ಯಾರು ಈ ವಿನಯ್, 35 ಕಂಪನಿ ಮಾಲೀಕನ ಬಗ್ಗೆ ಪತ್ನಿ ಹೇಳಿದ್ದೇನು ಗೊ.ತ್ತಾ

 | 
Bff

ಅದ್ಯಾಕೋ ಡ್ರೋನ್ ಪ್ರತಾಪ್ ಕಂಡ್ರೆ ವಿನಯ್ ಗೌಡ ಉರಿದುಬೀಳ್ತಿದ್ದಾರೆ. ಈಗಾಗಲೇ, ಡ್ರೋನ್ ಪ್ರತಾಪ್‌ಗೆ ಏಯ್ ತಿಕ್ಲಾ..ಒಂದ್ಸಲಿ ತಲೆ ಚೆಕ್ ಮಾಡಿಸ್ಕೋ ಮುಚ್ಕೊಂಡ್ ಕೇಳೋ ಲೇ ಅಂತೆಲ್ಲಾ ವಿನಯ್ ಹೇಳಿದ್ದಾರೆ. ಈಗ ಅವ್ನು ನಮ್ ಕ್ಲಾಸ್‌ಗೂ ಬರಲ್ಲ. ಅವನದ್ದು ಕ್ರಿಮಿನಲ್ ಥಿಂಕಿಂಗ್ ಅಂತ ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಗೌಡ ಕುಹಕವಾಡಿದ್ದಾರೆ.

ವಿನಯ್ ಅವರು ತಮ್ಮನ್ನ ತಾವು ಆನೆ ಅಂತ ಕರೆದುಕೊಳ್ಳುತ್ತಿದ್ದಾರೆ. ಆದರೆ ಟಾಸ್ಕ್‌ ವಿಚಾರಗಳಲ್ಲಿ ಬಲ ಪ್ರದರ್ಶನ ಆಗಿಲ್ಲ ಅಂತ್ಹೇಳಿ ವಿನಯ್ ಅವರನ್ನ ಕಾರ್ತಿಕ್ ನಾಮಿನೇಟ್ ಮಾಡಿದರು.ವಿನಯ್ ಕಡೆಯಿಂದ ತುಂಬಾ ರೂಲ್ಸ್ ಬ್ರೇಕ್ ಆಯ್ತು. ಏನೇ ಮಾತನಾಡಿದರೂ ವಾದ ಮಾಡೋಕೆ ಬರ್ತಾರೆ. ತುಂಬಾ ಪ್ರೊವೋಕಿಂಗ್ ಆಗ್ತಾರೆ ಅವರು ಅಂತ ವಿನಯ್ ಅವರನ್ನ ಸಂಗೀತಾ ನಾಮಿನೇಟ್ ಮಾಡಿದರು.

ಬಿಗ್ ಬಾಸ್ ಮನೆ ಅಂದ್ರೇನೇ ರೂಲ್ಸ್ ಅಂತ ವಿನಯ್ ಹೇಳಿದ್ರು. ಆದರೆ, ವಿನಯ್ ಕಡೆಯಿಂದ ರೂಲ್ಸ್ ಬ್ರೇಕ್ ಆಗಿದ್ರಿಂದ ಎಲ್ಲರಿಗೂ ಶಿಕ್ಷೆ ಬಂತು ಅಂತ್ಹೇಳಿ ವಿನಯ್ ಅವರನ್ನ ಸಿರಿ ನಾಮಿನೇಟ್ ಮಾಡಿದರು.ರೇಟಿಂಗ್‌ ಮಾಡುವಾಗ ನನಗೆ ಎಲ್ಲರಿಗಿಂತ ಕಡಿಮೆ ಅಂಕ  ಕೊಟ್ಟರು. ನೀನು ಕಾಂಪಿಟೇಶನ್ ಅಲ್ಲ, ನಿನ್ನನ್ನ ಕನ್ಸಿಡರ್ ಮಾಡಲ್ಲ ಅಂತ ಹೇಳಿದರು. ನನಗೆ ಹಾಗೆ ಅನ್ಸಲ್ಲ. 

ನಾನೂ ಕೂಡ ಒಂದು ಸ್ಟಾರ್ಟ್‌ ಅಪ್ ರನ್ ಮಾಡ್ತೀನಿ. ಒಂದಷ್ಟು ಜನರಿಗೆ ಉದ್ಯೋಗ ಕಲ್ಪಿಸಿದ್ದೇನೆ ಅಂತ ವಿನಯ್ ಅವರನ್ನ ನಾಮಿನೇಟ್ ಮಾಡಿ ಡ್ರೋನ್ ಪ್ರತಾಪ್ ಕಾರಣ ಕೊಡುತ್ತಿರುವಾಗ. ಮನೆಯೊಳಗೆ ಇರುವ ವಿಚಾರ ಮಾತನಾಡು. ಹೊರಗಡೆ 35 ಕಂಪನಿ ನನ್ನದೂ ಇದೆ. ಮನೆಯೊಳಗೆ ಇರುವ ವಿಚಾರ ಮಾತನಾಡು ಎಂದು ವಿನಯ್ ಗೌಡ ಮಧ್ಯೆ ಮಾತನಾಡಿದ್ದರು.

ಇನ್ನು ಈ ಕುರಿತಾಗಿ ಮಾತನಾಡಿದ ವಿನಯ್ ಪತ್ನಿ ಅಕ್ಷತಾ ಅವರು ಅವರು ಹಾಗೆ ಹೇಳಿಯೇ ಇಲ್ಲ ಹೇಳಿದರೂ ಕೂಡ 35 ಕಂಪನಿ ಇದೆ ಎಂದುಕೊ ಅಂದಿದ್ದಾರೆ ಚಾನಲ್ ಅವರು ಮಾತುಗಳನ್ನ ಕಟ್ ಮಾಡಿ ಪ್ರೋಮೋ ಮಾಡಿ ಜನರ ಕಣ್ಣಿಗೆ ವಿನಯ್ ಗೌಡ ಅವರು ಕೆಟ್ಟವರೆಂದು ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.