ಹನಿಮೂನ್ ಫೋಟೋ ಹಂಚಿಕೊಂಡ ವಿಜಯ್ ಮಲ್ಯ ‌ಪುತ್ರ; ದೀಪಿಕಾ ಪಡುಕೋಣೆ ಶಾ ಕ್

 | 
ಹಹ

ದಿವಾಳಿಯಾಗಿ  ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಪುತ್ರ ಸಿದ್ಧಾರ್ಥ್ ಮಲ್ಯ ಇತ್ತೀಚೆಗೆ ಬಹುಕಾಲದ ಗೆಳತಿ ಜೊತೆಗೆ ಹಸೆಮಣೆ ಏರಿದ್ದಾರೆ. ಲಂಡನ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಸಿದ್ದಾರ್ಥ್ ಮಲ್ಯ ಅವರು  ತನ್ನ ಗೆಳತಿ ಜಾಸ್ಮಿನ್‌ ರನ್ನು ಕೈಹಿಡಿದಿದ್ದಾರೆ.

ಸದ್ಯ ಹನಿಮೂನ್ ಮೂಡ್‌ನಲ್ಲಿರುವ ಸಿದ್ದಾರ್ಥ್, ಸ್ಯಾಂಟೋರಿನಿ ದ್ವೀಪ ಸಮುದ್ರದಲ್ಲಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಇದು ದಕ್ಷಿಣ ಏಜಿಯನ್ ನ ಗ್ರೀಸ್‌ನಲ್ಲಿದೆ.ಆದರೆ ಹನಿಮೂನ್‌ ಮೂಡ್‌ ನಲ್ಲಿರುವ ಸಿದ್ದಾರ್ಥ್ ಮಲ್ಯಗೆ ಭಾರತೀಯರು ಹಳೆ ಗರ್ಲ್ ಪ್ರೆಂಡ್ಸ್ ಗಳನ್ನು ನೆನಪಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ.

ಜೊತೆಗೆ ಯಾವಾಗ ಅಪ್ಪ ವಿಜಯ್ ಮಲ್ಯರನ್ನು ಕರೆದುಕೊಂಡು ಭಾರತಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಸಿದ್ಧಾರ್ಥ್ ಮಲ್ಯ ಅವರು ಬಾಲಿವುಡ್ ನಲ್ಲಿ ಅನೇಕ ಮಂದಿ ಜೊತೆಗೆ ಡೇಟಿಂಗ್ ನಲ್ಲಿದ್ದರು. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸೋನಾಲ್ ಚೌಹಾನ್ ಮತ್ತು ಇತರರು ಸೇರಿದಂತೆ ಬಾಲಿವುಡ್‌ನ ಕೆಲವು ಮನಮೋಹಕ ನಟಿಯರೊಂದಿಗೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. 

ಸಿದ್ಧಾರ್ಥ್ ಮಲ್ಯ ಅವರ ಡೇಟಿಂಗ್ ಇತಿಹಾಸದಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷ್ಯ ಎಂದರೆ ಅದು ನಟಿ ದೀಪಿಕಾ ಪಡುಕೋಣೆ ಅವರೊಂದಿಗಿನ ಸಂಬಂಧ. ಅಂದು ದೀಪಿಕಾ ಮತ್ತು ಸಿದ್ದಾರ್ಥ್ ಮಲ್ಯ ಸಂಬಂಧವು ಟಾಕ್‌ ಆಫ್ ದಿ ಟೌನ್ ಆಗಿತ್ತು. ಐಪಿಎಲ್ ಪಂದ್ಯಗಳು, ಈವೆಂಟ್‌ಗಳು ಮತ್ತು ಸಮಾರಂಭಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು.

ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಬಳಿಕ ಸಿದ್ದಾರ್ಥ್ ಆಕೆ ಹುಚ್ಚು ಹೆಣ್ಣು, ಉಡುಗೊರೆಯಾಗಿ ನೀಡಿದ್ದ ದುಬಾರಿ ವಜ್ರಗಳು ಮತ್ತು ಬ್ಯಾಗ್‌ಗಳನ್ನು ಎಂದಿಗೂ ಹಿಂದಿರುಗಿಸಲಿಲ್ಲ ಎಂದು ಆರೋಪಿಸಿದರು. ಅದಕ್ಕೆ ಕೌಂಟರ್ ಕೊಟ್ಟ ದೀಪಿಕಾ, ಡಿನ್ನರ್ ಡೇಟ್‌ನಲ್ಲಿ ಬಿಲ್ ಪಾವತಿಸಲು ಸಿದ್ಧಾರ್ಥ್ ಕೇಳಿದ್ದ ಘಟನೆಯನ್ನು ನೆನಪಿಸಿಕೊಂಡು ಮುಜುಗರಕ್ಕೀಡುಮಾಡಿದ್ದ ಎಂದು ಆರೋಪಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.