ಮಗುವನ್ನು ಕದ್ದ ಕಳ್ಳನನ್ನು ಬಿಟ್ಟು ಬರಲ್ಲ ಎಂದ ಮಗು; ಪೋಷಕರಿಗೂ ಶಾ ಕ್
Sep 2, 2024, 09:22 IST
|

ಈ ಘಟನೆ ಜೈಪುರದ ಸಂಗಾನೇರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.14 ತಿಂಗಳ ಹಿಂದೆ ತತುಜ್ ಚಹಾರ್ ಎಂಬ ವ್ಯಕ್ತಿ 11 ತಿಂಗಳ ಮಗುವನ್ನು ಅಪಹರಿಸಿದ್ದ. ಅಪಹರಣಕಾರ ತನುಜ್ ಚಹಾರ್ ಹಿಂದೆ ಯುಪಿಯ ಠಾಣೆಯೊಂದರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕೆಲಸ ನಿರ್ವಹಿಸಿದ್ದ. ಮಗುವನ್ನು ಅಪಹರಿಸಿದ ಬಳಿಕ ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಆತ ಹಲವಾರು ವೇಷ ಧರಿಸುತ್ತಿದ್ದ.
ಮೊಬೈಲ್ ಫೋನ್ ಕೂಡ ಬಳಸದೆ, ಅಪರಿಚಿತರಿಗೆ ತನ್ನ ಹೆಸರು ಹೇಳದೆ ಮಗುವಿನೊಂದಿಗೆ ತಲೆಮರೆಸಿಕೊಂಡಿದ್ದ. ಅದು ಹೇಗೋ ಈತನ ಜಾಡು ಹಿಡಿದ ಪೊಲೀಸರು ಮಥುರಾ, ಆಗ್ರಾ ಮತ್ತು ಅಲಿಘರ್‌ನಲ್ಲಿ ಜಾಲಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಆತನ ಬಂಧನವಾಗುವ ವೇಳೆಗೆ ಮಗು ಆತನ ಜೊತೆ 14 ತಿಂಗಳ ಕಾಲ ಜೊತೆಯಾಗಿತ್ತು.
ಇನ್ನು ಕಿಡ್ನಾಪರ್ ತನುಜ್ ಚಾಹರ್‌ನನ್ನು ಬಂಧಿಸಿದ ಪೊಲೀಸರು ಮಗುವಿನ ಪೋಷಕರನ್ನು ಠಾಣೆಗೆ ಕರೆಸಿ ಮಗುವನ್ನು ಅವರಿಗೆ ಹಸ್ತಾಂತರ ಮಾಡಿದ್ದಾರೆ. ಆದ್ರೆ ಈ ಸಂಧರ್ಭದಲ್ಲಿ ನಡೆದ ಭಾವುಕ ಘಟನೆಯೊಂದು ಠಾಣೆಯಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತರಿಸಿದೆ. ಹದಿನಾಲ್ಕು ತಿಂಗಳಿನಿಂದ ಕಿಡ್ನ್ಯಾಪರ್ ಜೊತೆಯಾಗಿ ಬೆಳೆದ ಮಗುವಿಗೆ ಆತನೇ ಎಲ್ಲವೂ ಆಗಿದ್ದ.
ಹೀಗಾಗಿ ಪೊಲೀಸರು ಮಗುವನ್ನು ಪೋಷಕರಿಗೆ ನೀಡಲು ಆತನ ಕೈನಿಂದ ತೆಗೆದುಕೊಳ್ಳುವ ವೇಳೆ ಮಗು ತನುಜ್ ಚಾಹರ್‌ನನ್ನು ಗಟ್ಟಿಯಾಗಿ ಅಪ್ಪಿಕೊಂಡಿದೆ. ಮಗುವಿನ ಪೋಷಕರು ಕರೆದ್ರೂ ತಿರುಗಿ ನೋಡದೆ ಚಾಹರ್‌ನನ್ನು ಬಿಟ್ಟು ಬರಲು ನಿರಾಕರಿಸಿದೆ. ಈ ವೇಳೆ ಪೊಲೀಸರು ಒತ್ತಾಯಪೂರ್ವಕವಾಗಿ ಮಗುವನ್ನು ಆತನಿಂದ ಕಿತ್ತುಕೊಂಡಾಗ ಮಗು ಜೋರಾಗಿ ಅಳಲು ಆರಂಭಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025