ಅನುಶ್ರೀ ಕೆ ನ್ನೆಯ ಹತ್ತಿರ ಹತ್ತಿರ ಬಂದ ಉಪ್ಪಿ, ಮೂಕವಿಸ್ಮಿತರಾದ ಪ್ರೇಕ್ಷಕರು
Sep 28, 2024, 19:35 IST
|
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಶಿವಣ್ಣ-ಉಪ್ಪಿ ಸ್ಪೆಷಲ್ ಮಹಾಸಂಚಿಕೆ ಇದೇ ಭಾನುವಾರ ಸಂಜೆ 7ರಿಂದ 11 ಗಂಟೆವರೆಗೆ ನಡೆಯಲಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಇದಕ್ಕೆ ಕೌಂಟರ್ ಕೊಡೋ ನಿಟ್ಟಿನಲ್ಲಿ ಶಿವಣ್ಣ-ಉಪ್ಪಿ ಸ್ಪೆಷಲ್ ಮಹಾಸಂಚಿಕೆ ಪ್ರಸಾರ ಕಾಣಲಿದೆ.
ಈಗಾಗಲೇ ಯುಐ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದು ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ. ಇದು ಉಪೇಂದ್ರ ನಿರ್ದೇಶನದ ಸಿನಿಮಾ. ಈ ಕಾರಣದಿಂದಲೂ ಜನರಿಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ರಿಲೀಸ್ ಆಗೋದು ಯಾವಾಗ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ವಿಚಾರವನ್ನು ಅನುಶ್ರೀ ಕಿವಿಯಲ್ಲಿ ಉಪೇಂದ್ರ ಹೇಳಿದ್ದಾರೆ.
ಇನ್ನು ಯುಐ ಸಿನಿಮಾ ಬಗ್ಗೆ ಮಾತನಾಡಿದ ಶಿವರಾಜ್ಕುಮಾರ್, ಉಪ್ಪಿ ಸಿನಿಮಾ ಎಂದಾಗ ಯಾವಾಗಲೂ ಕಾಯುತ್ತಾ ಇರುತ್ತೇನೆ. ಆದರಲ್ಲಿ ವಿಶೇಷವಾದದ್ದು ಏನೋ ಇರುತ್ತದೆ ಎಂಬ ನಂಬಿಕೆ.ಹಾಗಾಗಿ ಸಾಮಾನ್ಯ ಸಿನಿಮಾ ನೋಡೋದಕ್ಕೂ ಉಪೇಂದ್ರ ಸಿನಿಮಾ ನೋಡೋದಕ್ಕೂ ವ್ಯತ್ಯಾಸ ಇದೆ. ಯುಐ ಎಂದರೆ ನಾನು ನೀನು ಎಂದರು ಶಿವಣ್ಣ.
ಆ ಬಳಿಕ ಅನುಶ್ರೀ ಅವರು ರಿಲೀಸ್ ಡೇಟ್ ಬಗ್ಗೆ ಕೇಳಿದರು. ವೇದಿಕೆ ಏರಿದ ಉಪೇಂದ್ರ ಅವರು, ಅನುಶ್ರೀ ಕಿವಿಯಲ್ಲಿ ಏನೋ ಹೇಳಿದರು. ಎಲ್ಲರೂ ರಿಲೀಸ್ ಡೇಟ್ ಅನೌನ್ಸ್ ಆಯಿತು ಎಂದುಕೊಂಡರು. ಉಪೇಂದ್ರ ಅವರು ಕಿವಿಯಲ್ಲಿ ಹೇಳಿದ್ದು, ಯಾರಿಗೂ ಹೇಳಬೇಡಿ ಎಂಬುದಾಗಿತ್ತು. ಹಾಗಾಗಿ ಅನುಶ್ರೀ ಮುಗುಳ್ನಗು ಬೀರಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.