ಮೋದಿ ಸರ್ಕಾರ ಮಾಸ್ಟರ್ ಮೈಂಡ್ ಏನು, ಈ ಲೇಡಿ ಗ್ಯಾಂಗ್ ಹಿಂದಿರುವ ರಹಸ್ಯ ಏನು ಗೊತ್ತಾ

 | 
ಕ್ಕ್ಕ್

ಮಹಿಳಾ ಸಬಲೀಕರಣಕ್ಕೆ ಸದಾ ಒತ್ತು ನೀಡುವ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಈಗಾಗಲೇ ಪ್ರಮುಖ ಖಾತೆಗಳನ್ನು ಮಹಿಳೆಯರಿಗೆ ನೀಡಿದ್ದಾರೆ.‌ ಅಷ್ಟಕ್ಕೂ ಅವರ್ಯಾರೂ ಎಂದರೆ 
ಮೀನಾಕ್ಷಿ ಲೇಖಿ ವೃತ್ತಿಯಲ್ಲಿ ವಕೀಲರಾಗಿದ್ದು, ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಕೆಲಸ ಮಾಡಿದ್ದಾರೆ. 

ದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಇವರೀಗ ಕೇಂದ್ರ ಮಂತ್ರಿ. ರಾಷ್ಟ್ರೀಯ ಮಹಿಳಾ ಆಯೋಗ ಸೇರಿ ಹಲವು ಸಂಘ-ಸಂಸ್ಥೆಗಳೊಟ್ಟಿಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅನುಪ್ರಿಯಾ ಸಿಂಗ್​ ಪಟೇಲ್​ ಉತ್ತರಪ್ರದೇಶದ ಬಿಜೆಪಿ ಮೈತ್ರಿ ಪಕ್ಷ ಅಪ್ನಾ ದಳದ ಸಂಸದೆ ಇವರು. 2019ರ ಲೋಕಸಭಾ ಚುನಾವಣೆಯಲ್ಲಿ ಮಿರ್ಜಾಪುರ್​ನಿಂದ ಗೆದ್ದಿದ್ದಾರೆ. 

ಇವರು ಅಪ್ನಾ ದಳದ ಅಧ್ಯಕ್ಷರಾಗಿದ್ದ ದಿವಂಗತ ಸೋನಿಲಾಲ್​ ಪಟೇಲ್​ರ ಪುತ್ರಿ. ಕೇವಲ 40ವರ್ಷದ ಅನುಪ್ರಿಯಾ ಸಿಂಗ್​ ದೆಹಲಿ ವಿಶ್ವವಿದ್ಯಾಲಯ ಮತ್ತು ಉತ್ತರಪ್ರದೇಶದ ಛತ್ರಪತಿ ಶಹುಜಿ ಮಹಾರಾಜ್​ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ
ಶೋಭಾ ಕರಂದ್ಲಾಜೆ ಇವರು ಕರ್ನಾಟಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ. 

ಓಪನ್​ ಯೂನಿವರ್ಸಿಟಿಯಲ್ಲಿ ಎಂಎಸ್​ಡಬ್ಲ್ಯೂ ಮಾಡಿದ್ದಾರೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಉನ್ನತ ಇಲಾಖೆಗಳನ್ನು ನಿಭಾಯಿಸಿದ ಅನುಭವಿ ರಾಜಕಾರಣಿ. ದರ್ಶನಾ ವಿಕ್ರಮ್​ ಜರ್ದೋಷ್​ ಇವರು ಗುಜರಾತ್​​ನ ಸೂರತ್ ಲೋಕಸಭಾ ಕ್ಷೇತ್ರದ ಸಂಸದೆ. ಹಾಗೇ, ಹಣಕಾಸು ಸ್ಥಾಯಿಸಮಿತಿ ಸದಸ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿ ಸದಸ್ಯೆಯೂ ಹೌದು. ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು. 

ಅನ್ನಪೂರ್ಣಾ ದೇವಿಜಾರ್ಖಂಡ್​ನ ಕೊಡೆರ್ಮಾ ಲೋಕಸಭಾ ಕ್ಷೇತ್ರದ ಸಂಸದೆ ಅನ್ನಪೂರ್ಣಾ ದೇವಿಯವರು ಈ ಬಾರಿ ಪ್ರಧಾನಿ ಮೋದಿ ಸಂಪುಟ ಸೇರಿದ್ದಾರೆ. ಇವರು ಮಹಿಳಾ ಸಬಲೀಕರಣ ಸ್ಥಾಯಿ ಸಮಿತಿ ಸದಸ್ಯೆ ಮತ್ತು ವಿದ್ಯುತ್ ಸಚಿವಾಲಯ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಲಹಾ ಸಮಿತಿಯ ಸದಸ್ಯೆಯಾಗಿದ್ದರು. 

1998ರಿಂದ 2000ರವರೆಗೆ ಬಿಹಾರ ವಿಧಾನಸಭೆಯ ಸದಸ್ಯೆಯಾಗಿದ್ದರು.​ ಪೂರ್ವ ತ್ರಿಪುರಾ ಲೋಕಸಭಾ ಕ್ಷೇತ್ರದ ಸಂಸದೆ ಪ್ರತಿಮಾ ಭೌಮಿಕ್​ ಮೂಲತಃ ಕೃಷಿಕರು. ರಾಜಕೀಯಕ್ಕೆ ಬರುವುದಕ್ಕೂ ಮೊದಲು ಕೃಷಿ ಮಾಡುತ್ತಿದ್ದರು. ಸದ್ಯ ರೈಲ್ವೆ ಇಲಾಖೆ ಸಲಹಾ ಸಮಿತಿಯ ಸದಸ್ಯರಾಗಿದ್ದರು.​ ಭಾರತಿ ಪ್ರವೀಣ್​ ಪವಾರ್​ ಅವರು ಮಹಾರಾಷ್ಟ್ರದ ದಿಂಡೋರಿ ಲೋಕಸಭಾ ಕ್ಷೇತ್ರದ ಸಂಸದೆ. NDMVPS ವೈದ್ಯಕೀಯ ಕಾಲೇಜಿನಲ್ಲಿ ಸರ್ಜರಿಯಲ್ಲಿ ಎಂಬಿಬಿಎಸ್​ ಓದಿದ್ದಾರೆ. ಕೌಶಲಾಭಿವೃದ್ಧಿ ಮತ್ತು ಉದ್ಯಮ ಇಲಾಖೆ ಸಲಹಾ ಸಮಿತಿಯ ಸದಸ್ಯೆಯಾಗಿದ್ದರು. (ಮಿತ್ರರೆ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.