ಮ.ಹಿಳೆಯರ ಮುಖ್ಯ ಭಾಗ್ಯವನ್ನು ಈ ದೇವಾಲಯದಲ್ಲಿ ಪೂಜೆ ಮಾಡುತ್ತಾರೆ, ಎಲ್ಲಿದೆ ಗೊತ್ತಾ ಈ ದೇವಸ್ಥಾನ

 | 
Hbg

ಭಾರತದಲ್ಲಿದೆ ವಿಶಿಷ್ಟ ದೇವಸ್ಥಾನ. ತಾಂತ್ರಿಕ ಚಟಿವಟಿಕೆಗಳಿಗೂ ಇದು ಹೆಸರುವಾಸಿ. ಎಂದರೆ ಮಾಟ ಮಂತ್ರಗಳನ್ನು ತೊಡೆದು ಹಾಕಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಸಾಕಷ್ಟು ಮಂದಿ ಈ ದೇವಸ್ಥಾನಕ್ಕೆ ಬರುತ್ತಾರೆ. ಶತ ಶತಮಾನಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಈ ದೇವ ಸನ್ನಿಧಿ ತನ್ನ ಸೊಬಗು ಮತ್ತು ಐತಿಹಾಸಿಕ ಮಹತ್ವ ಮತ್ತು ವಿಶೇಷತೆಯಿಂದಲೇ ಭಕ್ತರನ್ನು ಸೆಳೆಯುತ್ತದೆ. 

ಅಸ್ಸಾಂನ ಗುವಾಹಟಿಯಲ್ಲಿರುವ ಈ ದೇವಸ್ಥಾನ ಪ್ರಮುಖ ತೀರ್ಥ ಕ್ಷೇತ್ರವಾಗಿಯೂ ಗಮನ ಸೆಳೆದಿದೆ. ಸಾಕಷ್ಟು ವಿಶೇಷ ಸಂಗತಿಗಳನ್ನು ಹೊಂದಿರುವ ಈ ಅಪೂರ್ವ ದೇವಸ್ಥಾನದ ಬಗೆಗಿನ ಇನ್ನಷ್ಟು ಮಾಹಿತಿಯನ್ನು ಇಲ್ಲಿ ನೋಡೋಣ. ನಮ್ಮಲ್ಲಿ ಸಾಕಷ್ಟು ದೇವ ಸನ್ನಿಧಿಗಳಿಗೆ. ಇಂತಹ ಕ್ಷೇತ್ರಕ್ಕೆ ಅದರಲ್ಲೇ ಆದ ಇತಿಹಾಸ, ಐತಿಹ್ಯ, ಸ್ಥಳ ಪುರಾಣಗಳಿರುತ್ತವೆ. ಇಂತಹ ವಿಶೇಷತೆ ಮತ್ತು ಅನನ್ಯತೆಯ ಕಾರಣದಿಂದಲೇ ಸಾಕಷ್ಟು ದೇವಸ್ಥಾನಗಳು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿ ರೂಪುಗೊಳ್ಳುವ ಜತೆಗೆ ಪ್ರತಿದಿನ ಸಾಕಷ್ಟು ಭಕ್ತರನ್ನು ಸೆಳೆಯುತ್ತವೆ. 

ಅಂತಹ ಅಪೂರ್ವ ತಾಣಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನ ಕೂಡಾ ಒಂದು. ತಾಂತ್ರಿಕ ಚಟುವಟಿಕೆಗಳಿಗೂ ಈ ದೇವಾಲಯ ಹೆಸರುವಾಸಿ. ದುಷ್ಟಶಕ್ತಿಗಳಿಂದ ಮುಕ್ತಿ ಪಡೆಯುವ ಸಲುವಾಗಿಯೇ ಸಾಕಷ್ಟು ಮಂದಿ ಕಾಮಾಕ್ಯ ದೇಗುಲಕ್ಕೆ ಬರುತ್ತಾರೆ. ಗುವಾಹಟಿಯ ಪಶ್ಚಿಮ ಭಾಗದಲ್ಲಿರುವ ನೀಲಾಚಲ್ ಬೆಟ್ಟಗಳಲ್ಲಿ ಕಾಮಾಕ್ಯ ದೇವಸ್ಥಾನ ಇದೆ. 

ತಾಂತ್ರಿಕ ಆಚರಣೆಗಳ ಅತ್ಯಂತ ಹಳೆಯ ಮತ್ತು ಪವಿತ್ರ ಕೇಂದ್ರಗಳಲ್ಲಿ ಇದು ಕೂಡಾ ಒಂದು ಎಂದು ಗುರುತಿಸಲಾಗಿದೆ. ಮಾಟ ಮಂತ್ರದ ಬಾಧೆಯಿಂದ ಮುಕ್ತಿ ಪಡೆಯುವ ಸಲುವಾಗಿಯೇ ಸಾಕಷ್ಟು ಮಂದಿ ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನ ಅಸ್ಸಾಂನ ಹೆಗ್ಗುರುತು ಕೂಡಾ ಹೌದು. ಈ ದೇವಾಲಯವನ್ನು 51 ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜನಪ್ರಿಯ ಐತಿಹ್ಯಗಳ ಪ್ರಕಾರ, 'ಮಾತೆ ಸತಿ'ಯ ದೇಹದ 51 ತುಣುಕುಗಳು ಎಲ್ಲೆಲ್ಲಿ ಬಿದ್ದವೋ, ಆ ಸ್ಥಳಗಳನ್ನು ಶಕ್ತಿಪೀಠಗಳೆಂದು ಪರಿಗಣಿಸಲಾಗುತ್ತದೆ. 

ಅದೇ ಶಕ್ತಿಪೀಠಗಳ ಸಾಲಿನಲ್ಲಿ ಕಾಮಾಕ್ಯ ದೇವಸ್ಥಾನ ಕೂಡಾ ಸೇರುತ್ತದೆ. ಇಲ್ಲಿ ಮಾತಾ ಸತಿಯ ಯೋನಿಯು ಬಿದ್ದಿದೆ ಎಂಬ ನಂಬಿಕೆ ಇದ್ದು, ಅದಕ್ಕಾಗಿಯೇ ಇಲ್ಲಿ ಸತಿಯ ಯೋನಿ ರೂಪವನ್ನು ಪೂಜಿಸಲಾಗುತ್ತದೆ. ಈ ದೇವಾಲಯವನ್ನು 8ನೇ-9ನೇ ಶತಮಾನದಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಬಳಿಕ ಇಲ್ಲಿ ಸಾಕಷ್ಟು ಹೊಸ ಸೇರ್ಪಡೆಗಳು, ಪುನರ್ನಿಮಾಣ ಕಾರ್ಯಗಳೂ ಆಗಾಗ ನಡೆದ ಉಲ್ಲೇಖ ಕೂಡಾ ಸಿಗುತ್ತದೆ. ಅಂತಿಮವಾಗಿ ನೀಲಾಚಲ ಎಂಬ ವಾಸ್ತುಶೈಲಿಯನ್ನು ಇಲ್ಲಿ ಅಳವಡಿಸಿರುವುದು ಕಾಣಿಸುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.