ಡೈರೆಕ್ಟರ್ ನನ್ನ ಬಳಿ ಆ ಕೆಲಸಕ್ಕೆ ಬೇಡಿಕೆ ಇಟ್ಟರು, ನಂತರ ರೂಮ್ ನಿಂದ ಹೊರಬರಲು ಸಾಧ್ಯವಾಗಿಲ್ಲ ಎಂದ ಮೀನಾ

 | 
Hd

ಬಹುಭಾಷಾ ತಾರೆ ಮೀನಾ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಸಿನಿಮಾದಲ್ಲಿ ಬ್ಯುಸಿಯಾಗಿದ್ದವರು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿದ್ದರು. ಕನ್ನಡದಲ್ಲೂ ಪುಟ್ನಂಜ, ಸ್ವಾತಿ ಮುತ್ತು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ಹಿಂದಿಯ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

ಇತ್ತೀಚೆಗೆ ಮೀನಾ ಪತಿ ವಿದ್ಯಾಸಾಗರ್ ನಿಧನದ ಬಳಿಕ ಎರಡನೇ ಮದುವೆ ಬಗ್ಗೆನೂ ವದಂತಿಗಳು ಹಬ್ಬಿದ್ದು, ಕೆಲವು ಹೆಸರುಗಳು ಕೂಡ ಈಕೆ ಜೊತೆ ತಳುಕು ಹಾಕಿಕೊಂಡಿದ್ದವು. ಈ ಬಗ್ಗೆ  ಮೀನಾ ಇದೇ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸುತ್ತಾ, ವಿದ್ಯಾಸಾಗರ್ ನಿಧನರಾದ ಕೆಲವು ತಿಂಗಳ ಬಳಿಕ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಸುದ್ದಿ ಹಬ್ಬಿತ್ತು. ನಾನು ಹೀರೋ ಧನುಷ್ ಅವರನ್ನು ಮದುವೆಯಾಗುತ್ತೇನೆ ಎಂದು ಪ್ರಚಾರ ಮಾಡಿದ್ದರು. 

ರಾಜಕಾರಣಿ, ಹಿರಿಯ ಸ್ಟಾರ್ ನಟ, ಉದ್ಯಮಿ ಹೀಗೆ ನನ್ನ ಮದುವೆ ಬಗ್ಗೆ ಬರೆದಿದ್ದಾರೆ. ಅದೆಲ್ಲ ಸುಳ್ಳು ಎಂದಿದ್ದಾರೆ.
ಇನ್ನು ಪ್ರಭುದೇವ್ ಅವರೊಂದಿಗೆ ಸಿನೆಮಾ ನಟಿಸುವಾಗ ಮೊದಲ ಬಾರಿಗೆ ಈಜುಡುಗೆ ತೊಡಲು ಓಕೆ ಎಂದಿದ್ದೆ ಅದರಂತೆ  ಈಜುಡುಗೆ ತೊಟ್ಟು ಮೇಕಪ್ ರೂಂ ಇಂದಲೇ ಹೊರಬರಲು ಸಾಧ್ಯವಾಗಲಿಲ್ಲ.ಜನರ ಮುಂದೆ ಹೋಗಲು ಸಾಧ್ಯವಾಗಲೇ ಇಲ್ಲ. ಈ ಗ್ಲಾಮರಸ್ ಹಾಗೂ ಮಾದಕ ನಟಿಯರು ಅದು ಹೇಗೆ ನಟಿಸುತ್ತಾರೆ ಗೊತ್ತಾಗಲೇ ಇಲ್ಲ. ಅಂತಹವರಿಗೆ ಒಂದು ಪ್ರಣಾಮಗಳು ಎಂದಿದ್ದಾರೆ.

ಮೀನಾ ಬಾಲ ನಟಿಯಾಗಿ ಸಿನಿಮಾ ಎಂಟ್ರಿ ಕೊಟ್ಟವರು, ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಾಯಕಿಯಾಗಿ ಬ್ಯುಸಿಯಾಗಿದ್ದರು. ಅದರಲ್ಲೂ ತೆಲುಗು, ತಮಿಳು ಭಾಷೆಯ ಸ್ಟಾರ್ ಹೀರೊಗಳೊಂದಿಗೆ ನಟಿಸಿ ಗೆದ್ದಿದ್ದಾರೆ. ಆದರೆ, ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದರು. ಮಗಳು ಜನಿಸಿದ ಬಳಿಕ ಸ್ವಲ್ಪ ಗ್ಯಾಪ್ ಕೊಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದಾರೆ. ಆದರೆ, ಪತಿ ನಿಧನದ ಬಳಿಕ ಹಬ್ಬಿದ ವದಂತಿಗಳ ಬಗ್ಗೆ ಮೀನಾ ಬೇಸರ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.