ತುಂಬು ಗರ್ಭಿಣಿ ಆನೆಯ ಸಾವಿಗೆ ಕಾರಣ ಯಾರು ಗೊತ್ತಾ, ಈ ವಿಡಿಯೋ ನೋಡಿದ ಪ್ರಧಾನಿ ಕೂಡ ಕಣ್ಣೀರು ಹಾಕಿದ್ದಾರೆ

 | 
Bzb

ಇಷ್ಟುದಿನ ಮೃಗಾಲಯಕ್ಕೆ ಬರುವವರ ಮನರಂಜಿಸುತ್ತಿತ್ತು ಆ ಆನೆ. ಯಾರಿಗೂ ತೊಂದರೆ ಮಾಡದೆ, ಎಲ್ಲರ ಜೊತೆಗೂ ಬೆರೆಯುತ್ತಿತ್ತು. ಹೀಗೆ ಎಲ್ಲರ ಪ್ರೀತಿಯ ಆನೆಗೆ ಆ ದೇವರು ಹೆಚ್ಚು ಆಯಸ್ಸನ್ನೇ ನೀಡಿರಲಿಲ್ಲ ಅಂತಾ ಕಾಣುತ್ತದೆ. ಹೊಟ್ಟೆಲ್ಲೇ ಕಂದಮ್ಮನನ್ನು ಕಿತ್ತುಕೊಂಡ ದೇವರು, ಕಡೆಗೆ ತಾಯಿ ಆನೆಯ ಉಸಿರನ್ನೂ ಕಸಿದಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಬನ್ನೇರುಟ್ಟ ಉದ್ಯಾನದಲ್ಲಿ.
ಹೌದು, ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ. 

ಬೆಂಗಳೂರಿಗರ ಅಚ್ಚುಮೆಚ್ಚಿನ ಜಾಗ, ವನ್ಯಜೀವಿ ತಾಣ ಬನ್ನೇರುಘಟ್ಟದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಭ್ರೂಣದಲ್ಲೇ ತನ್ನ ಕಂದಮ್ಮನನ್ನು ಕಳೆದುಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ತಾಯಿ ಆನೆ ಸುವರ್ಣ ಕೂಡ ಚಿಕಿತ್ಸೆ ಫಲಿಸದೆ ಇತ್ತೀಚಿಗೆ ಇಹಲೋಕ ತ್ಯಜಿಸಿದೆ. ಈ ಘಟನೆ ಇಡೀ ಬನ್ನೇರುಘಟ್ಟ ಸಿಬ್ಬಂದಿಗೆ ಆಘಾತ ತಂದಿದೆ. ಹಾಗೇ ಪ್ರೀತಿಯ ಸುವರ್ಣಳನ್ನು ಇಷ್ಟ ಪಡುತ್ತಿದ್ದ ಪ್ರಾಣಿ ಪ್ರಿಯರಿಗೂ ಈ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂಬುದೆ ಬೇಸರದ ಸಂಗತಿ. 

ಅಂದಹಾಗೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇಂದು ತನ್ನ ಮರಿಯ ಜೊತೆಗೆ ಸುವರ್ಣ ಆಟವಾಡಬೇಕಿತ್ತು. ಆದ್ರೆ ನಿನ್ನೆ ಪ್ರಸವ ವೇದನೆ ಮುಗಿದರೂ ಸುವರ್ಣ ತನ್ನ ಮರಿಗೆ ಜನ್ಮ ನೀಡದೇ ಇದ್ದಾಗ ಬನ್ನೇರುಘಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದರು. ತಕ್ಷಣ ವೈದ್ಯರನ್ನ ಕರೆಸಿ ಆನೆ ಹೊಟ್ಟೆ ತಪಾಸಣೆ ನಡೆಸಲಾಗಿತ್ತು. ಆದರೆ ಮೊದಲ ಆಘಾತ ಸಿಕ್ಕಿದ್ದೇ ಆಗ. ಭ್ರೂಣದಲ್ಲೇ ಮರಿ ಆನೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂತು. ಆ ಕೂಡಲೇ ಹೇಗಾದರೂ ಮಾಡಿ ತಾಯಿ ಆನೆಯನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದಾರೆ ಅಧಿಕಾರಿಗಳು. 

ಇದಕ್ಕಾಗಿ ನೀಡಬೇಕಾದ ಚಿಕಿತ್ಸೆಗೂ ವೈದ್ಯರು ಮುಂದಾಗಿದ್ದರು. ಶಸ್ತ್ರಚಿಕಿತ್ಸೆ ನಡೆಸಿದ್ದ ತಜ್ಞ ವೈದ್ಯರು, ಸುವರ್ಣ ಆನೆಯ ಹೊಟ್ಟೆಯೊಳಗೇ ಮೃತಪಟ್ಟಿದ್ದ ಮರಿಯನ್ನು ಹೊರಗೆ ತೆಗೆದಿದ್ದರು. ನಂತರ ತಾಯಿ ಆನೆ ಸುವರ್ಣಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು. ತಜ್ಞ ವೈದ್ಯರು ಅಲ್ಲೇ ಬೀಡುಬಿಟ್ಟು ಚಿಕಿತ್ಸೆ ನೀಡುತ್ತಿದ್ದರು. ಆದರೆ ಸುವರ್ಣ ಆನೆಯ ಆರೋಗ್ಯ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿತ್ತು. ಇದನ್ನ ಕಂಡು ಬನ್ನೇರುಘಟ್ಟ ಸಿಬ್ಬಂದಿ ಕೂಡ ಭಯಗೊಂಡಿದ್ದರು. ಆದರೂ ಅತಿಹೆಚ್ಚು ಮರಿಗಳಿಗೆ ಜನ್ಮ ನೀಡಿದ್ದ ಸುವರ್ಣ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.