ಅದು ಏನು ಅಂತ ತಿಳಿಯದ ಸಮಯದಲ್ಲಿ ರೂಮ್ ಒಳಗ ಹಾಕಿ ಬಾಗಿಲು ಹಾಕಿ ಬಿಟ್ಟ, ನೇಹಾ ಗೌಡ
Mar 28, 2025, 16:54 IST
|

ನಾನು ನನ್ನ ಅಮ್ಮನ ಜೊತೆ ಹೇಳಿಕೊಂಡಿದ್ದೇ ಎಷ್ಟೋ ವರ್ಷಗಳು ಆದಮೇಲೆ. ನಾನು ಇದನ್ನು ಯಾರ ಹತ್ತಿರವೂ ಹೇಳಿಕೊಳ್ಳಬಾರದು. ಹೇಳಿಕೊಂಡರೆ ನನ್ನನ್ನು ನೋಡುವ ರೀತಿ ಬದಲಾಗುತ್ತದೆ. ಅಂತಾ ಅಂದುಕೊಂಡು ಯಾರ ಹತ್ತಿರನೂ ಹೇಳಿರಲಿಲ್ಲ. ಅಮ್ಮನೂ ಇವಳ್ಯಾಕೆ ಇಷ್ಟು ಡಲ್ ಆಗಿರುತ್ತಾಳೆ ಅಂದುಕೊಳ್ಳುತ್ತಿದ್ದರು. ಕೆಲ ವರ್ಷ ಆದ ಮೇಲೆ ಅಮ್ಮನಿಗೆ ಹೇಳಿಕೊಂಡೆ. ಅವರು ಕೂಡ ಶಾಕ್ ಆದರು. ಅಮ್ಮ ಹೋಗಿ ಅಪ್ಪಂಗೆ ಹೇಳಿದರು. ಆ ಸಮಯದಲ್ಲಿ ಅಪ್ಪ ಆ ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿ ಚೆನ್ನಾಗಿತ್ತು. ಅದಾದ ಮೇಲೆ ಮತ್ತೆ ಕಂಬ್ಯಾಕ್ ಆದೆ. ಎಲ್ಲವನ್ನು ಚಂದನ್ ಗೆ ಹೇಳಿದ್ದೇನೆ. ಅವರು ತುಂಬಾ ಧೈರ್ಯ ಹೇಳಿದ್ದಾರೆ ಎಂದರು.
ಬಾಲ್ಯದಲ್ಲಿ ನಾನು ಅಮ್ಮನ ಜೊತೆ ತುಂಬಾ ಕ್ಲೋಸ್. ನನಗೆ ಅವರು ಇರಲೇಬೇಕು. ಅವತ್ತು ಅಜ್ಜಿ ಮನೆಯಲ್ಲಿ ಮನೆಯಲ್ಲಿ ಮಲಗಿಸಿ, ಅಜ್ಜಿಯನ್ನು ನೋಡಿಕೊಳ್ಳುವಂತೆ ಹೇಳಿ ಪಕ್ಕದಲ್ಲೇ ಇದ್ದ ಸಂಬಂಧಿಕರ ಮನೆಗೆ ಅಮ್ಮ ಹೋಗಿದ್ದರು. ನಿದ್ದೆಯಿಂದ ಎದ್ದಾಗ ಅಮ್ಮ ಇರಲಿಲ್ಲ. ಅಜ್ಜಿ ಹಾಲು ತರು ಹೋದರು ನಾನು ಪಕ್ಕದ ಬೀದಿಯಲ್ಲಿ ಅಲ್ವಾ ಅಂತಾ ಅಮ್ಮನನ್ನು ಹುಡುಕಿಕೊಂಡು ಹೊರಟೆ.ಆ ವೇಳೆ ದಾರಿಯಲ್ಲಿ ಯಾರೋ ಸಿಕ್ಕಿ ನಿಮ್ಮ ಅಪ್ಪ ನನಗೆ ಗೊತ್ತು ಅಂದರು. ಅಪ್ಪ ವಾಚ್ ರಿಪೇರಿಗೆ ಕೊಟ್ಟಿದ್ದಾರೆ. ಅದು ರೆಡಿಯಾಗಿದೆ ಅದನ್ನು ತೆಗೆದುಕೊಂಡು ಹೋಗು ಅಂತಾ ಹೇಳಿ ಕರೆದುಕೊಂಡು ಹೋದರು. ಮೊದಲು ನಾನು ಅಪ್ಪ ಹೇಗೆ ಗೊತ್ತು ಅಂತಾ ಪ್ರಶ್ನೆ ಮಾಡಿದೆ. ಆಮೇಲೆ ಅಪ್ಪನ ಹೆಸರು ಹೇಳುತ್ತಿದಂತೆ ಅವರ ಜೊತೆ ಹೊರಟೆ. ಇದೆಲ್ಲಾ ನಡೆದಿದ್ದು ಚಿಕ್ಕಪೇಟೆಯಲ್ಲಿ ಎಂದಿದ್ದಾರೆ.
ಅವರು ನನ್ನ ಯಾವುದೋ ಬಿಲ್ಡಿಂಗ್ ಒಳಗೆ ಕರೆದುಕೊಂಡು ಹೋದರು. ಬಳಿಕ ಅಸಭ್ಯವಾಗಿ ವರ್ತಿಸ ತೊಡಗಿದ. ಆಗ ನನಗೆ ಟೆನ್ಷನ್ ಆಯ್ತು. ಜೋರಾಗಿ ಅಳಲು ಶುರು ಮಾಡಿದೆ. ಒಂದು ಬಾರಿಸಿದ. ನೀನು ಅತ್ತರೆ ಕೊಂದೇ ಬಿಡುತ್ತೇನೆ ಎಂದು ಚಾಕು ತೆಗೆದ. ಅದನ್ನು ನೋಡಿ ಸುಮ್ಮನಾಗಿದ್ದೆ. ಕೊನೆಯಲ್ಲಿ ಯಾರೋ ಒಬ್ಬರು ಮಗು ಕರೆದುಕೊಂಡು ಅಲ್ಲಿಗೆ ಬಂದರು ಅವರನ್ನು ನೋಡಿ ಜೋರಾಗಿ ಅಳಲು ಶುರು ಮಾಡಿದೆ.
ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಅಲ್ಲಿ ಒಬ್ಬರು ಹಾಸಿಗೆ ಅಂಗಡಿಯವರು ನನ್ನ ರಕ್ಷಣೆ ಮಾಡಿದರು. ಈಗಲೂ ನೆನಪಿಸಿಕೊಂಡರೆ ಬೇಸರ ಆಗುತ್ತದೆ ಎಂದು ನೇಹಾ ಗೌಡ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025