ವಿಜಯ್ ರಾಘವೇಂದ್ರ ಪತ್ನಿ ತನ್ನ ಮಕ್ಕಳ ಜೊತೆ, ಇಬ್ಬರು ಮುದ್ದಾದ ಮಕ್ಕಳನ್ನು ಬಿಟ್ಟು ಹೋದ ಸ್ಪಂದನಾ

 | 
Hh

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ವಿಜಯ್ ರಾಘವೇಂದ್ರ ಅವರ ಪತ್ನಿ ನಿನ್ನೆಯಷ್ಟೆ ಬ್ಯಾಂಕಾಕ್ ನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೌದು, ವಿಜಯ್ ರಾಘವೇಂದ್ರ ಅವರ ನೆಚ್ಚಿನ ಮಡದಿ ಕೆಲಸದ ನಿಮಿತ್ತ ಬ್ಯಾಂಕಾಕ್ ಹೋಗಿದ್ದರು. ಈ ವೇಳೆ ತೀರಾ ಎದೆನೋವು ಕಾಣಿಸಿಕೊಂಡ ಪರಿಣಾಮ ಇಹಲೋಕ ತ್ಯಜಿಸಿದ್ದಾರೆ. 

ಇನ್ನು ಈ ಸುದ್ದಿ ತಿಳಿದ ವಿಜಯ್ ರಾಘವೇಂದ್ರ ಅವರು ಕಂಗಾಲಾಗಿದ್ದಾರೆ. ನಿನ್ನೆಯಷ್ಟೆ ನಗುನಗುತ್ತಾ ಬ್ಯಾಂಕಾಕ್ ಪ್ರಯಾಣ ಬೆಳೆಸಿದ ಪತ್ನಿ ಇವತ್ತು ಶವವಾಗಿದ್ದಾರೆ. ವಿಜಯ್ ರಾಘವೇಂದ್ರ ಅವರು ಇದೀಗ ಬ್ಯಾಂಕಾಕ್ ನಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಬ್ಯಾಂಕಾಕ್ ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ನಡೆಯುತ್ತಿದೆ ಎಂಬ ಮಾಹಿತಿ ಇದೆ. 

ಇನ್ನು ವಿಜಯ್ ರಾಘವೇಂದ್ರ ಪತ್ನಿಯ ಶರೀರವನ್ನು ನಾಳೆ ಬೆಳಗ್ಗೆ ಬೆಂಗಳೂರಿಗೆ ತರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಸಾಕಷ್ಟು ಸಿನಿ ಕಲಾವಿದರು ನೆರೆದಿದ್ದಾರೆ. 

ಜೊತೆಗೆ ತಮ್ಮ ಶ್ರೀಮುರಳಿ ಕೂಡ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಕಣ್ಣೀರು ಹಾಕುತ್ತಾ ನಿಂತಿದ್ದಾರೆ‌. ಇನ್ನು‌ ವಿಜಯ್ ರಾಘವೇಂದ್ರ ಅವರ ಪತ್ನಿಯ ಹಳೆಯ ರೀಲ್ಸ್ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಾಗೂ ತನ್ನ ಮುದ್ದಾದ ಮಕ್ಕಳ ರೀಲ್ಸ್ ವಿಡಿಯೋ ಜಾಲತಾಣದಲ್ಲಿ ಕಾಣಬಹುದು. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.