ಚಂದ್ರನ ಮೇಲೆ ವಿಕ್ರಮ್ ಏನು ಮಾಡುತ್ತಿದೆ, ರೋವರ್ ಹೊರ ಬರುತ್ತಿರುವ ದೃಶ್ಯ

 | 
Nx

 ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಗಳಿಗೆ ಸಮೀಪಿಸಿದೆ. ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಇಸ್ರೋದ ಚಂದ್ರಯಾನ- 3ನೌಕೆಯ ಭಾಗವಾದ ವಿಕ್ರಂ ಲ್ಯಾಂಡರ್ ಸಂಜೆ 6.04 ಗಂಟೆಗೆ ಚಂದ್ರನ ಮೇಲಿಳಿಯಲು ಸನ್ನದ್ಧವಾಗಿದೆ. ಭೂಮಿ ಮತ್ತು ಚಂದ್ರನ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು 3.84 ಲಕ್ಷ ಕಿ.ಮೀ. ಸಾಗಿರುವ ಈ ನೌಕೆಯನ್ನು ಚಂದ್ರನ ದಕ್ಷಿಣ ಧ್ರವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ವಿಜ್ಞಾನಿಗಳು ಸಜ್ಜಾಗಿದ್ದರು. ಯಾವುದೇ ತಾಂತ್ರಿಕ ವೈಫಲ್ಯವಾದರೂ ಲ್ಯಾಂಡರ್ ಅನ್ನು ಸುಗಮವಾಗಿ ಇಳಿಸಲು ಇಸ್ರೋ ಈ ಬಾರಿ ವೈಫಲ್ಯದ ಮಾಡೆಲ್ ಅಳವಡಿಸಿಕೊಂಡಿದೆ. ದಕ್ಷಿಣ ಧ್ರುವದಲ್ಲಿನ ರಹಸ್ಯ ಅರಿಯುವ ಈ ಯೋಜನೆ ಅಂತಿಮವಾಗಿ ಯಶಸ್ವಿಯಾಗಿದೆ. ಹಾಗಾಗಿ ಚಂದ್ರನ ಮೇಲೆ ಕಾಲಿಟ್ಟ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತಕ್ಕೆ ದಕ್ಕಿದೆ.

ಸಾಫ್ಟ್ ಲ್ಯಾಂಡಿಂಗ್ ಅಂದರೆ ನಾವಂದುಕೊಂಡಷ್ಟು ಮೆತ್ತಗೇನೂ ಇಳಿಯುವುದಿಲ್ಲ. ಆಗ ಲ್ಯಾಂಡರ್ ಸೆಕೆಂಡ್‌ಗೆ ಕನಿಷ್ಠ 2 ಮೀ ನಿಂದ, ಗರಿಷ್ಠ 3 ಮೀ ವೇಗದಲ್ಲಿರುತ್ತದೆ. ಅಂದರೆ, ಗಂಟೆಗೆ 7.2ರಿಂದ 10.8 ಕಿ.ಮೀ. ವೇಗ. ಈ ವೇಗದಲ್ಲಿ ನಾವೇನಾದರೂ ಬಿದ್ದರೆ ಮೂಳೆ ಮುರಿತಕ್ಕೊಳಗಾಗಬಹುದು ಅಷ್ಟೇ.

ಜುಲೈ 14ರಂದು ಉಡಾವಣೆಗೊಂಡು ಭೂಮಿಯ ಕಕ್ಷೆಯನ್ನು ಸೇರಿದ ಚಂದ್ರಯಾನ-3 ನೌಕೆ, ಧೀರ್ಘವೃತ್ತಾಕಾರದಲ್ಲಿ ಸುತ್ತುತ್ತಾ ಮೊದಲ ಬಾರಿ ಜು.15ರಂದು ಕಕ್ಷೆ ಎತ್ತರಿಸುವ ಕಾರ್ಯಕ್ಕೆ ಒಳಗಾಯಿತು. ಬಳಿಕ ಜು.17, 18, 20ರಂದು ನಿರಂತರವಾಗಿ ಕಕ್ಷೆ ಎತ್ತರಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಆ.1ರಂದು ನೌಕೆಯಲ್ಲಿರುವ ಎಂಜಿನ್ ಬಳಸಿ ಅದನ್ನು ಚಂದ್ರನತ್ತ ಕಳುಹಿಸಲಾಯಿತು. ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ತಲುಪಿದ ನೌಕೆ ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗಿ ನೌಕೆ ಸುತ್ತಲು ಆರಂಭಿಸಿತು. ಬಳಿಕ ಆ.6,9,14 ಮತ್ತು 16ರಂದು ನೌಕೆಯ ಕಕ್ಷೆಯನ್ನು ಇಳಿಸುವ ಕಾರ್ಯ ಕೈಗೊಳ್ಳುವ ಮೂಲಕ ಚಂದ್ರನ ಅತ್ಯಂತ ಸಮೀಪಕ್ಕೆ ಕೊಂಡೊಯ್ಯಲಾಯಿತು. ಬಳಿಕ ಆ.17ರಂದು ನೌಕೆಯನ್ನು ಲ್ಯಾಂಡರ್‌ನಿಂದ ಬೇರ್ಪಡಿಸಲಾಯಿತು. ಇದಾದ ಬಳಿಕ ಲ್ಯಾಂಡರ್ ಚಂದ್ರನನ್ನು ಸುತ್ತುತ್ತಿರುವ ಕಕ್ಷೆಯನ್ನು 2 ಬಾರಿ ಕುಗ್ಗಿಸಿ ಲ್ಯಾಂಡ್ ಮಾಡಲು ಸಿದ್ಧತೆ ಮಾಡಲಾಗಿದೆ.

ಇಳಿವ ಮುನ್ನ ಲ್ಯಾಂಡರ್‌ನಲ್ಲಿನ ಸೆನ್ಸರ್‌ಗಳ ಮೂಲಕ ಸ್ಥಳ ಪರಿಶೀಲನೆ. ಜಾಗ ಸೂಕ್ತವಾಗಿದ್ದರೆ ಮಾತ್ರ ಲ್ಯಾಂಡಿಂಗ್. ಇಲ್ಲವೇ ಬೇರೆ ಜಾಗದಲ್ಲಿ ಇಳಿವ ಪ್ರಯತ್ನ.ಸಾಫ್ಟ್‌ ಲ್ಯಾಂಡಿಂಗ್ ಬಳಿಕ, ಲ್ಯಾಂಡಿಂಗ್ ಸೆನ್ಸರ್‌ಗಳಿಂದ ವಿಕ್ರಂನೊಳಗಿರುವ ಕಂಪ್ಯೂಟರ್‌ಗಳಿಗೆ ಸಂದೇಶ ರವಾನೆ. ಈ ಮೂಲಕ ಒಳಗಿನ ವ್ಯವಸ್ಥೆ ಜಾಗೃತಕ್ಕೆ ಕ್ರಮ. ಲ್ಯಾಂಡರ್ ಇಳಿದ 4 ಗಂಟೆಗಳ ಬಳಿಕ ಅದರ ಬಾಗಿಲು ತೆರೆದು, ಅದರೊಳಗಿಂದ ಪ್ರಗ್ಯಾನ್ ರೋವರ್ ಹೊರಬಂದು ಚಂದ್ರನ ಮೇಲೆ ನಿಧಾನವಾಗಿ ಇಳಿಯಲಿದೆ ಹೀಗೆ ರೋವರ್ ಕೆಳಗೆ ಇಳಿದ ಬಳಿಕ ರೋವರ್ ಮತ್ತು ಲ್ಯಾಂಡರ್ ಪರಸ್ಪರ ಚಿತ್ರಗಳನ್ನು ತೆಗೆದು ಬೆಂಗಳೂರಿನಲ್ಲಿ ಇರುವ ಇಸ್ರೋ ಕೇಂದ್ರಕ್ಕೆ ರವಾನಿಸಲಿದೆ. ಪ್ರಜ್ಞಾನ್ ರೋವರ್‌ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು ಇದೆ. ರೋವರ್ ಸಾಗಿದ ಹಾದಿಯಲ್ಲಿ ಅವುಗಳ ಚಿತ್ರಣ ಮೂಡಲಿದೆ. ಲ್ಯಾಂಡರ್ ಮತ್ತು ರೋವರ್ ಎರಡೂ ಸುರಕ್ಷಿತವಾಗಿದೆ ಎಂದು ಇಸ್ರೋಗೆ ಖಚಿತವಾದ ಬಳಿಕ ಅದರೊಳಗಿನ ಉಪಕರಣಗಳನ್ನು ಬಳಸಿ ಸಂಶೋಧನೆ ಆರಂಭವಾಗುತ್ತದೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.