಮುಗ್ಧತೆ ಸ್ವಲ್ಪ ಜಾಸ್ತಿ ಇದೆ. ಈ ಕಾಲದಲ್ಲಿ ಇಷ್ಟೊಂದು ಒಳ್ಳೆಯತನದಿಂದ ಇರುವುದು ಬಹಳ ಕಷ್ಟ ಎಂದು ಹೇಳುತ್ತಾರೆ.

ಅಷ್ಟಕ್ಕೂ ಈ ಭಾರ್ಗವ್ ಪಾತ್ರ ಮಾಡಿದವರು ಮನೆಯಲ್ಲೂ ಕೂಡ ಹೀಗೆ ಕೋಪಿಷ್ಠನಾಗಿದ್ದಾನಾ..? ತಮ್ಮ ಪತ್ನಿಗೂ ಮೋಸ ಮಾಡಿದ್ದಾರಾ ಎಂಬೆಲ್ಲಾ ಪ್ರಶ್ನೆಗಳನ್ನು ಮಾಡುತ್ತಿದ್ದು, ತಾಂಡವ್ ಪಾತ್ರಧಾರಿಗೆ ಖುಷಿ ಪಡಬೇಕೋ ಇಲ್ಲ, ಬೇಸರ ಮಾಡಿಕೊಳ್ಳಬೇಕೋ ಗೊತ್ತಾಗುತ್ತಿಲ್ಲವಂತೆ. ಇನ್ನು ತಾಂಡವ್ ಪಾತ್ರದಲ್ಲಿ ನಟಿಸಿರುವ ಈ ಹೊಸ ಪ್ರತಿಭೆ ಯಾರೆಂದು ಕೇಳುವುದಾದರೆ, ಇವರು ಮತ್ಯಾರೂ ಅಲ್ಲ ನಟಿ ಸಂಗೀತಾ ಭಟ್ ಅವರ ಪತಿ.

ಹೌದು ಕಳೆದ ಏಳು ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿ ಈ ತಿಂಗಳೇ ವಿವಾಹ ವಾರ್ಷಕೋತ್ಸವ ಆಚರಣೆ ಸಂಭ್ರಮದಲ್ಲಿದ್ದಾರೆ. ಸಂಗೀತಾ ಭಟ್ ಪತಿ ಅಲಿಯಾಸ್ ತಾಂಡವ್ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್. ಈ ಹಿಂದೆ ಸುದರ್ಶನ್ ರಂಗಪ್ರಸಾದ್ ಅವರು ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು. 

ಸದಾ ಒಂದೇ ಕಡೆ ಇರುವುದಕ್ಕಿಂತಲೂ ಬ್ಯಾಕಪ್ ಅನ್ನು ಇಟ್ಟುಕೊಂಡಿರಬೇಕು ಎನ್ನುವ ಸುದರ್ಶನ್ ಅವರು ಕೆಲಸ ಮಾಡುತ್ತಲೇ ಶನಿವಾರ ಹಾಗೂ ಭಾನುವಾರ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಹಲವರನ್ನು ನಗಿಸುತ್ತಿದ್ದರು. ಸ್ನೇಹಿತರ ಜೊತೆ ಸೇರಿ ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ವೀಕೆಂಡ್ ಗಳಲ್ಲಿ ಕೆಲ ಏರಿಯಾಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಜನರಿಗೆ ಮನರಂಜನೆಯನ್ನೂ ಕೊಡುತ್ತಿದ್ದರು. ಇವರದ್ದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದು, ಅದಕ್ಕೆ ಲೊಲ್ಭಾಗ್ ಎಂದು ಹೆಸರಿಟ್ಟಿದ್ದಾರೆ. 

ಇದರಲ್ಲಿ 80ಕ್ಕೂ ಅಧಿಕ ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದು, ಇದರಲ್ಲೂ ಸ್ನೇಹಿತರು ಹಾಗೂ ಸುದರ್ಶನ್ ಕನ್ನಡ ಸ್ಟ್ಯಾಂಡಪ್ ಕಾಮಿಡಿ ಮೂಲಕ ಗಮನ ಸೆಳೆದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಇವರ ವಿಡಿಯೋಗಳು ಭಾರೀ ಸದ್ದು ಮಾಡಿತ್ತು.ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದರೂ ಈ ಸಿರಿಯಲ್ ಗೆಂದು ಎಲ್ಲವನ್ನೂ ಬಿಟ್ಟು ಬಂದ ಸುದರ್ಶನ್ ಅವರ ನಟನಾ ಸ್ಫೂರ್ತಿ ಗೆ ಮೆಚ್ಚಲೇ ಬೇಕು.