ಬಿಗ್ ಬಾಸ್ ಮನೆಗೆ ಹೋಗಲು ಹಿಂದೇಟು ಹಾಕುವುದು ಯಾಕೆ, ಆ ಮನೆಯಲ್ಲಿ ನಡೆಯುವುದೆಲ್ಲಾ ಸುಳ್ಳಾ? ಅಥವಾ ನಿಜಾನಾ?

 | 
Hd

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ ರಿಯಾಲಿಟಿ ಶೋ ಸಲುವಾಗಿ ತೆರೆಮರೆಯಲ್ಲಿ ತಯಾರಿ ಶುರುವಾಗಿವೆ. ಅದರಂತೆ ಸೋಷಿಯಲ್‌ ಮೀಡಿಯಾದಲ್ಲಿಯೂ ಯಾರೆಲ್ಲ ಈ ಸಲದ ಬಿಗ್‌ಬಾಸ್‌ ಮನೆ ಪ್ರವೇಶ ಪಡೆಯಲಿದ್ದಾರೆ ಎಂಬ ಗುಲ್ಲು ಶುರುವಾಗಿದೆ. ಸಿನಿಮಾ ತಾರೆಯರ ಜತೆಗೆ ಜಾಲತಾಣದಲ್ಲಿ ಹವಾ ಎಬ್ಬಿಸಿದವರೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

ಕಳೆದ ವರ್ಷ ಕ್ಕೆ ಹೋಲಿಸಿದರೆ ಈ ವರ್ಷ ಕೆಲವು ಜನ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಕಳೆದ ಬಾರಿಯಂತೆ ಈ ಸಲ ಬಿಗ್‌ಬಾಸ್‌ ಒಟಿಟಿ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ. ಹಾಗಾಗಿ ನೇರವಾಗಿ ದೊಡ್ಡ ಮನೆಯಲ್ಲಿಯೇ ಬಿಗ್‌ ಆಟ ನಡೆಯುವ ಸಾಧ್ಯತೆ ದಟ್ಟವಾಗಿದೆ. ನೇರವಾಗಿ ಸೀಸನ್‌ 10ನ್ನು ಆರಂಭಿಸಲು ಕಲರ್ಸ್‌ ಕನ್ನಡ ವಾಹಿನಿ ತೆರೆಮರೆಯಲ್ಲಿ ಪ್ಲಾನ್‌ ಮಾಡಿದೆ.

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿಯೂ ಯಾರೆಲ್ಲ ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಸದ್ಯ ವಾಹಿನಿ ತನ್ನ ಇಡೀ ಗಮನವನ್ನು ಅನುಬಂಧ ಅವಾರ್ಡ್‌ ಕಡೆ ನೆಟ್ಟಿದೆ. ಅದು ಮುಗಿಯುತ್ತಿದ್ದಂತೆ, ಅಂದರೆ, ಸೆಪ್ಟೆಂಬರ್‌ ಕೊನೇ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಬಿಗ್‌ಬಾಸ್‌ ಶುರುವಾಗುವ ಸಾಧ್ಯತೆ ಇದೆ. ಇನ್ನು ಬಿಗ್ಬಾಸ್ ಮನೆಯನ್ನು ಪ್ರವೇಶಿಸುವವರ ಲಿಸ್ಟ್ ಅಲ್ಲಿ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಭೂಮಿಕಾ ಬಸವರಾಜ್‌. 

ನಾಗಿಣಿ ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ.ಹುಚ್ಚ ಸೇರಿ ಹಲವು ಕನ್ನಡ ಸೇರಿ ಪರಭಾಷಾ ಸಿನಿಮಾಗಳಲ್ಲಿ ನಟಿಸಿದ ನಟಿ ರೇಖಾ. ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ವರ್ಷ ಕಾವೇರಿ. ಕಿರುತೆರೆ ನಟ ರಾಜೇಶ್‌ ಧ್ರುವ. ಶನಿ ಸೀರಿಯಲ್‌ ಖ್ಯಾತಿಯ ಸುನೀಲ್‌ ಭಾಗವಹಿಸುತ್ತಾರೆ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.