ಮಜಾ ಮಾ.ಡಲು ರೂಮ್ ಬಾಗಿಲು ಹಾಕಿದ ಗಂಡ ಹೆಂಡತಿ, ಮಧ್ಯರಾತ್ರಿ ಏನಾಯಿತು ಗೊ.ತ್ತಾ

 | 
Vvg

ತಂದೆ ತಾಯಿಯರ ಮುದ್ದಿನ ಮಕ್ಕಳಾದ ರಾಜೇಶ್ ರಮ್ಯಾರ ಮದುವೆ ಅದ್ದೂರಿಯಾಗಿ ನಡೆದಿತ್ತು. ಪೋಷಕರಿಬ್ಬರಿಗೂ ಒಬ್ಬರೇ ಮಕ್ಕಳು ಹಾಗಾಗಿ ದೊಡ್ಡ ಛತ್ರದಲ್ಲಿ ಚೆನ್ನಾಗಿ ಮದುವೆ ಮಾಡಿಕೊಟ್ಟಿದ್ದರು. ಅಲ್ಲದೇ ಮಕ್ಕಳಿಬ್ಬರು ಚೆನ್ನಾಗಿರಲಿ ಎಂದು ಚಂದದ ಮನೆಯನ್ನು ಕೂಡ ಕೊಡಿಸಿದ್ದರು. 

ಹಾಗಾಗಿ ರಾಜೇಶ್ ರಮ್ಯಾ ಸುಖವಾಗಿ ತಮ್ಮದೇ ಮನೆಯಲ್ಲಿ ಸಂಸಾರ ಆರಂಭಿಸಿದ್ದರು. ಅದೊಂದು ದಿನ ರವಿವಾರ ಇಬ್ಬರೂ ತಮ್ಮ ತಮ್ಮಲ್ಲಿಯೇ ಸ್ಪರ್ಧೆಯೊಂದನ್ನು ಇಟ್ಟುಕೊಂಡಿದ್ದರು. ಈ ದಿನ ಯಾರು ಬಂದರೂ ಮನೆ ಬಾಗಿಲನ್ನು ತೆರೆಯಬಾರದು ಎಂದು. ಯಾರು ಮೊದಲು ತೆರೆಯುತ್ತಾರೋ ಅವರು ಸೋತಂತೆ ಎಂದು ಕೂಡ ಷರತ್ತನ್ನು ಹಾಕಿಕೊಂಡಿದ್ದರು.ಹಾಗೆ ಷರತ್ತನ್ನು ಹಾಕಿಕೊಂಡು ಮನೆಯ ಬಾಗಿಲನ್ನು ಹಾಕಿ ರೂಮಿನಲ್ಲಿ ಕುಳಿತಿದ್ದರು. 

ಆಗ ರಾಜೇಶನ ತಂದೆ ಬಂದು ಬಾಗಿಲು ಬಡಿದರು. ಬಾಗಿಲು ತೆರೆದರೆ ಸ್ಪರ್ಧೆಯಲ್ಲಿ ಸೋತು ಹೋಗುತ್ತೇನೆ ಎಂದು ರಾಜೇಶ ಬಾಗಿಲನ್ನು ತೆರೆಯಲೇ ಇಲ್ಲ. ಮಕ್ಕಳು ಮನೆಯಲ್ಲಿ ಇಲ್ಲ ಎಂದು ಕೊಂಡು ಅವರು ವಾಪಸ್ಸಾದರು ತದನಂತರ ಕೆಲ ಸಮಯದ ನಂತರ ರಮ್ಯಾ ತಂದೆ ಬಂದು ಬಾಗಿಲು ಬಡಿದರು. ನಂತರ ಬಾಗಿಲ ಬಳಿ ತಂದೆಯನ್ನು ನೋಡುತ್ತಿದ್ದಂತೆ ಸ್ಪರ್ಧೆಯಲ್ಲಿ ತಾನು ಸೋತರೂ ಸರಿ ತಂದೆಗೆ ಬೇಜಾರು ಮಾಡಬಾರದು ಎಂದು ರಮ್ಯಾ ಬಾಗಿಲು ತೆರೆದು ತಂದೆಗೆ ಉಪಚಾರ ಮಾಡಿ ಮನೆಗೆ ವಾಪಸ್ಸು ಕಳಿಸಿದಳು. 

ಹೀಗೆ ದಿನಗಳು ಉರುಳಿದವು ಹಲವು ವರ್ಷಗಳೇ ಕಳೆದವು ರಮ್ಯಾ ಹಾಗೂ ರಾಜೇಶ ಗೆ ಮೂವರು ಮಕ್ಕಳಾದರು ಹಿರಿಯ 2 ಮಕ್ಕಳು ಗಂಡಾದರೆ ಮೂರನೆಯವಳು ಮಗಳು ಅದೇ ಖುಷಿಯಲ್ಲಿ ಮಗಳ ಹೆಸರಿಡುವ ದಿನ ರಾಜೇಶ್ ಅದ್ದೂರಿಯಾಗಿ ಖರ್ಚು ಮಾಡಿ ವಿಜೃಂಭಣೆಯಿಂದ ಮಗಳಿಗೆ ಮುದ್ದಾದ ಹೆಸರಿಡುತ್ತಾನೆ. ನಂತರ ರಮ್ಯಾ ಅದೇಕೆ ಹೀಗೆ ಮಕ್ಕಳಿಬ್ಬರ ಹೆಸರಿಡುವ ದಿನ ಸರಳವಾಗಿ ಮಾಡಿ ಇದನ್ನೇಕೆ ಇಷ್ಟು ವಿಜೃಂಭಣೆಯಿಂದ ಮಾಡುತ್ತಿದ್ದೀರಿ ಕೇಳಿದಾಗ ರಾಜೇಶ ನನಗೆಂದು ಬಾಗಿಲು ತೆಗೆಯಲು ಮಗಳು ಹುಟ್ಟಿದ್ದಾಳೆ. 

ತಾನು ಸೋತರೂ ತಂದೆಯನ್ನು ಸೋಲಲು ಬಿಡುವುದಿಲ್ಲ ಎಂದು ಹೇಳಿ ಮದುವೆಯ ಸಮಯದ ಘಟನೆಯನ್ನು ನೆನಪಿಸುತ್ತಾನೆ. ಇದಾದ ನಂತರ ನಾಚಿದ ರಮ್ಯಾ ಹೌದು ಅವತ್ತು ನಾನು ಸೋತಿರದಿದ್ದರೆ ನಿಮ್ಮ ಮುಂದೆ ಇಂದು ಗೆಲ್ಲುತ್ತಿರಲಿಲ್ಲ ಎಂದು ನುಡಿಯುತ್ತಾಳೆ. ಹೌದು ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ ಅವರು ನಿಮ್ಮ ಗೌರವವನ್ನು ಎಂದೆಂದಿಗೂ ಪಾಲಿಸುತ್ತಾರೆ.
ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.