ಬಿಜೆಪಿಯನ್ನು ಕರ್ನಾಟಕದಲ್ಲಿ ಹೀನಾಯವಾಗಿ ಸೋಲಿಸಿದ ಬಂಡೆಗೆ ಮತ್ತೊಂದು ಸಂಕಷ್ಟ ಎದುರಾಗು.ತ್ತಾ

 | 
ಲಪೂ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಸಿಬಿಐ ಕಂಟಕ ಆರಂಭವಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸದಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆ ಶಿವಕುಮಾರ್ ಅವರಿಗೆ ಹಿನ್ನಡೆಯಾಗಿದೆ. ಡಿಕೆಶಿ ವಿರುದ್ಧದ ಪ್ರಕರಣವನ್ನು ಸಿಬಿಐ 
ತನಿಖೆ ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ.

ಡಿಕೆ ಶಿವಕುಮಾರ್‌ ಅವರು ತಡವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಅದಲ್ಲದೇ ಸಿಬಿಐ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಅಲ್ಲದೆ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಹೈಕೋರ್ಟ್ ಆದೇಶ ನೀಡಿದೆ.

ಗೊತ್ತುಪಡಿಸಿದ ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆಪಾದನೆ ಸಂಬಂಧ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಏಪ್ರಿಲ್‌ನಲ್ಲಿ ಪೂರ್ಣಗೊಂಡಿತ್ತು. 

ವಾದ ಪ್ರತಿವಾದ ಆಲಿಸಿದ್ದ ನ್ಯಾ. ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಆದೇಶವನ್ನು ಕಾಯ್ದಿರಿಸಿತ್ತು.
2013-18ರ ನಡುವೆ ಅವರು ಸಂಪಾದಿಸಿದ ಆಸ್ತಿಯಲ್ಲಿ 75 ಕೋಟಿ ರೂ. ಅಕ್ರಮ ಸಂಪಾದನೆ ಎನ್ನುವುದು ಅವರ ಮೇಲೆ 2020ರಲ್ಲಿ ದಾಖಲಾದ ಎಫ್‌ಐಆರ್‌ನ ಮೂಲ ಅಂಶ. ಆದರೆ, ಬಳಿಕ ಅಕ್ರಮ ಆಸ್ತಿಯ ತನಿಖೆಗೆ ಇಳಿದ ಅಧಿಕಾರಿಗಳಿಗೆ ಇನ್ನೂ ಹಲವು ಮಾಹಿತಿಗಳು ಸಿಕ್ಕಿವೆ. ಸಿಬಿಐ ಕಳೆದ ಎರಡುವರೆ ವರ್ಷಗಳಿಂದ ಡಿ.ಕೆ.ಶಿವಕುಮಾರ್‌ ಅವರ ಆಸ್ತಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದೆ.

ಸಿಬಿಐ ತನಿಖೆಯಲ್ಲಿ ಬಹಿರಂಗಗೊಂಡಿರುವುದು ಕೇವಲ ಡಿ.ಕೆ ಶಿವಕುಮಾರ್‌ ಅವರ ಆಸ್ತಿ ಮಾತ್ರವಲ್ಲ, ಅವರು ತಮ್ಮ ಪತ್ನಿ ಉಷಾ ಮತ್ತು ಮಕ್ಕಳ ಹೆಸರಲ್ಲಿ ಮಾಡಿರುವ ಆಸ್ತಿ ಹಾಗೂ ಅದು ಹೆಚ್ಚಳವಾಗಿರುವ ಮಾಹಿತಿಯೂ ಬಯಲಾಗಿದೆ. ಡಿಕೆ ಶಿವಕುಮಾರ್ ಅವರ ಕುಟುಂಬದವರ ಆಸ್ತಿ ಹೆಚ್ಚಳವನ್ನೂ ಅಕ್ರಮ ಆಸ್ತಿ ಎಂದು ಪರಿಗಣಿಸಲಾಗಿದೆ. 

ಡಿಕೆಶಿ ಅವರ ಪತ್ನಿ ಉಷಾ ಅವರ ಹೆಸರಲ್ಲಿ ಮೊದಲು 17.33 ಕೋಟಿ ಆಸ್ತಿ ಇತ್ತು, ಅದು 43.12 ಕೋಟಿಗೆ ಏರಿದೆ. ಮಕ್ಕಳ‌ ಹೆಸರಿನಲ್ಲಿ ಈ ಮೊದಲು 61.75 ಕೋಟಿ ಇದ್ದದ್ದು 75 ಕೋಟಿ ರೂ. ಆಗಿದೆ. 75 ಕೋಟಿಯ ಜೊತೆಗೆ 3 ಕೋಟಿ ಮೌಲ್ಯದ ಚರಾಸ್ತಿಯೂ ಪತ್ತೆಯಾಗಿದೆ. ಸಿಬಿಐ ತನಿಖೆಯಲ್ಲಿ ಕೇವಲ ಆಸ್ತಿ, ಅದರ ಮೌಲ್ಯ ಮಾತ್ರ ಬಹಿರಂಗ ಆಗಿರುವುದಲ್ಲ. ಡಿಕೆಶಿ ಮತ್ತು ಕುಟುಂಬಸ್ಥರು ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ನಡೆಸಿರುವುದು ಕೂಡಾ ಬಹಿರಂಗಗೊಂಡಿದೆ.

ಡಿಕೆಶಿ ಮತ್ತು ಕುಟುಂಬಸ್ಥರು ಬರೋಬರಿ 98 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದಾರೆ. ಇದರಲ್ಲಿ ನಡೆದಿರುವ ವ್ಯವಹಾರಗಳ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ. ಅದರ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅದು ಹೈಕೋರ್ಟ್‌ಗೆ ತಿಳಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.