ಯುದ್ಧ ಭೂಮಿ ಇಸ್ರೇಲ್ ಗೆ ಅಮೆರಿಕಾ ಅಧ್ಯಕ್ಷ ಭೇಟಿ, ಹಮಾಸ್ ಉ.ಗ್ರರಿಗೆ ನಡುಕ ಶುರು

 | 
Gg

ಅಕ್ಟೋಬರ್ 7ರ ಹಮಾಸ್ ದಾಳಿ ಬಳಿಕ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಬುಧವಾರ ಪ್ರಯಾಣಿಸಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷರು ಬುಧವಾರ ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ. 

ಅವರು ಇಸ್ರೇಲ್, ಈ ಪ್ರದೇಶ ಮತ್ತು ಜಗತ್ತಿಗೆ ನಿರ್ಣಾಯಕವಾದ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಇಸ್ರೇಲ್‌ಗೆ ತನ್ನ ಜನರನ್ನು ಹಮಾಸ್ ಮತ್ತು ಇತರೆ ಭಯೋತ್ಪಾದಕರಿಂದ ರಕ್ಷಿಸಿಕೊಳ್ಳುವ ಹಾಗೂ ಭವಿಷ್ಯದ ದಾಳಿಗಳನ್ನು ತಡೆಯುವ ಹಕ್ಕು ಹಾಗೂ ಕರ್ತವ್ಯ ಇದೆ ಎಂಬುದನ್ನು ಬೈಡನ್ ಸ್ಪಷ್ಟಪಡಿಸಲಿದ್ದಾರೆ.

ಜೋರ್ಡಾನ್ ಹಾಗೂ ಈಜಿಪ್ಟ್ ನಾಯಕರು ಮತ್ತು ಪ್ಯಾಲೆಸ್ಟೀನ್ ಅಥಾರಿಟಿ ಅಧ್ಯಕ್ಷರ ಜತೆ ಮಾತುಕತೆ ನಡೆಸಲು ಅವರು ಜೋರ್ಡಾನ್‌ಗೆ ಕೂಡ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಹೇಳಿದೆ. ಇದಕ್ಕೂ ಮುಂಚೆ, ಬೈಡನ್ ಅವರು ಈಜಿಪ್ಟ್ ಅಧ್ಯಕ್ಷ ಎಲ್ ಸಿಸಿ ಹಾಗೂ ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುದಾನಿ ಅವರ ಜತೆ ಸೋಮವಾರ ದೂರವಾಣಿ ಮಾತುಕತೆ ನಡೆಸಿದ್ದರು.

ಇಸ್ರೇಲ್‌ನಲ್ಲಿ ಹಮಾಸ್ ಉಗ್ರ ದಾಳಿ ನಂತರ ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಕುರಿತು ಅವರು ಸಮಾಲೋಚನೆ ನಡೆಸಿದ್ದರು ಎಂದು ಹೇಳಲಾಗಿದೆ. ಕೆಲವು ದಿನಗಳಿಂದ ಟೆಲ್ ಅವಿವ್‌ನಲ್ಲಿಯೇ ಮೊಕ್ಕಾಂ ಹೂಡಿರುವ ಬ್ಲಿಂಕೆನ್, ಗಾಜಾಕ್ಕೆ ನೆರವು ನೀಡುವ ಸಂಬಂಧ ಅಮೆರಿಕ ಹಾಗೂ ಇಸ್ರೇಲ್ ಒಪ್ಪಂದವೊಂದಕ್ಕೆ ಬಂದಿವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.