ಈಗಾಗಲೇ ಹುಟ್ಟಿದ ಮಗುವನ್ನು ಕದ್ದ ಕಳ್ಳರು, ನಾಲ್ಕು ದಿನದ ಮಗುವಿನ ತಾಯಿ ಕಂಗಾಲು

 | 
Hshs

ಮಗುವನ್ನೇ ಕಳ್ಳತನ ಮಾಡುವಷ್ಟು ಕೆಟ್ಟ ಕಾಲ ಬಂದುಬಿಟ್ಟಿದೆ ಹೌದು ಕೋಲಾರ ತಾಯಿ & ಮಕ್ಕಳ ಆಸ್ಪತ್ರೆಯಲ್ಲಿ ಮಾಲೂರಿನ ಪಟೇಲ ಪಟ್ಟಣದ ನಂದಿನಿ ಹಾಗೂ ಪೂವರಸನ್ ದಂಪತಿಯ ಮಗುವನ್ನು ಮೂವರು ಮಹಿಳೆಯರು ಕದ್ದೊಯ್ದಿದ್ದರು. ಕೋಲಾರ ಜಿಲ್ಲಾ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿನ ಹೆರಿಗೆ ನಂತರದ ಕೊಠಡಿಯಲ್ಲಿ ಬಾಣಂತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. . 

ಮಗು ಆಟ ಆಡಿಸುವ ಸೋಗಿನಲ್ಲಿ ಮಹಿಳೆಯರು ಕಳ್ಳತನ ಮಾಡಿದ್ದು, 7 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲಾಗಿತ್ತು.ಮಗುವನ್ನು ಬ್ಯಾಗ್​ನಲ್ಲಿರಿಸಿಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿ ಕಣ್ಣಿನಲ್ಲಿ  ಸೆರೆಯಾಗಿತ್ತು. 

ಮಗುವಿಗೆ ಹೃದಯ ಸಂಬಂಧಿ ಖಾಯಿಲೆ ಹಿನ್ನೆಲೆ ತಡರಾತ್ರಿ ಮತ್ತೆ ICUನಲ್ಲಿ ನವಜಾತ ಶಿಶುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವನ್ನು ರಕ್ಷಣೆ  ಮಾಡಿರುವ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಕೇವಲ 6 ಗಂಟೆಯಲ್ಲೆ ಮಗು ರಕ್ಷಿಸಿ, ತಾಯಿಗೆ ಪೊಲೀಸರು ಒಪ್ಪಿಸಿದ್ದಾರೆ. 

ಬಂಧಿತ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಈ ಮಗುವನ್ನು ತಮಿಳುನಾಡಿಗೆ ರವಾನಿಸಲು ಸ್ವಾತಿ ಪ್ಲಾನ್ ಮಾಡಿಕೊಂಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅವಶ್ಯಕತೆ ಇದ್ದಿದಕ್ಕೆ ಮಗುವನ್ನು ಸ್ವಾತಿ ಅಪಹರಣ ಮಾಡಿದ್ದಾಳೆ ಅಂತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದ್ರೇ ಇದರ ಹಿಂದೆ ಮಕ್ಕಳ ಅಪಹರಣದ ಜಾಲ ಇದೀಗ ಅನ್ನೋದನ್ನು ತನಿಖೆ ಮಾಡಲಾಗ್ತಿದೆ. ಪೊಲೀಸರ ಕಾಯ೯ಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.