ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬರಲಿದ್ದಾರೆ, ಪೈನಲ್ ಸ್ಪರ್ಧಿಗಳು ಯಾರೆಲ್ಲ ಗೊ.ತ್ತಾ
ಇನ್ನೇನು ಕೆಲವೇ ದಿನಗಳಲ್ಲಿ ಬರಲಿದೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಹೌದು ಅಕ್ಟೋಬರ್ 8ರಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಶುರುವಾಗಲಿದೆ ಎಂಬುದಂತೂ ಖಾತರಿಯಾಗಿದೆ. ಕಲರ್ಸ್ ಕನ್ನಡ ವಾಹಿನಿಯ 'ಅನುಬಂಧ 2023' ಅವಾರ್ಡ್ಸ್ ಸಮಾರಂಭದಲ್ಲಿ ಬಿಗ್ ಬಾಸ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹಾಗಾದರೆ ಯಾರು ಯಾರು ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಏಳೋದು ಸಹಜ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮೊದಲ ಸ್ಪರ್ಧಿಯನ್ನು ಕಲರ್ಸ್ ವಾಹಿನಿ ರಿವೀಲ್ ಮಾಡಿದೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಕಲರ್ಸ್ ವಾಹಿನಿಯಾಗಲೀ, ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಸ್ಪರ್ಧಿಗಳಾಗಲೀ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವ ವಿಚಾರವನ್ನು ರಿವೀಲ್ ಮಾಡೋದಿಲ್ಲ.
ಸ್ಪರ್ಧಿಗಳು ಯಾರು ಎನ್ನೋದು 'ಬಿಗ್ ಬಾಸ್ ಕನ್ನಡ ಸೀಸನ್ 10' ಲಾಂಚ್ ಆಗುವ ದಿನವೇ ಗೊತ್ತಾಗುತ್ತದೆ. ಆದರೆ ಈ ಬಾರಿ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧಿ ಯಾರು ಎನ್ನೋದನ್ನು ವಾಹಿನಿ ಹೇಳಿದೆ. ಬೆಸ್ಟ್ ರೇಟೆಡ್ ಚಲನಚಿತ್ರ - 777 ಚಾರ್ಲಿ'. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಬಿಗ್ ಬಾಸ್ ಆಟ ಮುಗಿಯುವವರೆಗೆ ಚಾರ್ಲಿ ಆ ಮನೆಯಲ್ಲಿ ಇರತ್ತಾ ಇಲ್ಲವಾ ಅನ್ನೋದು ಸಂದೇಹ ಇದೆ, ಆಗಾಗ ಅದು ದೊಡ್ಮನೆಯೊಳಗಡೆ ಎಂಟ್ರಿ ಕೊಡಬಹುದು. ಈ ಬಗ್ಗೆ ಬಿಗ್ ಬಾಸ್ ತಂಡವೇ ಹೆಚ್ಚಿನ ಮಾಹಿತಿ ನೀಡಬೇಕಿದೆ. ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
'ನಾಗಿಣಿ 2' ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ನಿನಾದ್ ಹರಿತ್ಸ, ‘ಲಕ್ಷಣ’ ಧಾರಾವಾಹಿ ನಟಿ ಸುಕೃತಾ ನಾಗ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ‘ಗೀತಾ’ ಸೀರಿಯಲ್ ಭವ್ಯಾ ಗೌಡ, ಯುಟ್ಯೂಬರ್ ಭೂಮಿಕಾ ಬಸವರಾಜ್, ವರ್ಷಾ ಕಾವೇರಿ, ವರುಣ್ ಆರಾಧ್ಯ, ರಾಜೇಶ್ ಧ್ರುವ ,ಶನಿ ಧಾರಾವಾಹಿ ಖ್ಯಾತಿಯ ಸುನಿಲ್ ಮುಂತಾದವರು ದೊಡ್ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿ 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದೆ. ಈಗಾಗಲೇ ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ಹ್ಯಾಪಿ ಬಿಗ್ ಬಾಸ್ ಎಂದು ಹೇಳಿಕೆ ನೀಡಿದೆ. ಪ್ರತಿ ಸಲ ಇನೋವೇಟಿವ್ ಫಿಲ್ಮ್ ಸಿಟಿ ಬಳಿ ಬಿಗ್ ಬಾಸ್ ಶೋ ನಡೆಸಲಾಗುತ್ತಿದ್ದು, ಈ ಬಾರಿ ಮಾತ್ರ ತಾವರೆಕೆರೆ, ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ನಡೆಸಲಾಗುವುದಂತೆ.
ಹಾಗಾಗಿ ದೊಡ್ಮನೆ ವಿಭಿನ್ನವಾಗಿರುವುದಂತೂ ಸತ್ಯ. ಈ ಬಾರಿ ಯಾವ ಥೀಮ್‌ನಲ್ಲಿ ಬಿಗ್ ಬಾಸ್ ಮನೆ ಇರುವುದು ಎಂದು ಕಾದು ನೋಡಬೇಕಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರು ಈ ಶೋನ ನಿರೂಪಣೆ ಮಾಡಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.